NEWSನಮ್ಮಜಿಲ್ಲೆಸಂಸ್ಕೃತಿ

ಎಲ್ಲರ ಮನಸ್ಸನ್ನು ಮುದಗೊಳಿಸುವ  ಮಧ್ಯವಯಸ್ಕರ ಸಮ್ಮಿಲನ 

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ನಗರ ವಾತಾವರಣದಲ್ಲಿ ಚದುರಿದಂತೆ ತಮ್ಮ ತಮ್ಮದೇ ಕೆಲಸಗಳಲ್ಲಿ ನಿರತರಾಗಿರುವ ಹಿರಿಯ ನಾಗರೀಕರು ಮತ್ತು ಮಧ್ಯವಯಸ್ಕರ ಸಮ್ಮಿಲನ ತಿಂಮಸೇನೆಯ ತಿಂಗಳ ಕಾರ್ಯಕ್ರಮ. ಇಲ್ಲಿ ಸಾಹಿತ್ಯ ಚರ್ಚೆ, ಕವಿತಾ ವಾಚನ, ಪುಸ್ತಕ ವಿಮರ್ಶೆ ಹಾಗೂ ತಿಂಮಿಯರಿಗಾಗಿ ಆಶುಭಾಷಣ ಸ್ಪರ್ಧೆ ಇತ್ಯಾದಿಗಳು ವಿಶೇಷ. ಇಂತಹ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸುತ್ತವೆ ಎಂದು ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ನುಡಿದರು.

ಜಗತ್ತಿನ ನಾಣ್ಯ, ನೋಟುಗಳು, ಸ್ಟಾಂಪುಗಳು ಹಾಗೂ ಸಾವಿರಕ್ಕೂ ಮೀರಿ ಖ್ಯಾತನಾಮರ ಹಸ್ತಾಕ್ಷರ ಸಂಗ್ರಾಹಕ ಕೆ.ವಿಶ್ವನಾಥ್ ಅವರ ಮನೆಯಂಗಳದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗಭೂಮಿ, ಜಾನಪದ, ಶಿಷ್ಟಕಾವ್ಯಗಳ ಒಟ್ಟು ಮಿಸಳಬಾಜಿಯಿಂದ ಈ ಕಾರ್ಯಕ್ರಮಕ್ಕೆ ಒಂದು ವಿಶಿಷ್ಟ ಮೆರುಗು ಬಂದಿದೆ ಎಂದು ಅವರು ಹೇಳಿದರು.

ಗಾಯಕ ವೆಂಕಟರಾವ್ ಭಾರತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಆತಿಥ್ಯ ನೀಡಿದ ವಿಶ್ವನಾಥ್ ದಂಪತಿಗಳು ಸ್ವಾಗತಿಸಿದರು. ಹನಿಕವಿತೆಗಳ ಕವಿ ಡುಂಡಿರಾಜ್ ತಮ್ಮ ಮಾಮೂಲಿ ಹಾಸ್ಯಶೈಲಿಯಲ್ಲಿ ಸಾಕುನಾಯಿ-ಬೀದಿನಾಯಿ, ಗೆಲುವು ಕವಿತೆಗಳನ್ನು ವಾಚಿಸಿದರು. ರಂಗಕರ್ಮಿ ಶಂಕರ್ ಬಿಲ್ಲೇಮನೆ ತಮ್ಮ ಕಾರ್ಯಕ್ಷೇತ್ರದ ಅನುಭವಗಳನ್ನು ಹೇಳುವ ಮೂಲಕ ಸಭಿಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿದರು.

ಹಾಸ್ಯ ಬರಹಗಾರರಾದ ವೈ.ಎನ್.ಗುಂಡೂರಾವ್ ರಂಗಭೂಮಿಯ ರಸಗಳಿಗೆಗಳನ್ನು ನೆನಪಿಸಿಕೊಂಡರು. ಕವಿ ಡಾ.ಬಾನು ಸ್ವರಚಿತ ಕವನ ವಾಚಿಸಿದರು. ದೀಪಕ್ ಬೈರಪ್ಪನವರ ಯಾನ ಕಾದಂಬರಿಯ ಒಳ-ಹೊರಗನ್ನು ತೆರೆದಿಟ್ಟರು. ತಿಂಮಿಯರಾದ ಪರಿಮಳ ಗುಂಡುರಾವ್, ಸುಲೋಚನಾ, ನಂದಿನಿ, ಶೋಭಾ, ನಮಿತಾ, ಸುಜಾತ, ನೀಲು, ಆಶುಭಾಷಣದಲ್ಲಿ ಅನೇಕ ರಸಪೂರ್ಣ ವಿಚಾರಗಳನ್ನು ತಿಳಿಸಿದರು. ಮಂಜುಳಾ ಸ್ವರಚಿತ ಕವನ ವಾಚಿಸಿದರು.

ದಾಮೋದರಶೆಟ್ಟಿ, ರಂಗನಾಥ್ ಕಟ್ಟಾಯ, ರಾಜೇಂದ್ರ ಬಿ.ಶೆಟ್ಟಿ, ಶ್ರೀಪತಿ ಮಂಜನಬೈಲು, ರಮೇಶ್ ಅನಂತ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಣಕು ಬರಹಗಾರರಾದ ರಾಮನಾಥ್ ಕಾರ್ಯಕ್ರಮ ಸಮನ್ವಯದ ಜವಾಬ್ದಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಮಮೂರ್ತಿಯವರ “ಮಾರ್ನಿಂಗ್ ಥಾಟ್ಸ್” ಕೃತಿಯನ್ನು ಕೆ.ವಿಶ್ವನಾಥ್, ರಾಮನಾಥ್, ಡಾ. ಎಂ.ಬೈರೇಗೌಡ ಬಿಡುಗಡೆ ಮಾಡಿದರು.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ