NEWSಆರೋಗ್ಯನಮ್ಮಜಿಲ್ಲೆ

ನಿವೃತ್ತ ಸಿಬ್ಬಂದಿಯ ಗ್ರಾಚ್ಯುಟಿ ಹಣ: ಶೇ.10ರಷ್ಟು ಬಡಿ ಸಹಿತ ಪಾವತಿಸಲು ಹೈಕೋರ್ಟ್ ಆದೇಶ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ನಿವೃತ್ತ ಉದ್ಯೋಗಿ ಯೋರ್ವರಿಗೆ ಶೇ.10ರಷ್ಟು ಬಡ್ಡಿ ಸಮೇತ 4,09,550 ರೂಪಾಯಿ ಗ್ರಾಚ್ಯುಟಿ ಹಣವನ್ನು ಪಾವತಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿರುವ ಹೈಕೋರ್ಟ್‌ ಇಲಾಖೆಯ ಅಧಿಕಾರಿಗಳ ನಡೆಗೆ ಕೆಂಡಮಂಡಲವಾಯಿತು.

2007, ಮಾ.31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ಬಾಬು ಎಂಬವರು ಗ್ರಾಚ್ಯುಟಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಈ ಆದೇಶ ಮಾಡಿದೆ.

ಈ ಆದೇಶ ಪತ್ರ ರವಾನೆಯಾದ ದಿನದಿಂದ 10 ದಿನಗಳ ಒಳಗೆ ಅರ್ಜಿದಾರರಿಗೆ ಗ್ರಾಚ್ಯುಟಿ ಪಾವತಿ ಯಾಗದೇ ಇದ್ದಲ್ಲಿ, ಶೇ.10ರಷ್ಟು ಬಡ್ಡಿಯ ಜತೆಗೆ, ವಿಳಂಬವಾಗಿ ಹಣ ನೀಡುವ ದಿನದವರೆಗೂ ಪ್ರತಿ ದಿನವೂ ಸಾವಿರ ರೂ. ಸೇರಿಸಿ ಸಂತ್ರಸ್ತರಿಗೆ ಗ್ರಾಚ್ಯುಟಿ ಹಣ ನೀಡಬೇಕಾಗುತ್ತದೆ ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ.

ಗ್ರಾಚ್ಯುಟಿಯು ಉದ್ಯೋಗದಾತರ ಮನಸೋ ಇಚ್ಛೆ ಮೇರೆಗೆ ತಡೆಹಿಡಿಯಬಹುದಾದ ವರದಾನವಲ್ಲ, ಸಂತ್ರಸ್ತ ವ್ಯಕ್ತಿಗೆ ಉದ್ಯೋಗ ನೀಡಿರುವುದು ಕರ್ನಾಟಕ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಾರ್ಯದರ್ಶಿಯಾಗಿದ್ದಾರೆ.

16 ವರ್ಷಗಳ ಕಾಲ ಗ್ರಾಚ್ಯುಟಿ ನೀಡದೇ ಸರ್ಕಾರ ತನ್ನ ನೌಕರನನ್ನು ನಡೆಸಿಕೊಂಡಿರುವುದು ನಾಗರಿಕರೆಡೆಗೆ, ಅದರಲ್ಲೂ ನಿವೃತ್ತರಾದ ನಾಗರಿಕರೆಡೆಗೆ ಸರ್ಕಾರದ ನಿರಾಸಕ್ತಿ ತೋರುತ್ತದೆ. ಹೀಗಾಗಿ, ಗ್ರಾಚ್ಯುಟಿ ನಿರಾಕರಿಸುವ ಮೂಲಕ ನಿಷ್ಟುರತೆಯನ್ನು ಪ್ರದರ್ಶಿಸಲಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು 1973ರಲ್ಲಿ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸವಾನಂತರದ ಕೇಂದ್ರದಲ್ಲಿ ಮೊದಲ ವಿಭಾಗದ ಗುಮಾಸ್ತ (ಎಫ್‌ಡಿಎ)ರಾಗಿ ನೇಮಕಗೊಂಡಿದ್ದರು. 34 ವರ್ಷಗಳ ಸೇವೆ ನಂತರ ಅವರು ನಿವೃತ್ತರಾಗಿದ್ದು, ಗ್ರಾಚ್ಯುಟಿ ಬಾರದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...