CrimeNEWSನಮ್ಮಜಿಲ್ಲೆ

KKRTC: ಚಲಿಸುತ್ತಿದ್ದಾಗಲೇ ಕಿತ್ತು ಕೈಗೆ ಬಂದ ಬಸ್‌ ಸ್ಟೇರಿಂಗ್- ತಪ್ಪಿದ ಭಾರೀ ಅನಾಹುತ

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ಚಲಿಸುತ್ತಿದ್ದಾಗಲೇ ಸ್ಟೇರಿಂಗ್ ಕಿತ್ತು ಬಂದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಿಣಾಮ ಬಸ್​ ರಸ್ತೆ ಬದಿಯ ಕಂದಕಕ್ಕೆ ಹೋಗಿ ನಿಂತಿದೆ.

ಚಲಿಸುತ್ತಿದ್ದಾಗಲೇಏ ಏಕಾಏಕಿ ಬಸ್​ ಸ್ಟೇರಿಂಗ್​ ಚಾಲಕನ ಕೈಗೆ ಬಂದಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಬಸ್​ ಚಾಲಕ ಭಾರೀ ದೊಡ್ಡ ದುರಂತವನ್ನು ತಪ್ಪಿದ್ದಾನೆ. ಹೀಗಾಗಿ 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಕೆಕೆಆರ್‌ಟಿಸಿಯ ಬಸ್‌ಗಳಲ್ಲಿ ಭಾರಿ ಸಮಸ್ಯೆ ಆಗುತ್ತಿದ್ದು, ಬಿಡಿ ಭಾಗಗಳು ಕಿತ್ತು ಬರುತ್ತಿವೆ. ವಾರದಿಂದ ಈಚೆಗೆ 5 ಬಸ್‌ಗಳ ಟಯರ್‌ಗಳು ಬರ್ಸ್ಟ್‌ಆಗಿ 5-10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ಸವೆದು ಹೋಗಿರುವ ಟಯರ್‌ಗಳನ್ನು ಬಸ್‌ಗಳಿಗೆ ಅಳವಡಿಸಿರುವುದೇ ಕಾರಣ ಎಂದು ಚಾಲನಾ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಮತ್ತೆ ಇದೇ ನಿಗಮದ ಬಸ್‌ನ ಸ್ಟೇರಿಂಗ್ ಕೈಗೆ ಬಂದಿದ್ದು, ಚಾಲಕ ಸ್ವಲ್ಪ ಸಮಯ ಪ್ರಜ್ಞೆ ಮೆರೆಯದಿದ್ದರೂ ಎಂಥ ಅನಾಹುತ ಆಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಈರೀತಿಯ ಅವಘಡಗಳಿಗೆ ಡಿಪೋ ಮಟ್ಟದಲ್ಲಿ ಇರುವ ಅಧಿಕಾರಿಗಳ ಬೇಜವಾಬ್ದಾರಿತನವೆ ಪ್ರಮುಖ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.

ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ತಲುಪಿಸಬೇಕಾದ ಸರ್ಕಾರಿ ಬಸ್‌ಗಳೇ ಈರೀತಿ ಆದರೆ, ಜನರು ಮತ್ತ್ಯಾವ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕು ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?