ವಿಜಯಪುರ: ಇಡೀ ದೇಶವೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೆ ಬೆಂಬಲ ನೀಡಿ ಮನೆಯಲ್ಲಿ ಜನರು ಲಾಕ್ ಆಗಿದ್ದಾರೆ. ಆದರೆ ಕೆಲವರು ಅದನ್ನು ಉಲ್ಲಂಘಿಸಿ ಹೊರ ಬರುತ್ತಿದ್ದಾರೆ. ಅಂಥವರಿಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸಿದ್ದಾರೆ. ಈ ನಡುವೆ ಬೇಸತ್ತ ಪೊಲೀಸರು ಮನೆಯಿಂದ ಹೊರ ಬರುವವರಿಗೆ ವಿಭೂತಿ ಹಚ್ಚಿ ಗಂಧದ ಕಟ್ಟಿ ಹಚ್ಚಿ ಪೂಜೆ ಮಾಡುವ ಮೂಲಕ ಮನೆಯಲ್ಲಿ ಇರಿ ಎಂಬ ಸಂದೇಶವನ್ನು ನೀಡಿದ್ದಾರೆ.
ಕೆಲವರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಎಷ್ಟೇ ಹೇಳಿದರು ಇಂಥ ಸಂಸ್ಕೃತಿ ಹೊಂದಿರುವ ಜನತೆಗೆ ಯಾವರೀತಿ ತಿಳಿಹೇಳಬೇಕು ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇಅಲ್ಲ ಇದೇ ರೀತಿ ಕೊರೊನಾ ಎಮರ್ಜೆನ್ಸಿ ಧಿಕ್ಕರಿಸಿದವರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟವಾದ ಪಾಠ ಕಲಿಸಿದ್ದಾರೆ.
ಲಾಕ್‍ಡೌನ್ ಉಲ್ಲಂಘಿಸಿ ಸುಖಾಸುಮ್ಮನೆ ಹೊರಬಂದು ತಿರುಗಾಡುವವರಿಗೆ ಹಣೆಗೆ ವಿಭೂತಿ ಹಚ್ಚಿ, ಗಂಧದ ಕಡ್ಡಿಯಿಂದ ಪೂಜೆ ಮಾಡುತ್ತಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣಾ ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಸಂಚಾರಿ ಪಿಎಸ್.ಐ ಆರೀಫ್ ಮುಶ್ರಪುರಿ ನೇತೃತ್ವದಲ್ಲಿ ಪೂಜೆ ಕಾರ್ಯ ನಡೆಯುತ್ತಿದೆ.
ನಗರದ ಗೋದಾವರಿ, ಗಾಂಧಿಚೌಕ್ ಬಳಿ ಸೇರಿದಂತೆ ಹಲವೆಡೆ ಈ ಕಾರ್ಯ ನಡೆಯುತ್ತಿದೆ. ಅಲ್ಲದೆ ಲಾಠಿ ಬೀಸಿದರು ಜನರು ಬಗ್ಗದ ಕಾರಣ ಈ ವಿನೂತನ ಶಿಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.
ಪೂಜೆ ನಂತರ ಮುಂದಿನ ಬಾರಿ ಲಾಕ್‍ಡೌನ್ ಉಲ್ಲಂಘಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪರಿಪರಿಯಾಗಿ ಕೇಳಿಕೊಂಡರು ಕೆಲವರು ಹೊರಬಂದು ಈರೀತಿ ಮಾಡಿಸಿಕೊಳ್ಳುವುದು ನಮ್ಮ ಜನರು ಎಷ್ಟರಮಟ್ಟಿಗೆ ಜ್ಞಾನಿಗಳು ಎಂಬುದನ್ನು ತೋರಿಸುತ್ತದೆ.