
ಮೈಸೂರು: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಮರಾಜನಗರ ವಿಭಾಗದ ಗುಂಡ್ಲುಪೇಟೆ ಘಟಕದ ಚಾಲಕರೊಬ್ಬರ ತಂದೆ ಅನಾರೋಗ್ಯಕ್ಕೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್‌ಆಗಿ 11ದಿನ ಕಳೆದರೂ ಸಂಬಂಧಪಟ್ಟ ನಿಮದ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆ ಬಳಿಕ ಅಂದರೆ ಮಾ.13ರಂದು ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ ಎಂದು ಅವರನ್ನು ಡಿಸ್ಚಾರ್ಜ್‌ಮಾಡಲು ವೈದ್ಯರು ಮುಂದಾಗಿದ್ದಾರೆ. ಆದರೆ, ಕೆಎಸ್‌ಆರ್‌ಟಿಸಿ ನಿಗಮದಿಂದ ಚಿಕಿತ್ಸೆ ನೀಡಿರುವ ಆಸ್ಪತ್ರೆಗೆ ಹಣ ಪಾವತಿಸುವ ಸಂಬಂಧ ಯಾವುದೆ ಖಾತರಿ ಈವರೆಗೂ ಅಂದರೆ ಮಾ.15ರ ಸಂಜೆ 6ಗಂಟೆ ವರೆಗೂ ಬರದಿರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್‌ಮಾಡುತ್ತಿಲ್ಲ.
ಜತೆಗೆ ಒಳರೋಗಿ ಆಗಿ ಚಿಕಿತ್ಸೆ ಪಡೆಯುತ್ತಿರುವ ರಾಜೇಗೌಡ ಅವರಿಗೆ ಮಾ.12ರ ಬಳಿಕ ಯಾವುದೇ ಚಿಕಿತ್ಸಾ ಸೌಲಭ್ಯ ಕೊಡದೆ ಆಸ್ಪತ್ರೆ ಸಿಬ್ಬಂದಿಗಳು ಮತ್ತು ವೈದ್ಯರು ಒಂದು ರೀತಿ ಅಸಡ್ಡೆಯಾಗಿ ನೋಡುತ್ತಿದ್ದಾರೆ. ಹೀಗಾಗಿ ಕಳೆದ 4 ದಿನಗಳಿಂದಲೂ ರಾಜೇಗೌಡ ಅವರ ವಯಸ್ಸಾದ ಪತ್ನಿ ಆಸ್ಪತ್ರೆಯ ಹೊರಗಡೆಯಿಂದ ತಿಂಡಿ ಊಟ ತಂದು ಕೊಡುತ್ತಿದ್ದಾರೆ.
ಇನ್ನು ತಿಂಡಿ, ಊಡ ಕೊಡದಿದ್ದರೆ ಇರಲಿ ಆದರೆ ಅವರಿಗೆ ಯಾವುದೇ ಚಿಕಿತ್ಸೆಯನ್ನು ಕೊಡದೆ ಆಸ್ಪತ್ರೆಯ ಬೆಡ್‌ಅನ್ನೇ ಒಂದು ರೀತಿ ಜೈಲಾಗಿಸಿಕೊಂಡು ಇಟ್ಟುಕೊಂಡಿದ್ದಾರೆ. ಇತ್ತ ಡಿಸ್ಚಾರ್ಜ್‌ಕೂಡ ಮಾಡುತ್ತಿಲ್ಲ. ಜತೆಗೆ ಚಿಕಿತ್ಸೆಯನ್ನೂ ನೀಡುತ್ತಿಲ್ಲ ಎಂದು ಮೈಸೂರು ವಿಭಾಗದ ಸಂಘಟನೆ ಮುಖಂಡರೊಬ್ಬರು ತಿಳಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಸಂಬಂಧಪಟ್ಟ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಹಾಗೂ ಕಾರ್ಮಿಕ ಕಲ್ಯಾಣಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು ಅವರು ಕೂಡ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇವರು ಕೂಡ ಈರೀತಿ ಅಸಡ್ಡೆ ಮಾಡುತ್ತಿರುವುದರಿಂದ ರೋಗಿಗೆ ಏನಾದರೂ ಅಪಾಯವಾದರೆ ಇದರ ಹೊಣೆಯನ್ನು ಯಾರು ಹೊರುತ್ತಾರೆ?
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಸಮಯಕ್ಕೆ ಸರಿಯಾಗಿ ಬಿಲ್‌ಪಾವತಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇತ್ತ ಚಿಕಿತ್ಸೆಯೂ ಇಲ್ಲ. ಅತ್ತ ಒಳರೋಗಿಯಾಗಿದ್ದಷ್ಟು ದಿನ ಇನ್ನಷ್ಟು ಹಣ ವ್ಯರ್ಥವಾಗಿ ಆಸ್ಪತ್ರೆಗೆ ಭರಿಸಬೇಕಾಗುತ್ತದೆ. ಇದರಿಂದ ಯಾರಿಗೆ ಲಾಭ ಎಂದು ಸಂಘಟನೆ ಮುಖಂಡರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಸಂಸ್ಥೆಯ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್‌ಅವರನ್ನು ವಿಜಯಪಥ ವರದಿಗಾರರು ಸಂಪರ್ಕಿಸಿದಾಗ ಅವರು, ವಿಷಯ ನಮ್ಮ ಗಮನಕ್ಕೂ ಬಂದಿದೆ. ನಾವು ಕೂಡ ಕಾರ್ಮಿಕ ಕಲ್ಯಾಣಾಧಿಕಾರಿಗಳು ಹಾಗೂ ಸಂಸ್ಥೆಯ ಕೇಂದ್ರ ಕಚೇರಿಯ ಅಧಿಕಾರಿಗಳ ಜತೆಗೆ ಮಾತನಾಡಿದ್ದು, ಅವರು ಇಂದೇ ಎಲ್ಲ ರೀತಿಯ ವ್ಯವಸ್ಥೆ ಮಾಡಲಿದ್ದು ಇಂದೆ ಡಿಸ್ಚಾರ್ಜ್‌ಮಾಡಲಿದ್ದಾರೆ ಎಂದು ತಿಳಿಸಿದರು. ಆದರೆ ಈಗಾಗಲೇ ಸಂಜೆ 6.18 ಗಂಟೆ ಆಗಿರುವುದದಿಂದ ಇವತ್ತಿಲ್ಲ ಎಂದರೆ ನಾಳೆ ಮಾಡಬಹುದು ಎಂದು ತಿಳಿಸಿದರು.
ಇನ್ನು ಸಾರಿಗೆ ನಿಗಮದ ನೌಕರರು ಹಾಗೂ ಅವರ ಅವಲಂಬಿತರು ಅನಾರೋಗ್ಯಕ್ಕೆ ಈಡಾದರೆ ನಗದು ರಹಿತವಾಗಿ ಚಿಕಿತ್ಸೆ ಕೊಡಿಸಬೇಕು ಎಂದು 6ನೇ ಜನವರಿ 2025ರಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿರುವ ಈ ನಗದು ರಹಿತ ಚಿಕಿತ್ಸೆಗೆ ಆಗಾಗ ಗ್ರಹಣ ಹಿಡಿಯುತ್ತಿದ್ದು ಇದರಿಂದ ಕೆಲ ಸಿಬ್ಬಂದಿಗಳು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಇನ್ನಾದರೂ ಈ ರೀತಿ ಆಗದಂತೆ ಸಂಸ್ಥೆಯ ಎಂಡಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.