NEWSಕೃಷಿನಮ್ಮಜಿಲ್ಲೆ

ಕಡಿಮೆ ಖರ್ಚು ಹೆಚ್ಚು ಇಳುವರಿ ಬಗ್ಗೆ ಜಾಗೃತಿಗಾಗಿ ಕಾರ್ಯಾಗಾರ ನಡೆಸಿ: ಜಂಟಿ ಕೃಷಿ ನಿರ್ದೇಶಕರಿಗೆ ರೈತರ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ತಾಲೂಕು ಮಟ್ಟದಲ್ಲಿ ರೈತರಿಗೆ, ಮಣ್ಣು ಪರೀಕ್ಷೆ, ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಹಾಗೂ ನೀರು ಬಳಕೆ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ಇಂದು ನಗರದ ಕಾಡಾ ಕಚೇರಿಗೆ ಭೇಟಿ ನೀಡಿ ರೈತ ಸಂಘಸ ಪದಾಧಿಕಾರಿಗಳು ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಅವರಿಗೆ ಸಂಘದ ವತಿಯಿಂದ ಒತ್ತಾಯ ಪತ್ರ ನೀಡಿ, ರೈತರಿಗೆ ಆಧುನಿಕ ಕೃಷಿ ಮಾಡುವ ಬಗ್ಗೆ ಮಾಹಿತಿ ಕೊರತೆಯಿದ್ದು, ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸಬೇಕು ಎಂದು ಮನವಿ ಮಾಡಿದರು.

ಇನ್ನು ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರವಾದ್ದರಿಂದ ಮೊದಲಿಗೆ ಮೈಸೂರಿನಲ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಪ್ರಾರಂಭ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು. ಕೃಷಿ ಪರಿಕರಗಳಾದ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಹಾಗೂ ನೀರು ಅತಿಯಾದ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡಿದ್ದು ಮಣ್ಣಿನ ಆರೋಗ್ಯ ರಕ್ಷಣೆ ಮಾಡಿ ಉತ್ತಮ ಬೆಳೆ ಬೆಳೆಯಲು ಜಾಗೃತಿಗೊಳಿಸಬೇಕು.

ನಕಲಿ-ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ನರ್ಸರಿ ಸಸಿಗಳು ಕೀಟ ನಾಶಕಗಳನ್ನು ನಕಲಿ-ಕಳಪೆ ಮಾರಾಟ ಮಾಡುವವರಿಗೆ ಜಾಮೀನು ರಹಿತ ಕಠಿಣ ಜೈಲು ಶಿಕ್ಷೆ ವಿಧಿಸಬೇಕು. ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರ‍್ಯಾಕ್ಟರ್, ಪವರ್ ಟಿಲ್ಲರ್ ಬಿಡಿಭಾಗಗಳ ಬೆಲೆಗಳು ಗಗನಕ್ಕೇರಿದ್ದು ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳ ಮೇಲಿನ ಜಿ.ಎಸ್.ಟಿ ತೆರಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು. ಟ್ರ‍್ಯಾಕ್ಟರ್, ಪವರ್ ಟಿಲ್ಲರ್ ಕೃಷಿ ಯಂತ್ರಗಳ ಮಾರಾಟ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ಬಹಿರಂಗವಾಗಿ ನಾಮಫಲಕ ಹಾಕಬೇಕು. ರಸಗೊಬ್ಬರಗಳ ಜೊತೆ ಮೈಕ್ರೋ ಫುಡ್ ಲಿಂಕ್ ಮಾರಾಟಕ್ಕೆ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು.

ಕೃಷಿ ಪರಿಕರಗಳ ಅಂಗಡಿಗಳಲ್ಲಿ ನರ್ಸರಿ ಸಸಿಗಳನ್ನು ಮಾರಾಟ ಮಾಡಬಾರದು. ರಸಗೊಬ್ಬರ ಮಾರಾಟದ ಅಂಗಡಿ ಮುಂದೆ ಬೆಲೆಗಳ ನಾಮಫಲಕ ಕಡ್ಡಾಯವಾಗಿ ಹಾಕಲು ಕ್ರಮ ಕೈಗೊಳ್ಳಬೇಕು. ಪರಿಕರಗಳನ್ನು ಖರೀದಿ ಮಾಡಿದ ರೈತನಿಗೆ ಅಧಿಕೃತ ಬಿಲ್ ಕೊಡಬೇಕು ಹಾಗೂ ಬಿಲ್‌ನಲ್ಲಿ ಇಬ್ಬರು ಸಹಿ ಹಾಕಿರಬೇಕು.

ಇದಕ್ಕಾಗಿ ಪ್ರತಿ 3 ತಿಂಗಳಿಗೊಮ್ಮೆ ರೈತರ ಕುಂದು ಕೊರತೆಗಳ ಸಭೆ ನಡೆಸಿ ಸಮಸ್ಯೆಗೆಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ರೈತರ ಕುಂದು ಕೊರತೆಗಳ ಸಭೆ ನಡೆಸಿ ರೈತರು ಅಲೆದಾಡುವುದನ್ನು ತಪ್ಪಿಸಬೇಕು ಎಂದು ರೈತರು ಜಂಟಿ ಕೃಷಿ ನಿರ್ದೇಶಕರಿಗೆ ಒತ್ತಾಯ ಪತ್ರ ನೀಡಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಮಂಜುಳಾ, ಬನ್ನೂರು ಸೂರಿ, ವಾಜಮಂಗಳ ಮಹದೇವು, ಕೆಂಡಗಣ್ಣಪ್ಪ ಸ್ವಾಮಿ, ಪ್ರಭುಸ್ವಾಮಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ್, ಸಾತಗಳ್ಳಿ ಮಹೇಶ್, ಮಾರ್ಬಳ್ಳಿ ಬಸವರಾಜ್, ಶಿವಣ್ಣ, ಪಿ.ನಾಗೇಂದ್ರ ವಾಜಮಂಗಳ, ಜಯರಾಮ ವರಕೋಡು, ಶಿವಕುಮಾರ್, ಪ್ರಕಾಶ್, ಎನ್.ನಾಗೇಂದ್ರ, ಪ್ರಭಾಕರ್, ಮೂರ್ತಿ ಇನ್ನೂ 50ಕ್ಕೂ ಹೆಚ್ಚು ರೈತರು ಇದ್ದರು.

Deva
the authorDeva

Leave a Reply

error: Content is protected !!
Latest news
ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು? KKRTC ವಿಜಯಪುರ: ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥ ಸ್ವಂತಕ್ಕೆ ಬಳಸುತ್ತಿರುವ ಕೆಲ ಅಧಿಕಾರಿಗಳು- ಮೌನವಾಗಿರುವ ಡಿಸಿ ಅಮಾ...