NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಶಿವಮೊಗ್ಗ ವಿಭಾಗ ಸಂಸ್ಥೆ ವಾಹನ ಸ್ವಂತಕ್ಕೆ ಬಳಕೆ: ಆದರೂ ಅಧಿಕಾರಿ, ಚಾಲಕನ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳ ಹಿಂದೇಟು!

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳು ಸಂಸ್ಥೆಯ ಕೆಲಸದ ವೇಳೆ ಉಪಯೋಗಿಸಬೇಕಾದ ವಾಹನವನ್ನು ತಮ್ಮ ಸ್ವಂತಕ್ಕೆ ಬಳಿಸಿಕೊಳ್ಳುವ ಮೂಲಕ ಅದು ಕೂಡ ಮನೆಗೆ ಕುಡಿಯುವ ನೀರನ್ನು ಈ ವಾಹನದಲ್ಲೇ ತರುವಷ್ಟರ ಮಟ್ಟಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ವಾಹನ ಸಂಖ್ಯೆ ಕೆ.ಎ.57 ಎಫ್-5249 ಈ ವಾಹನವು ಸಾರಿಗೆ ಸಂಸ್ಥೆಯ ವಾಹನವಾಗಿದೆ. ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗಕ್ಕೆ ಸೇರಿದ್ದು, ವಿಭಾಗದ ಅಧಿಕಾರಿಗಳು ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ ಬರುವುದಕ್ಕೆ ನೀಡಿದಂತ ವಾಹನವಾಗಿದೆ.

ಆದರೆ, ಈ ವಾಹನವನ್ನು ಅಧಿಕಾರಿಗಳು ಹಾಗೂ ಈ ಜೀಪಿನ ಚಾಲಕ ಇಬ್ಬರು ತಮ್ಮ ಸ್ವಂತಕ್ಕೆ ಮನಸ್ಸಿಗೆ ಬಂದ ಹಾಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಜೀಪನ್ನು ಅಧಿಕಾರಿಗಳ ತಮ್ಮ ಸ್ವಂತಕ್ಕೆ ಬಳಿಸಿಕೊಳ್ಳುವುದಲ್ಲದೇ, ಈ ಜೀಪೀನ ಚಾಲಕನಿಗೂ ಆತನ ಹೆಂಡತಿ ಮಕ್ಕಳೊಂದಿಗೆ ಶಾಪಿಂಗ್ ಮಾಲ್‌ ಸೇರಿದಂತೆ ಇತರ ಸ್ವಂತಕ್ಕೆ ಉಪಯೋಗಿಸಿಕೊಳ್ಳುವುದಕ್ಕು ಪರೋಕ್ಷವಾಗಿ ಅನುಮತಿ ನೀಡಿದ್ದಾರೆ ಎಂಬ ಆರೋಪವಿದೆ.

ನಿಗಮದ ವಾಹನದಲ್ಲಿ ಅಧಿಕಾರಿಯ ಮಕ್ಕಳು ಮತ್ತು ಚಾಲಕನ ಮಕ್ಕಳನ್ನು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಜೀಪಿನಲ್ಲಿ ರೌಂಡ್ಸ್ ಕರೆದು ಕೊಂಡು ಹೋಗುವುದು ಮಾಡುತ್ತಿದ್ದಾರೆ. ಅಲ್ಲದೆ ಕರ್ತವ್ಯದ ವೇಳೆ ಅಧಿಕಾರಿಗಳನ್ನು ಕಚೇರಿಗೆ ಬಿಟ್ಟು ಊಟ/ ಉಪಾಹಾರಕ್ಕೆ ಮನೆಗೆ ಜೀಪಿನಲ್ಲಿ ಬಂದು ಹೋಗುವುದು ಮಾಡುತ್ತಿದ್ದಾರೆ.

ಹೀಗೆ ಮಾಡುತ್ತಿರುವುದರಿಂದ ಪ್ರತಿ ತಿಂಗಳು ನೂರಾರು ಲೀಟರ್ ಡೀಸೆಲ್ ಈ ಅಧಿಕಾರಿ ಮತ್ತು ಚಾಲಕನ ಕುಟುಂಬದವರಿಗಾಗಿ ಖರ್ಚು ಮಾಡಿಂತಾಗುತ್ತಿದೆ. ಇದರಿಂದ ಸಂಸ್ಥೆಗೆ ಸಾವಿರಾರು ರೂಪಾಯಿಗಳ ನಷ್ಟ ಉಂಟಾಗುತ್ತಿದೆ. ಈ ವಿಷಯವು ಶಿವಮೊಗ್ಗ ವಿಭಾಗದ ಎಲ್ಲ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಸಂಬಂಧ ಪಟ್ಟ ಮೇಲಧಿಕಾರಿಗಳು ಈವರೆಗೂ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ.

ಶಿವಮೊಗ್ಗ ಸಾರಿಗೆ ವಿಭಾಗದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದೆ. ಅದನ್ನು ಯಾರಾದರೂ ಸಿಬ್ಬಂದಿಗಳು ಪ್ರಶ್ನೆ ಮಾಡಿದರೆ ಪ್ರಶ್ನೆ ಮಾಡುವ ‌ಸಿಬ್ಬಂದಿಗಳನ್ನೇ ಟಾರ್ಗೆಟ್ ಮಾಡಿ ಬೇರೆಡೆಗೆ ವರ್ಗಾವಣೆ ಮಾಡುವುದು ಶಿವಮೊಗ್ಗ ವಿಭಾಗದ ಅಧಿಕಾರಿಗಳ ಕಾಯಕವಾಗಿದೆ.

ಸಂಸ್ಥೆಯ ಬಸ್‌ಗಳಲ್ಲಿ ಓರ್ವ ಪ್ರಯಾಣಿಕರಿಗೆ ಕಂಡಕ್ಟರ ಟಿಕೆಟ್ ಹಂಚಿಕೆ ಮಾಡಿಲ್ಲದಿದ್ದರೆ ತಕ್ಷಣವೇ ಪೂರ್ವ ಪರ ವಿಚಾರಣೆ ಮಾಡದೆ ನಿರ್ವಾಹಕನನ್ನು ಅಮಾನರು ಮಾಡುವ ಈ ಅಧಿಕಾರಿಗಳು ಈ ರೀತಿಯಾಗಿ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಸಂಸ್ಥೆಯ ವಾಹನಗಳನ್ನು ದುರುಪಯೋಗ ಪಡಿಸಿಕೊಂಡಿರುವ ತಪ್ಪಿತಸ್ಥ ಅಧಿಕಾರಿಗಳಾಗ ವಿರುದ್ಧವೇಕೆ ಕ್ರಮ ಶಿಕ್ಷೆ ಆಗುತ್ತಿಲ್ಲ.

ಸಾರಿಗೆಯ ನಿಗಮಗಳಲ್ಲಿ ಕಾರ್ಮಿಕರಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯಾವೇ? ಸಂಸ್ಥೆಗೆ ಬಂದಿರುವ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎನ್ನಿಸಿ ಕೊಂಡಿರುವ ಸಂಸ್ಥೆಯ ಎಂಡಿ ಅನ್ಬುಕುಮಾರ್‌ ಅವರು ಈ ಬಗ್ಗೆ ಕಂಡು ಕಾಣಿಸದಂತೆ ಜಾಣ ಕುರುಡು ಅನ್ನುವಂತೆ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಭ್ರಷ್ಟ ಅಧಿಕಾರಿಗಳ ನಡೆಯಿಂದ ನಿಗಮಕ್ಕೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಶಿವಮೊಗ್ಗ ವಿಭಾಗದ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕೂಡಲೇ ಅಮಾನತು ಮಾಡುವ ಮೂಲಕ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ವಿಭಾಗ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ