CrimeNEWSಮೈಸೂರು

ಚಾಲಕನ ನಿರ್ಲಕ್ಷ್ಯದಿಂದ ಶಾಲೆ ಬಾಲಕಿ ಮೇಲೆ ಹರಿದ ಬಸ್‌- ಸದ್ಯ ವಿದ್ಯಾರ್ಥಿನಿ ಪಾರು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಶಾಲಾ ಬಾಲಕಿ ಮೇಲೆ ಚಾಲಕನ ಅಜಾಗರೂಕತೆಯಿಂದ ಬಸ್‌ ಹರಿಸಿರೋ ಘಟನೆ ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಾಲಾ ವಾಹನ ಚಾಲಕ ಮೊದಲು ಬಸ್​​ನಿಂದ ಇಬ್ಬರು ಮಕ್ಕಳನ್ನು ಇಳಿಸುತ್ತಾನೆ. ಶಾಲಾ ವಾಹನದಿಂದ ಇಳಿದು ಅದೇ ವಾಹನದ ಮುಂಭಾಗದಿಂದ ಮನೆ ಕಡೆ ಹೋಗುತ್ತಿದ್ದಂತೆ ಏಕಾಏಕಿ ಚಾಲಕ ಶಾಲಾ ಬಸ್​​ ಅನ್ನು ಚಲಿಸಿಕೊಂಡು ಹೋಗುತ್ತಾನೆ. ನೋಡ ನೋಡುತ್ತಿದ್ದಂತೆ ಬಾಲಕಿಗೆ ಬಸ್​​ ಡಿಕ್ಕಿ ಹೊಡೆಯುತ್ತದೆ.

ಈ ವೇಳೆ ಬಾಲಕಿ ಬಸ್​​ ಅಡಿಯಲ್ಲಿ ಬೀಳುತ್ತಾಳೆ. ಇದನ್ನು ನೋಡಿದ ಕೂಡಲೇ ಸ್ಥಳೀಯರು ಬಾಲಕಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಲೆ ಎಂದು ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಘಟನೆಯೂ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಬೈಕ್​ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣರಾಗಿದ್ದಾರೆ.

ಬೈಕ್​-ಬೊಲೆರೊ ವಾಹನ ಅಪಘಾತ: ಆಂಧ್ರಪ್ರದೇಶ ಮೂಲದ ಬೊಲೆರೋ ವಾಹನ ಪಿರಿಯಾಪಟ್ಟಣ ಕಡೆಯಿಂದ ಹುಣಸೂರಿಗೆ ತೆರಳುತ್ತಿತ್ತು. ಹುಣಸೂರಿನಿಂದ ಅತ್ತಿಗುಪ್ಪೆ ಕಡೆ ಬರುತ್ತಿದ್ದ ಬೈಕ್‌ ನಡುವೆ ಅರಸು ಕಲ್ಲಹಳ್ಳಿ ಗೇಟ್ ಬಳಿ ಮುಖಾ ಮುಖಿ ಡಿಕ್ಕಿಯಾಗಿದೆಎ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತ್ತಿಗುಪ್ಪೆ ಗ್ರಾಮದ ಕರಿಯಪ್ಪ (40), ನಾಗರಾಜು (57) ಮೃತರು. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ನಿಂದ ಬಿದ್ದು ಇಬ್ಬರು ಮೃತ: ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಗೋಕುಲಂ ನಿವಾಸಿಗಳಾದ ಸಿದ್ದರಾಜು (20), ನಿರಂಜನ್ (20) ಮೃತದುರ್ದೈವಿಗಳು. ಬೈಕ್​ನಲ್ಲಿದ್ದ ಮತ್ತೋರ್ವನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
LATEST
ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ