NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ₹126 ಉಚಿತ ಟಿಕೆಟ್‌ ತೆಗೆದು ಕೊಂಡಿದ್ದು ಧರ್ಮಸ್ಥಳಕ್ಕೆ ಆದರೆ ಇಳಿದಿದ್ದು ಮಾರ್ಗಮಾಧ್ಯೆ- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ!!

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಧರ್ಮಸ್ಥಳಕ್ಕೆ ಟಿಕೆಟ್‌ ತೆಗೆದುಕೊಂಡಿರುವ ಮಹಿಳೆಯೊಬ್ಬರು ಮಾರ್ಗಮಧ್ಯದಲ್ಲೇ ಇಳಿದು ಹೋಗುತ್ತಿದ್ದಾರೆ. ಈ ವೇಳೆ ನಿರ್ವಾಹಕರು ನೀವು ಮಾರ್ಗ ಮಧ್ಯೆ ಇಳಿದು ಹೋಗಲು ಸಾಧ್ಯವಿಲ್ಲ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಎಷ್ಟೇ ಹೇಳಿದಕ್ಕೆ ಆ ಮಹಿಳೆ ಜೆತೆಗೆ ಅವರ ಸಂಬಂಧಿಗಳೂ ನಿರ್ವಾಹಕರ ಜತೆಗೆ ವಾಗ್ವಾದಕ್ಕೆ ಇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಅದನ್ನು ಸರಿಯಾದ ನಿಟ್ಟಿನಲ್ಲಿ ಜಾರಿಗೆ ತರದೆ ಚಾಲಕ ಮತ್ತು ನಿರ್ವಾಹಕರನ್ನು ಬಲಿಪಶು ಮಾಡಲಾಗುತ್ತಿದೆ.

ಇತ್ತ ಚಾಲನಾ ಸಿಬ್ಬಂದಿಗೆ ನಿಗಮಗಳ ಕೊಡುತ್ತಿರುವ ಶಿಕ್ಷೆಗಳ ಬಗ್ಗೆ ಪ್ರಯಾಣಿಕರಿಗೆ ಅರ್ಥವಾಗುತ್ತಿಲ್ಲ. ಅತ್ತ ನಿಗಮಗಳ ಅಧಿಕಾರಿಗಳಿಗೂ ಇದು ಅರ್ಥವಾಗುತ್ತಿಲ್ಲ. ಇದರಿಂದ ಚಾಲನಾ ಸಿಬ್ಬಂದಿ ಇತ್ತ ದರಿ ಅತ್ತ ಪುಲಿ ಎಂಬಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಅದೇ ರೀತಿ ಇಲ್ಲೊಬ್ಬ ಮಹಿಳೆ 126 ರೂ. ಮೌಲ್ಯದ ಟಿಕೆಟ್‌ ಅನ್ನು ಧರ್ಮಸ್ಥಳಕ್ಕೆ ಎಂದು ಹೇಳಿ ತೆಗೆದುಕೊಂಡಿದ್ದಾರೆ. ನಿರ್ವಾಹಕರು ಟಿಕೆಟ್‌ ಕೊಟ್ಟು ಆಗಿದೆ. ಆದರೆ, ಆಕೆ ಮಾರ್ಗ ಮಧ್ಯೆ ಬಸ್‌ ಇಳಿದು ಹೋಗಲು ಸಿದ್ಧರಾಗಿದ್ದಾರೆ. ಅದನ್ನು ಗಮನಿಸಿದ ನಿರ್ವಾಹಕ ಮತ್ತು ಚಾಲಕರು ಅವರಿಗೆ ನಿಗಮದಲ್ಲಿ ತಮಗೆ ಆಗುವ ಶಿಕ್ಷೆ ಬಗ್ಗೆ ಹೇಳಿ ಇಲ್ಲಿ ಇಳಿಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಆದರೆ, ಆ ಮಹಿಳೆಯ ಸಂಬಂಧಿಕರು ಬಸ್‌ ನಿಲ್ದಾಣಕ್ಕೆ ಬಂದು ಚಾಲನಾ ಸಿಬ್ಬಂದಿಯ ಮೇಲೆ ಮುಗಿ ಬೀಳುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಹೇಳಿದರು, ಆ ಪ್ರಯಾಣಿಕ ಮಹಿಳೆಯ ಸಂಬಂಧಿಕರಿಗೆ ಅರ್ಥವಾಗುವುದೇ ಇಲ್ಲ. ಈ ಬಗ್ಗೆ ಕೆಲ ಪ್ರಯಾಣಿಕರು ಅರ್ಥ ಮಾಡಿಸುವುದಕ್ಕೆ ಪ್ರಯತ್ನ ಪಡುತ್ತಾರೆ.

ಆದರೂ ಅವರಿಗೆ ಅರ್ಥವಾಗಲೇ ಇಲ್ಲ. ಮಹಿಳೆಯನ್ನು ಧರ್ಮಸ್ಥಳದಲ್ಲಿ ಇಳಿಸಿದರೆ, ಮತ್ತೆ ಅವರು ಇಲ್ಲಿಗೆ ವಾಪಸ್‌ ಬರಬೇಕು. ಇದು ಯಾವ ನ್ಯಾಯ ಎಂದು ಚಾಲನಾ ಸಿಬ್ಬಂದಿಗಳು ಮತ್ತು ಸಲಹೆ ನೀಡಲು ಬಂದ ಪ್ರಯಾಣಿಕರನ್ನೇ ಪ್ರಶ್ನಿಸುತ್ತಿದ್ದಾರೆ.

ಇದು ಯಾವ ರೀತಿ ಇದೆ ಎಂದರೆ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಸರ್ಕಾರ ರಾಜ್ಯದ ಮಹಿಳೆಯರ ಪರ ಇದ್ದೇವೆ ಎಂಬುದನ್ನು ತೋರಿಸಲೂ ಬೇಕು. ಜತೆಗೆ ಚಾಲನಾ ಸಿಬ್ಬಂದಿಗೂ ಕಿರುಕುಳ ನೀಡಿ ಅವರನ್ನು ಅಮಾನತು ಶಿಕ್ಷೆಗೆ ಒಳಪಡಿಸಲೂ ಬೇಕು ಎಂಬಂತಿದೆ. ಇನ್ನು ಚಾಲನಾ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ನಡುವೆ ಜಗಳ ತಂದುಹಾಕಿ ನೋಡುತ್ತಿರಬೇಕು ಅನ್ನುವಂತಲೂ ಇದೆ.

ಇಲ್ಲಿ ಪ್ರಯಾಣಿಕರು ತಪ್ಪು ಮಾಡಿದರೂ ಶಿಕ್ಷೆ ಮಾತ್ರ ಚಾಲನಾ ಸಿಬ್ಬಂದಿಗೆಯೇ ನೀಡುವುದು. ಇದನ್ನು ಪ್ರಯಾಣಿಕರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತ ಭ್ರಷ್ಟ ಅಧಿಕಾರಿಗಳು ಮತ್ತು ಸರ್ಕಾರಕ್ಕೂ ಅರ್ಥ ಆಗುತ್ತಿಲ್ಲ ಒಟ್ಟಾರೆ ಚಾಲನಾ ಸಿಬ್ಬಂದಿ ಮಾತ್ರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೇ ಸಾಧ್ಯವಿಲ್ಲದ ಸಂದರ್ಭಗಳನ್ನು ಸೃಷ್ಟಿಸಿ ನೋಡುತ್ತಿದೆ ಈ ಸರ್ಕಾರ ಎಂಬುವುದರಲ್ಲಿ ಎರಡು ಮಾತಿಲ್ಲ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...