ನಮ್ಮಜಿಲ್ಲೆನಮ್ಮರಾಜ್ಯ

KSRTC: ಡ್ಯೂಟಿರೋಟ ಪದ್ಧತಿ ಜೇಷ್ಠತೆ ಆಧಾರದ ಮೇಲಾಗುತ್ತಿಲ್ಲ- ಎಂಡಿಗೆ ಲಿಖಿತ ದೂರು

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ತುಮಕೂರು ವಿಭಾಗದ ಕೆಲವು ಘಟಕಗಳಲ್ಲಿ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಡ್ಯೂಟಿರೋಟ ಪದ್ಧತಿಯನ್ನು ಜೇಷ್ಠತೆಯ ಆಧಾರದ ಮೇಲೆ ಮಾಡುತ್ತಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಎಸ್.ಎಲ್.ಲೋಕೇಶ್ ಲಿಖಿತ ದೂರು ನೀಡಿದ್ದಾರೆ.

ಈ ಸಂಬಂಧ ಶನಿವಾರ ದೂರು ನೀಡಿರುವ ಲೋಕೇಶ್‌, ತುಮಕೂರು ವಿಭಾಗದಲ್ಲಿ ಏಳು ಘಟಕಗಳ ಪೈಕಿ ಶಿರ ಹಾಗೂ ಮಧುಗಿರಿಯಲ್ಲಿ ಕೇಂದ್ರ ಕಚೇರಿ ಆದೇಶದ ಅನ್ವಯ ಜೇಷ್ಠತೆ ಆಧಾರದ ಮೇಲೆ ಡ್ಯೂಟಿರೋಟ ಪದ್ಧತಿಯನ್ನು ಜನವರಿಯಿಂದ ಜಾರಿಗೆ ತಂದಿದ್ದಾರೆ. ಆದರೆ ಉಳಿದ ಘಟಕಗಳಲ್ಲಿ ಚಾಲನಾ ಸಿಬ್ಬಂದಿಗಳಿಗೆ ಸಂಚಾರ ಶಾಖೆಯಲ್ಲಿ ಇರುವ ಸಿಬ್ಬಂದಿಗಳು ಹಲವಾರು ಕಾರಣಗಳನ್ನು ಹೇಳಿಕೊಂಡು ಡ್ಯೂಟಿರೋಟ ಪದ್ಧತಿಯ ಕೌನ್ಸಿಲಿಂಗ್ ಮಾಡುವುದನ್ನು ಮುಂದೂಡುತ್ತಾ ಬಂದಿದ್ದಾರೆ.

ಕೆಲವು ಘಟಕಗಳಲ್ಲಿ ಬಿಎಂಟಿಸಿ ಇಂದ ಕೆಲವು ಸಿಬ್ಬಂದಿಗಳು ವರ್ಗಾವಣೆಯಾಗಿ ಬರುವುದಿದೆ ಅವರು ಬಂದ ನಂತರ ಮಾಡುತ್ತೇವೆ ಎಂದು ಇನ್ನೂ ಕೆಲವು ಘಟಕಗಳಲ್ಲಿ ನಮ್ಮನ್ನು ನೀವು ಕೇಳಬೇಡಿ ವಿಭಾಗಿಯ ಸಂಚಲನಾಧಿಕಾರಿಗಳನ್ನು ಕೇಳಿ ಎಂದು ಮತ್ತೆ ಕೆಲವು ಘಟಕಗಳಲ್ಲಿ, ಈ ವಾರ ಮುಂದಿನ ವಾರ ಎಂದು ಸಬೂಬು  ಹೇಳುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಮುಖ್ಯವಾಗಿ ಸಂಚಾರ ಶಾಖೆಯ ಅಧಿಕಾರಿಗಳಿಗೆ ಕೆಲವು ಚಾಲನೆ ಸಿಬ್ಬಂದಿಗಳು ಹೊಂದಾಣಿಕೆಯ ಕಾರಣದಿಂದ ಹಣ ನೀಡಿ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಅವರ ಅನುಕೂಲಕ್ಕಾಗಿ ಡ್ಯೂಟಿರೋಟ ಪದ್ದತಿ ಮಾಡುವುದನ್ನು ಮುಂದೂಡುತ್ತ ಬಂದಿದ್ದಾರೆ.

ತಿಪಟೂರು ಘಟಕದಲ್ಲಿ 2024ರಲ್ಲಿ ಆದಂತ ಡ್ಯೂಟಿರೋಟ ಪದ್ಧತಿಯ ಆಯ್ಕೆ ಮಾಡಿಕೊಂಡ ಶೇಕಡ 50ಕ್ಕೂ ಹೆಚ್ಚು ಸಿಬ್ಬಂದಿಗಳು ಆ ಮಾರ್ಗಗಳಲ್ಲಿ ಡ್ಯೂಟಿ ಮಾಡದೆ ಸಂಚಾರ ಶಾಖೆಯವರ ನಡುವೆ ಹಣದ ಹೊಂದಾಣಿಕೆಯ ಕಾರಣದಿಂದ ಹೆಚ್ಚು ರೂಟ್‌ಗಳನ್ನು ಹಾಗೂ ರಿಟರ್ನ್ ರೂಟ್‌ಗಳನ್ನು ಅತಿ ಹೆಚ್ಚು ಹಣ ನೀಡಿ ಮಾಡುವಂತ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಸೇವಾ ಹಿರಿತನದ ನೌಕರರಿಗೆ ಮಾರ್ಗಗಳು ದೊರೆಯುತ್ತಿಲ್ಲ. ಮುಖ್ಯವಾಗಿ ಎಲ್ಲ ಘಟಕಗಳಲ್ಲಿಯೂ ಹಿರಿಯ ಸಿಬ್ಬಂದಿಗಳಿಗೆ ಹೆಚ್ಚಿನ ತೊಂದರೆ ಇದ್ದು ಇತ್ತೀಚಿಗೆ ಬಂದಂತಹ ಕಿರಿಯ ಸಿಬ್ಬಂದಿಗಳು ಸಂಚಾರ ಶಾಖೆಯವರಿಗೆ ಹಣ ನೀಡಿ ಹಿರಿಯ ಸಿಬ್ಬಂದಿಗಳನ್ನು ಕಡೆಗಣನೆ ಮಾಡಿದ್ದಾರೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ಘಟಕಗಳಿಗೆ ಪ್ರತಿ ತಿಂಗಳು ಆಗಮಿಸುವ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳಿಗೆ ಎಲ್ಲ ಘಟಕಗಳಲ್ಲಿಯೂ ಸಿಬ್ಬಂದಿಗಳು ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಅಧಿಕಾರಿಗಳು ಸಂಚಾರ ಶಾಖೆಯವರಿಂದ ಪ್ರತಿ ತಿಂಗಳು ಮಾಮೂಲಿ ಪಡೆಯುವ ಕಾರಣಕ್ಕಾಗಿಯೇ ಡ್ಯೂಟಿರೋಟ ಪದ್ಧತಿ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸೇವಾ ಹಿರಿತನದ ಚಾಲನೆ ಸಿಬ್ಬಂದಿಗಳಿಗೆ ಘಟಕಗಳಲ್ಲಿ ಕೆಲಸ ನಿರ್ವಹಿಸುವಂತಹ ವಾತಾವರಣ ಇಲ್ಲವಾಗಿದೆ. ಪ್ರತಿ ಸಿಬ್ಬಂದಿಯೂ ಸಹ ಘಟಕದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣದಲ್ಲಿಯೇ ಕೆಲಸ ನಿರ್ವಹಿಸಲು ಹೋಗುವ ಕಾರಣದಿಂದ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ.

ಈ ಅಂಶಗಳನ್ನು ಹಾಗೂ ಕಾರಣಗಳನ್ನು ಪರಿಶೀಲಿಸಿ, ತುಮಕೂರು ವಿಭಾಗದ ಅಧಿಕಾರಿಗಳಿಗೆ ಚಾಲನಾ ಸಿಬ್ಬಂದಿಗಳಿಗೆ ಅನುಕೂಲಕರ ವಾಗುವ ರೀತಿಯಲ್ಲಿ ಡ್ಯೂಟಿರೋಟ ಪದ್ಧತಿಯನ್ನು ಈ ಕೂಡಲೇ ತತಕ್ಷಣಕ್ಕೆ ಜಾರಿಗೆ ಬರುವಂತೆ ಮಾಡಲು ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಬೇಕೆಂದು ಹಾಗೂ ಈ ಪದ್ದತಿಯನ್ನು ಅನುಷ್ಠಾನಗೊಳಿಸಲು ತಡ ಮಾಡುತ್ತಿರುವಂತಹ ಪ್ರತಿ ಘಟಕದ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯ ಇನ್ಸ್ಪೆಕ್ಟರ್ ಗಳಿಗೆ ಸೂಕ್ತ ರೀತಿಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು?