NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೆಲ ನೌಕರರ ನಿಂದನೆ, ಅವಮಾನದಿಂದ ನೊಂದು ನೌಕರರ ಪ್ರಕರಣಗಳಿಂದ ಹಿಂದೆ ಸರಿದ ವಕೀಲ ಶಿವರಾಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಪರವಾಗಿ ರಾಜ್ಯ ಹೈ ಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಉಚಿತವಾಗಿ ವಕಾಲತ್ತು ವಹಿಸಿರುವ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರನ್ನು ಕೆಲ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಅವಮಾನಿಸಿರುವುದಕ್ಕೆ ಮನನೊಂದು ನೌಕರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇನ್ನು ಮುಂದೆ ಭಾಗಿಯಾಗದಿರಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದು, ನಾವು ಉಚಿತವಾಗಿ ಹಲವಾರು ನೌಕರರ ಪ್ರಕರಣಗಳನ್ನು ನಡೆಸಿಕೊಟ್ಟಿದ್ದೇವೆ. ಆದರೆ, ಹೈ ಕೋರ್ಟ್‌ನ 5 ಪ್ರಕರಣಗಳಿಗೆ ಕೋರ್ಟ್‌ನ ಖರ್ಚನ್ನು ಕಕ್ಷಿದಾರರೆ ನೋಡಿಕೊಂಡಿದ್ದಾರೆ. ಇನ್ನು ಕೆಳ ಹಂತದ ನ್ಯಾಯಾಲಯದಲ್ಲಿ ಅವರಿಂದ ಒಂದೇ ಒಂದು ರೂಪಾಯಿಯನ್ನು ಪಡೆದಿಲ್ಲ. ಇದರ ಜತೆಗೆ ಅವರ ಏಳಿಗೆಗಾಗಿ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘವನ್ನು ಕಳೆದ ಎರಡು ವರ್ಷದ ಹಿಂದೆ ಸ್ಥಾಪಿಸಿ ಅದಕ್ಕೆ ಅಧ್ಯಕ್ಷರು ಮತ್ತು ಸಂಬಂಧಿಸಿದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪ್ರಸ್ತುತ ಈ ಕ್ಷೇಮಾಭಿವೃದ್ಧಿ ಸಂಘದಲ್ಲಿ 21 ಲಕ್ಷ ರೂಪಾಯಿ ಇದೆ. ನೌಕರರ ಹಣ ದುರುಪಯೋಗವಾಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಜತೆಗೆ ಸಮಸ್ಯೆಗೆ ಸಿಲುಕಿದ ನೌಕರರ ಪರ ನಿಂತು ಕಾನೂನು ಹೋರಾಟ ಮಾಡಿದ್ದೇವೆ. ಈಗಲೂ ಉಚಿತವಾಗಿ ಹಲವಾರು ನೌಕರರ ಪ್ರಕಣಗಳನ್ನು ನಡೆಸುತ್ತಿದ್ದೇವೆ. ಇದಾವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲ ನೌಕರರು ನಮ್ಮ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಎಲ್ಲವನ್ನು ಗಮನಸಿ ನಮಗೆ ನೌಕರರ ಸಹವಾಸ ಸಾಕು. ಅವರಿಗೆ ಅನುಕೂಲ ಮಾಡಿಕೊಡುವ ಜನರೊಂದಿಗೆ ಅವರು ಹೋಗಲಿ. ನಮಗೂ ಸುಪ್ರೀಂ ಮತ್ತು ಹೈ ಕೋರ್ಟ್‌ಗಳಲ್ಲಿ ವಿವಿಧ ಪ್ರಕರಣಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಸಮಯ ಈ ಪ್ರಕರಣಗಳಿಗೆ ಮೀಸಲಿಡಬೇಕಿದೆ. ಹೀಗಾಗಿ ನೌಕರರ ಪರ ವಕಾಲತ್ತು ವಹಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಕಾನೂನು ಸಲಹೆಗಾರರ  ಹುದ್ದೆಗೂ ರಾಜೀನಾಮೆ ಕೊಡುತ್ತೇನೆ. ಕಾರಣ ಅಲ್ಲಿಯೂ ಕೂಡ ನೌಕರರು ಹೇಳಿಕೆ ಮಾತು ಕೇಳಿಕೊಂಡು ಸಮಸ್ಯೆ ನೀಗಿಸುವ ಬದಲು ಹೆಚ್ಚು ಮಾಡುತ್ತಿದ್ದಾರೆ. ಹೀಗಾಗಿ ಮನಸ್ಸಿಗೆ ತುಂಬ ನೋವಾಗುತ್ತಿದೆ. ಆದ್ದರಿಂದ ನಾನೇ ಕಟ್ಟಿದ ಸಂಘವನ್ನು ಇಂದು ತ್ಯೆಜಿಸುವ ಸಮಯ ಬಂದಿದೆ ಎಂದು ಬೇಸರ ಹೊರಹಾಕಿದ್ದಾರೆ.

ಇಲ್ಲಿಯವರೆಗೂ ನಾನು ಹಲವಾರು ನೌಕರರಿಗೆ ಉಚಿತವಾಗಿ ಜಾಮೀನು ಕೊಡಿಸಿದ್ದು, ಯಾವುದೇ ಪ್ರಕರಣದಲ್ಲೂ ಒಂದು ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿಲ್ಲ. ಉಚಿತವಾಗಿ ನನ್ನ ಸೇವೆ ನೀಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ನೌಕರರು ಪ್ರಕರಣಗಳನ್ನು ತಮಗೆ ಇಷ್ಟ ಬಂದ ವಕೀಲರ ಮೂಲಕ ನಡೆಸಿಕೊಳ್ಳಲಿ ಎಂದು ಹೇಳಿದ್ದಾರೆ.

ಇನ್ನು ಕೆಲ ನೌಕರರು ನಮ್ಮ ಪರವಾಗಿರುವ ನೀವು ಸಾರಿಗೆ ಅಧಿಕಾರಿಗಳ ಪ್ರಕರಣದ ವಕಾಲತ್ತು ವಹಿಸಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಲಹೆ ನೀಡುತ್ತಾರೆ. ಆದರೆ, ನಾನೊಬ್ಬ ವಕೀಲ ನನ್ನ ವೃತ್ತಿಯೇ ವಕೀಲ ವೃತ್ತಿ ಇದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡುವುದು. ಅಧಿಕಾರಿಗಳ ಪ್ರಕರಣ ಕೈ ಬಿಟ್ಟರೆ ಅದಕ್ಕೆ ಬೇರೆ ವಕೀಲರನ್ನು ಅವರು ನೋಡಿಕೊಳ್ಳುತ್ತಾರೆ. ಹೀಗೆ ಮಾಡಿದರೆ ನನ್ನ ವೃತ್ತಿಗೆ ನಾನೇ ಅವಮಾನ ಮಾಡಿದಂತೆ ಆಗುವುದಿಲ್ಲವೇ? ಇದು ನೌಕರರಿಗೆ ಅರ್ಥವಾಗುತ್ತಿಲ್ಲ. ಕಾರಣ ಹೇಳಿಕೆ ಮಾತು ಕೇಳುವುದು ಹೆಚ್ಚಾಗಿದೆ.

ನನಗೆ ನೀವು ಇದನ್ನು ಮಾಡಿ ಅದನ್ನು ಮಾಡಬೇಡಿ ಎಂದು ಹೇಳುವುದಕ್ಕೆ ಇವರ‍್ಯಾರು. ಇವರಿಗೆ ಕಾನೂನು ತೊಡಕಾದರೆ ಆ ಸಮಸ್ಯೆ ಬಗ್ಗೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಅದನ್ನು ಬಿಟ್ಟು ಈ ರೀತಿ ನಮಗೆ ಸಲಹೆ ಕೊಡುತ್ತಾರೆ ಎಂದರೆ, ಇದು ಅವರಿಗೆ ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆ ಎಂಬುದನ್ನು ಅವರೇ ಯೋಚನೆ ಮಾಡಲಿ ಎಂದಿದ್ದಾರೆ.

ನೌಕರರಿಗೆ ಸಂಬಂಧಿಸಿದಂತೆ ಹೈ ಕೋರ್ಟ್‌ನಲ್ಲಿ 5 ಕೇಸು ಮತ್ತು ಕೆಳ ಹಂತದ ಕೋರ್ಟ್‌ನಲ್ಲಿ 2 ಪ್ರಕರಣಗಳು ಬಿಟ್ಟರೆ ಇನ್ನು ಯಾವುದೇ ಕೇಸ್‌ಗಳು ಇಲ್ಲ. ಈ ಕೇಸ್‌ಗಳನ್ನು ಹೊರತುಪಡಿಸಿ ಇನ್ನು ನೌಕರರ ಯಾವುದೇ ಕೇಸ್‌ಗಳನ್ನು ಮುಂದಿನ ದಿನಗಳಲ್ಲಿ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ