CrimeNEWSನಮ್ಮರಾಜ್ಯ

ಕಿದ್ವಾಯಿ ಆಸ್ಪತ್ರೆಯ ₹140 ಕೋಟಿ ಅವ್ಯವಹಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಸ್ತಕ್ಷೇಪ: ಎಎಪಿ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದಲ್ಲಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾಲಿಕ್ಯೂಟ್ ಅಂಕಾಲಜಿ ಲ್ಯಾಬೋರೇಟರಿ ನಿರ್ಮಾಣಕ್ಕಾಗಿ ಹೊರಗುತ್ತಿಗೆಯನ್ನು ನೀಡುವ ಪ್ರಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇರ ಹಸ್ತಕ್ಷೇಪ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಆರೋಪ ಮಾಡಿದ್ದಾರೆ.

ಇಂದು ನಗರದ ಎಎಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ 140 ಕೋಟಿ ರೂ.ಗಳ ಬೃಹತ್ ಹಗರಣದ 330 ಪುಟಗಳ ದಾಖಲೆ ಬಹಿರಂಗ ಪಡಿಸಿದರು. ಅಕ್ರಮ ಹಣ ಮಾಡುವ ಉದ್ದೇಶದಿಂದ ಇವರು ತಮ್ಮ ಹತ್ತಿರದ ಸಂಬಂಧಿ ಹಾಗೂ ಬಾಮೈದ ಸಿದ್ದಲಿಂಗಪ್ಪ ಫಲಲೋಚನ ರಕ್ಷಿತ್ ಅವರ ಮಾಲೀಕತ್ವದ ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿ ಈ ಸಂಸ್ಥೆಗೆ ಕಿದ್ವಾಯಿ ಸಂಸ್ಥೆಯಿಂದ ನೀಡಿರುವಂತಹ ನೂರಾರು ಕೋಟಿ ರೂಪಾಯಿಗಳು ಸಂಪೂರ್ಣ ಅವ್ಯವಹಾರ ಮತ್ತು ಅಕ್ರಮವಾಗಿದೆ ಎಂದು ದಾಖಲೆ ಸಹಿತ ವಿವರಿಸಿದರು.

ಬಿಎಂಎಸ್ ( ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್) ಸಂಸ್ಥೆಯು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿಯನ್ನು ತೆಗೆಯಲು ಯಾವುದೇ ಪೂರ್ವಾರ್ಹತೆ ಹೊಂದಿಲ್ಲದಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಎಂಎಸ್ ಸಂಸ್ಥೆಯು ಕೆಮಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯ ಅಡಿಯಲ್ಲಿ ನೋಂದಾವಣೆ ಆಗಿಲ್ಲ. ಕೆಪಿಎಂಎ ಕಾಯ್ದೆಯಲ್ಲಿ ನೋಂದಾವಣೆ ಆಗಿಲ್ಲ ಎಂದು ಹೇಳಿದರು.

ಇನ್ನು ಬಿಎಂಎಸ್ ಸಂಸ್ಥೆಯು ಎಪಿಎಂಸಿ ಮಾರುಕಟ್ಟೆಯಲ್ಲಿ ದಿನಸಿ ಹೋಲ್ಸೇಲ್ ಮಾರಾಟಗಾರರಾಗಿದ್ದಾರೆ. ಇವರು ಯಾವ ರೀತಿ ಕ್ಯಾನ್ಸರ್ ತಪಾಸಣಾ ಮಾಡುತ್ತಾರೆ ಎಂಬುದು ಮಾನ್ಯ ಮಾಜಿ ಮುಖ್ಯಮಂತ್ರಿಗಳು ತಿಳಿಸಬೇಕು. ಬಿಎಂಎಸ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಪಿಪಿಪಿ ಮಾದರಿಯಲ್ಲಿ ಸಂಪೂರ್ಣ ಶರತ್ತು ಉಲ್ಲಂಘನೆಯಾಗಿದೆ ಎಂದರು.

ಈ ರೀತಿಯ ಲ್ಯಾಬೋರೇಟರಿಗಳನ್ನು ಹೊರಗುತ್ತಿಗೆಯಲ್ಲಿ ಪಡೆದುಕೊಳ್ಳಲು ಇಂಡಿಯನ್ ಕೌನ್ಸಿಲ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಡಿಯಲ್ಲಿ ಮಾನ್ಯತೆಯನ್ನು ಹೊಂದಿರಬೇಕು . ಈ ರೀತಿ ಯಾವುದೇ ಮಾನ್ಯತೆಯನ್ನು ಪಡೆಯದೆ ಕೇವಲ ಮುಖ್ಯಮಂತ್ರಿಗಳ ಮೇಲೆ ಶಿಫಾರಸ್ಸಿನಿಂದ ಇವರಿಗೆ ಲ್ಯಾಬೋರೇಟರಿಯನ್ನು ನಡೆಸಲು ಹೊರಗುತ್ತಿಗೆ ನೀಡಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

ಐಸಿಎಂಆರ್ ಸಂಸ್ಥೆಯ ಎಥಿಕ್ಸ್ ಕಮಿಟಿಯಲ್ಲಿ ಕಡ್ಡಾಯವಾಗಿ ನೋಂದಾವಣಿಯಾಗಿ ನೋಂದಾವಣೆ ಸರ್ಟಿಫಿಕೇಟ್ ಹೊಂದಿರಬೇಕು ಆದರೆ ಬಿಎಂಎಸ್ ಸಂಸ್ಥೆಯು ಇದನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಅಲ್ಲದೆ ಅತ್ಯಂತ ಪ್ರಮುಖವಾಗಿ ಬಿಎಂಎಸ್ ಸಂಸ್ಥೆಯು ನ್ಯಾಷನಲ್ ಅಕಾರ್ಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಶನ್ ಲ್ಯಾಬೋರೇಟರೀಸ್ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಲು ಹಾಕಿದ್ದ ಅರ್ಜಿಯು ಸಂಪೂರ್ಣವಾಗಿ ತಿರಸ್ಕೃತಗೊಂಡಿದೆ ಎಂದರು.

ಬಿಎಂಎಸ್ ಸಂಸ್ಥೆಗೆ ಲ್ಯಾಬೋರೇಟರಿ ನಡೆಸಲು ಕಿದ್ವಾಯಿ ಸಂಸ್ಥೆಯಿಂದ ಒಪ್ಪಿಗೆ ಪತ್ರದ 27- 11 – 2019 ರಂದು ಇದ್ದರೆ ಇದಕ್ಕೆ ಮುಂಚಿತವಾಗಿಯೇ 6- 11 – 2019 ರಂದೆ ಇವರಿಗೆ. ಒಪ್ಪಿಗೆ ಪತ್ರವನ್ನು ನೀಡಲಾಗಿದೆ. ಬಿಎಂಎಸ್ ಸಂಸ್ಥೆಯಲ್ಲಿ ತಪಾಸಣೆಗೊಳಿ ಮಾಡಲು ಯಾವುದೇ ಉಪಕರಣಗಳು ಇಲ್ಲ ತರಬೇತಿ ಹೊಂದಿರುವ ಸಿಬ್ಬಂದಿಗಳಿಲ್ಲದಿದ್ದರೂ ಸಹ ಯಾವ ರೀತಿ ಈ ಸಂಸ್ಥೆಗೆ ಈ ಹೊರಗುತ್ತಿಗೆ ಸಿಕ್ಕಿತು ಎಂಬುದು ಯಕ್ಷಪ್ರಶ್ನೆಯಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಸ್ತಕ್ಷೇಪವಿರುವುದು ಎತ್ತು ಕಾಣುತ್ತಿದೆ.

ಐಸಿಎಂಆರ್ ಸಂಸ್ಥೆಯು ಕೋವಿಡ್ ಟೆಸ್ಟ್ ಗಳನ್ನು ಮಾಡಲು ಕಿದ್ವಾಯಿ ಸಂಸ್ಥೆಯನ್ನು ಮಾನ್ಯ ಮಾಡಿದ್ದು ಪ್ರತಿಯೊಂದು ಆರ್‌ಟಿಪಿಸಿಆರ್ ಟೆಸ್ಟ್ ಗಳಿಗೆ 1550 ರೂಪಾಯಿಗಳು, ಆಂಟಿ ಬಾಡಿ ಪರೀಕ್ಷೆಗಳಿಗೆ 450 ರೂ. ಗಳನ್ನು ನಿಗದಿಪಡಿಸಿತ್ತು. ಬಿಬಿಎಂಪಿಯು 31- 3- 2019ರಿಂದ 20- 8 -2022ರ ವರೆಗಿನ ಅವಧಿಯಲ್ಲಿ 124 ಕೋಟಿ ರೂಪಾಯಿಗಳನ್ನು ಈ ಸಂಸ್ಥೆಗೆ ಬಿಡುಗಡೆ ಮಾಡಿದೆ.

ಇದಲ್ಲದೆ ವಿದ್ವಾಯಿ ಸಂಸ್ಥೆಯು ಯಾವುದೇ ಟೆಂಡರ್ ಗಳನ್ನು ಕರೆಯದೆ 21ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಔಷಧಿಗಳು ಉಪಕರಣಗಳನ್ನು ಖರೀದಿಸಿರುವ. ವಿವರಗಳನ್ನು ಸಹ ಇಂದು ಬಹಿರಂಗಗೊಳಿಸಲಾಯಿತು. ಲೆಕ್ಕಪರಿಶೋಧನಾ ಇಲಾಖೆಯು ಕಿದ್ವಾಯಿ ಸಂಸ್ಥೆಯನ್ನು ಪರಿಶೀಲಿಸಿದಾಗ ಸಂಸ್ಥೆಯ ಗೋಡೌನ್ ನಲ್ಲಿ ಔಷಧಿಗಳಲ್ಲಿ ಪೂರೈಕೆ ಹಾಗೂ. ಉತ್ಪಾದನಾ ದಿನಾಂಕಗಳಲ್ಲಿ ಭಾರಿ ವ್ಯತ್ಯಾಸವಿರುವುದು ಕಂಡುಬಂದಿದೆ ಎಂದರು.

ಈಗಾಗಲೇ ದಿನಾಂಕ ಮೀರಿರುವ. ( Expiry ) ಔಷಧಗಳನ್ನು ರೋಗಿಗಳಿಗೆ ನೀಡುತ್ತಿರುವುದು ಸಹ ಕಂಡು ಬಂದಿದೆ. ಕಿದ್ವಾಯಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಐಸಿಯು ಗಳಲ್ಲಿರುವ ಒರಲ್ ಅಂಕೋಲಜಿ, ರೇಡಿಯೋಲಜಿ, ಮೆಡಿಕಲ್ ಅಂಕಾಲಜಿ ಉಪಕರಣಗಳು ಕೆಲಸವೇ ಮಾಡುತ್ತಿಲ್ಲವೆಂಬುದು ಲೆಕ್ಕ ಪರಿಶೋಧನೆ ತನಿಖೆಯ ವರದಿಯಲ್ಲಿ ಸಾಬೀತಾಗಿದೆ.

ಎಲ್ಲ ಸರ್ಜಿಕಲ್ ಉಪಕರಣಗಳು ತುಕ್ಕು ಹಿಡಿದಿವೆ ಎಂಬುದು ಸಹ ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ. ಸಂಸ್ಥೆಯಲ್ಲಿ ನಡೆಯುತ್ತಿರುವ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್ ಘಟಕವು ಆರ್ಗನ್ ಟ್ರಾನ್ಸ್ ಪ್ಲಾಂಟ್ ಲೈಸೆನ್ಸ್ ಹೊಂದಿಲ್ಲದಿರುವುದು ಸಹ ಪತ್ತೆಯಾಗಿದೆ. ಎಲ್ಲ ವಾರ್ಡ್ಗಳಲ್ಲಿಯೂ ಸಹ ಫಂಗಸ್ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಇನ್ನು 516 ಬಿಲ್ಗಳಲ್ಲಿ ಪೂರೈಕೆಯಾಗಿರುವ ಔಷಧಿಗಳು ಪೂರೈಕೆ ದಿನಾಂಕ ಹಾಗೂ ಉತ್ಪಾದನಾ ದಿನಾಂಕಗಳಲ್ಲಿ ವ್ಯತ್ಯಾಸವಿದ್ದು ನಕಲಿ ಬಿಲ್ ಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂಪಾಯಿಗಳ ಆಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ. 3288 ಪ್ರಕರಣಗಳಲ್ಲಿ ಕೆಟಿಟಿಪಿ ಕಾಯ್ದೆ ಸಂಪೂರ್ಣ ಉಲ್ಲಂಘನೆ ಆಗಿರುವುದು ಸಹ ವರದಿಯಲ್ಲಿ ಬಹಿರಂಗವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ ಇದ್ದರು.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ