ರಾಯಚೂರು: ಲಕ್ಕಂದಿನ್ನಿಯಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ಸೊಸೆ ಕೆರೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದು, ಆಕೆಯ ರಕ್ಷಣೆಗೆ ಮುಂದಾದ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಧಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಜಿಲ್ಲೆಯ ಸಿರವಾರ ಪಟ್ಟಣದ ಹೊರವಲಯದ ಜಮೀನು ಒಂದರಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಪಟ್ಟಣದ ನಿವಾಸಿ ಶಿವಕುಮಾರ ಎನ್ನುವರ ಜಮೀನು ಸರ್ವೆ ನಂಬರ್ 69ರ ಕೆರೆಯಲ್ಲಿ ಘಟನೆ ನಡೆದಿದೆ. ಸಿರವಾರ ತಾಲೂಕಿನ ಲಕ್ಕಂದಿನ್ನಿ ಗ್ರಾಮದ ನಿವಾಸಿಗಳಾದ ಮುದುಕಪ್ಪ (60), ಶಿವು ಕುಮಾರ್(23), ಬಸವರಾಜ (20) ಮೃತಪಟ್ಟವರು. ಆತ್ಮಹತ್ಯೆಗೆ ಯತ್ನಿಸಿದ ಸೊಸೆ ಮಾಯಮ್ಮ ಮಾವನಿಂದ ರಕ್ಷಣೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಘಟನೆ ವಿವರ: ಲಕ್ಕಂದಿನ್ನಿ ಮೂಲದವರು ಈ ಕುಟುಂಬ, ಹಲವು ವರ್ಷಗಳಿಂದ ಶಿವಕುಮಾರ ಎನ್ನುವರ ಹೊಲದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಮುದುಕಪ್ಪ ಅವರ ಇಬ್ಬರು ಗಂಡು ಮಕ್ಕಳಲ್ಲಿ ಶಿವಕುಮಾರ ಹಿರಿಯ ಮಗ, ಬಸವರಾಜ ಕಿರಿಯ ಮಗ. ಈ ಇಬ್ಬರ ಮಕ್ಕಳಲ್ಲಿ ಬಸವರಾಜ ಮಾಯಮ್ಮ ಎನ್ನುವಕೆಯನ್ನು ಕೆಲ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ.
ಇಂದು ಹಣದ ವಿಚಾರಕ್ಕೋ ಅಥವಾ ಕೌಟುಂಬಿಕ ಕಲಹದಿಂದಾಗಿಯೋ ಮಾಯಮ್ಮ ಕೆರೆಗೆ ಹಾರಿದ್ದಾಳೆ. ಆಗ ಮಾವ ಮುದುಕಪ್ಪ ರಕ್ಷಣೆ ಮಾಡಲು ಮುಂದಾಗಿ ಕೆರೆಗೆ ಹಾರಿ ಸೊಸೆಯನ್ನು ರಕ್ಷಣೆ ಕೂಡ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ. ಈ ವೇಳೆ ಆಕೆ ರಕ್ಷಣೆಗೆಂದು ಕೆರೆಗೆ ಹಾರಿದ್ದ ಪುತ್ರರ ರಕ್ಷಣೆಗೂ ಮುಂದಾದ ಮುದುಕಪ್ಪ.
ಆದರೆ ಮಕ್ಕಳಿಬ್ಬರ ರಕ್ಷಣೆ ಮಾಡುವುದಕ್ಕೆ ಹೋದರು. ಈ ವೇಳೆ ಒಬ್ಬ ಮಗನಿಗೆ ಈಜು ಬರುತ್ತಿರಲಿಲ್ಲ, ಮತ್ತೊಬ್ಬ ಮಗನಿಗೆ ಮೂರ್ಛೆ ರೋವಿತ್ತು ಎನ್ನಲಾಗುತ್ತಿದೆ. ಇದರ ಪರಿಣಾಮದಿಂದಾಗಿ ರಕ್ಷಣೆ ಸಾಧ್ಯವಾಗದೆ ತಂದೆ ಹಾಗೂ ಮಕ್ಕಳಿಬ್ಬರು ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ಮೂವರು ನೀರನಲ್ಲಿ ಮುಳುಗಿ ಸ್ವಾನ್ನಪ್ಪಿದ್ದು, ಕುಟುಂಬದ ಕಲಹ ಸಾವಿನಲ್ಲಿ ಅಂತ್ಯವಾದಂತಾಗಿರುವುದು ದೊಡ್ಡ ದುರುಂತವೇ ಸರಿ. ಅಲ್ಲದೆ ಜಗಳದಿಂದಾಗಿ ಇತ್ತ ಸೊಸೆ ಮಾವ(ಪತಿಯ ತಂದೆ), ಪತಿ ಹಾಗೂ ಭಾವನನ್ನು ಕಳೆದುಕೊಂಡು ಈಗ ದಿಕ್ಕು ತೋಚದಂತೆ ಮಾಯಮ್ಮ ಕಂಗಾಲಾಗಿದ್ದಾಳೆ.
ವಿಷಯ ತಿಳಿದ ಅರಕೇರಾ ಅಗ್ನಿಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಮೂವರು ಮೃತಪಟ್ಟಿದ್ದು, ಆ ಮೃತ ದೇಹಗಳನ್ನು ಸಿಬ್ಬಂದಿ ಮೇಲೆತ್ತಿದ್ದಾರೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.