NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

KSRTC: ಪ್ರಯಾಣಿಕರು, ಚಾಲನಾ ಸಿಬ್ಬಂದಿ ಪ್ರಾಣದೊಂದಿಗೆ ಅಧಿಕಾರಿಗಳ ಚೆಲ್ಲಾಟ

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಮರಾಜನಗರ ವಿಭಾಗದ ಬಸ್‌ಗಳಲ್ಲಿ ಪ್ರಯಾಣಿಸುವ ಜನರು ಮತ್ತು ನಿಗಮದ ಚಾಲನಾ ಸಿಬ್ಬಂದಿಯ ಪ್ರಾಣದೊಂದಿಗೆ ವಿಭಾಗದ ಡಿಎಂಇ ಸೇರಿದಂತೆ ಇತರ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.

ಹೌದು! ಕೆಎಸ್‌ಆರ್‌ಟಿ ಚಾಮರಾಜನಗರ ವಿಭಾಗದ ಬಹುತೇಕ ಬಸ್‌ಗಳಲ್ಲಿ ಅಳವಡಿಸಿರುವ ಟಯರ್‌ಗಳನ್ನು ನೋಡಿದರೆ ನೀವು ನಿಜಕ್ಕೂ ಶಾಕ್‌ ಒಳಗಾಗುತ್ತೀರಿ. ಆ ರೀತಿಯಾಗಿ ಕಳಪೆ ಗುಣಮಟ್ಟದ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆಗೆ ಬಿಡುತ್ತಿದ್ದಾರೆ ಅಧಿಕಾರಿಗಳು.

ಒಂದು ವೇಳೆ ಇದರಿಂದ ಬಸ್‌ನ ಟಯರ್‌ಗಳು ಮಾರ್ಗ ಮಧ್ಯೆ ಬರ್ಸ್ಟ್‌ ಆದರೆ, ಪ್ರಯಾಣಿಕರ ಪ್ರಾಣವೇ ಹಾರಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರಣ ಶಕ್ತಿಯೋಜನೆಯಿಂದ ಬಹುತೇಕ ಎಲ್ಲ ಬಸ್‌ಗಳು ದಟ್ಟವಾದ ಜನ ಸಂದಣಿಯಿಂದ ಪ್ರತಿ ಟ್ರಿಪ್‌ನಲ್ಲೂ ತುಂಬಿಹೋಗುತ್ತಿವೆ.

ಇನ್ನು ಇಷ್ಟೊಂದು ಜನರು ಓಡಾಡುವ ಬಸ್‌ಗಳನ್ನು ಸುಸ್ಥಿತಿಯಲ್ಲಿ ಇಡಬೇಕಾದ ಅಧಿಕಾರಿಗಳು ಬಿಡಿ ಭಾಗಗಳನ್ನು ಖರೀದಿಸದೆ ಅಸಡ್ಡೆ ತೋರಿದ್ದು, ಕಿತ್ತೋಗಿರುವ ಮತ್ತು ದಾರ ಕಾಣುವ ಹಳೇ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆ ಇಳಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಕೂಡ ಕಂಡ ಕಾಣದಂತೆ ವರ್ತಿಸುತ್ತಿದ್ದಾರೆ.

ಇನ್ನಾದರೂ ಇಂದ ಹಳೆಯ ಮತ್ತು ಸವೆದು ಹೋಗಿರುವ ಟಯರ್ಗಳನ್ನೇ ಮತ್ತೆ ಮತ್ತೆ ಹಾಕುತ್ತಿರುವ ವಿಭಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಕೂಡಲೇ ಅಮಾನತು ಪಡಿಸಬೇಕು ಎಂದು ವಿಭಾಗದ ನೌಕರರು ಆಗ್ರಹಿಸಿದ್ದಾರೆ.

ಇನ್ನು ಈ ರೀತಿಯಾಗಿ ಕಳಪೆ ಗುಣಮಟ್ಟದ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆಗೆ ಕಳುಹಿಸಿ ಮಾರ್ಗ ಮಧ್ಯದಲ್ಲಿ ಏನಾದರೂ ಅವಘಡ ಅಪಘಾತಗಳು ಸಂಭವಿಸಿದರೆ ಚಾಲಕರನ್ನೇ ಹೊಣೆಗಾರರಾಗಿ ಪ್ರಕರಣ ದಾಖಲು ಮಾಡುವ ಚಾಳಿಯನ್ನು ಕೂಡ ಈ ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಕೊಳ್ಳೇಗಾಲ ಘಟಕದಲ್ಲಿ ಈ ರೀತಿಯಾಗಿ ಕಳಪೆ ಗುಣಮಟ್ಟದ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆಗೆ ಕಳುಹಿಸಿದಾಗ ಮಾರ್ಗ ಮಧ್ಯದಲ್ಲಿ ಟೈರ್ ಬರ್ಸ್ಟ್ ಆಗಿ ಮಹಿಳೆಯೊಬ್ಬರ ಕಾಲು ತುಂಡಾಗಿತ್ತು. ಅದಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ನೌಕರನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು ಈ ಭ್ರಷ್ಟ ಅಧಿಕಾರಿಗಳು.

ಒಡೆದು ಹೋಗಿರುವ, ಸೀಳು ಬಿಟ್ಟಿರುವ, ಪೂರ್ತಿಯಾಗಿ ಸವೆದು ಹೋದ, ರೀ-ಸೋಲ್ ಬಿಟ್ಟಿರುವ, ತಂತಿ ಕಾಣಿಸುತ್ತಿರುವ ಟಯರ್‌ಗಳನ್ನು ಅಳವಡಿಸಿ ಮಾರ್ಗಚರಣೆಗೆ ಕಳುಹಿಸಿ ಕೊಡುವವರು ಈ ಅಧಿಕಾರಿಗಳೆ. ಅದು ಕೂಡ ಟಯರ್‌ಗಳನ್ನ ಬಸ್‌ನ ಒಳ ಭಾಗಕ್ಕೆ ಅಳವಡಿಸಿ ಚಾಲಕರಿಗೆ ಮೇಲುನೋಟಕ್ಕೆ ಕಾಣದ ಹಾಗೆ ಮಾರ್ಗಚರಣೆಗೆ ಕಳುಹಿಸಿ ಕೊಟ್ಟು ಮಾರ್ಗ ಮಧ್ಯದಲ್ಲಿ ಏನಾದರೂ ಅವಘಡ ಅಪಘಾತಗಳು ಸಂಭವಿಸಿದರೆ ಚಾಲಕರನ್ನೆ ಹೊಣೆ ಮಾಡಿ ಸಾವಿರಾರು ರೂಪಾಯಿ ದಂಡವನ್ನು ವಸೂಲಿ ಮಾಡುತ್ತಾರೆ. ಈ ವಸೂಲಿಕೋರ ಅಧಿಕಾರಿಗಳು.

ಇನ್ನು ಪ್ರಕರಣ ದಾಖಲು ಮಾಡಿ ಇನ್ನಿಲ್ಲಾ ಹಿಂಸೆ ನೀಡುವ ಮೂಲಕ ಚಾಲಕರನ್ನು ಬಲಿಪಶುಮಾಡುತ್ತಿದ್ದಾರೆ ಇವರು. ಜತೆಗೆ ತಮ್ಮದೆ ತಪ್ಪಿದ್ದರೂ ಕೂಡ ಯಾವುದೇ ಕಾರಣಕ್ಕೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಜತೆಗೆ ನೇರವಾಗಿ ಚಾಲಕನನ್ನೇ ಗುರಿ ಮಾಡಿ ತಾವು ಜಾರಿಕೊಳ್ಳುತ್ತಾರೆ.

ಇನ್ನು ಇದು ತಪ್ಪು ಎಂದು ತಿಳಿದಿದ್ದರೂ ಮೇಲಧಿಕಾರಿಗಳು ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಬದಲಿಗೆ ಲಂಚ ಪಡೆದು ಪ್ರಕರಣವನ್ನು ಚಾಲಕರ ಮೇಲೆ ಹೊರಿಸಿ ಏನು ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಸತ್ಯ ತಿಳಿಸಲು ಚಾಲಕರು ಹೋದರೆ ಅವರನ್ನು ಸೆಕ್ಯೂರಿಟಿಗಳು ಕಚೇರಿಯ ಒಳಗೆ ಬಿಡದೆ ವಾಪಸ್‌ ಕಳುಹಿಸಿ ಬಿಡುತ್ತಾರೆ. ಹೀಗಾಗಿ ನೂರಾರು ಕಿಲೋ ಮೀಟರ್‌ನಿಂದ ಸತ್ಯ ಹೇಳಲು ಬಂದ ಚಾಲಕರಿಗೆ ನ್ಯಾಯ ಸಿಗುವುದೇ ಇಲ್ಲ.

ಇನ್ನು ಕೆಲ ಪೊಲೀಸ್‌ ಠಾಣೆಗಳಲ್ಲೂ ಚಾಲಕರ ಹೇಳಿಕೆ ಪಡೆಯದೆ ಸಾರಿಗೆ ನಿಗಮಗಳ ಮೇಲಧಿಕಾರಿಗಳು ಹೇಳಿದಂತೆ ಕೇಸ್‌ ದಾಖಲಿಸಿಕೊಂಡು ನೌಕರರನ್ನು ಬಲಿಪಶು ಮಾಡುವುದು ಮಾಮೂಲಿಯಂತಾಗಿದೆ. ಎಲ್ಲ ತಪ್ಪುಗಳನ್ನು ಚಾಲಕರ ವಿರುದ್ಧ ಹೊರಿಸುವುದು ಬಹುತೇಕ ಎಲ್ಲ ವಿಭಾಗದ ಅಧಿಕಾರಿಗಳ ನಿತ್ಯ ಕಾಯಕವಾಗಿದೆ.

ಇನ್ನು ಯಾರಾದರೂ ಸಿಬ್ಬಂದಿಗಳು ಪ್ರಶ್ನೆ ಮಾಡಿದರೆ ಸಾಕು ಕೂಡಲೇ ಅಮಾನತು ಪಡಿಸುವುದು, ವರ್ಗಾವಣೆ ಮಾಡಿಸುವುದು, ಇಲ್ಲ ಸಲ್ಲದ ಕಾರಣಗಳನ್ನು ಕೊಟ್ಟು ಮೆಮೋಗಳನ್ನು ನೀಡಿ ದಂಡ ವಿಧಿಸುವುದನ್ನು ಅಧಿಕಾರಿಗಳು ಕರಗತ ಮಾಡಿಕೊಂಡಿದ್ದಾರೆ. ಆದುದರಿಂದ ತಾವುಗಳು ಕೂಲಂಕಷವಾಗಿ ಇತ್ತ ಗಮನ ಹರಿಸಿ ತಪ್ಪಿತಸ್ಥ ಚಾಮರಾಜನಗರ ಅಧಿಕಾರಿಗಳನ್ನು ಕೂಡಲೇ ಅಮಾನತು ಪಡಿಸಿ ಅವರ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೇಲಧಿಕಾರಿಗಳಿಗೆ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ