NEWSನಮ್ಮರಾಜ್ಯ

ಪ್ರತಿ ವ್ಯಕ್ತಿಯೂ ಪರೋಪಕಾರ ಗುಣ ಅಳವಡಿಸಿಕೊಳ್ಳಬೇಕು

ಪುಣ್ಯಕೋಟಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಪ್ರತಿಯೊಬ್ಬ ವ್ಯಕಿಯೂ ಕೂಡ ಹುಟ್ಟಿದ ಮೇಲೆ ಪರೋಪಕಾರ ಗುಣ ಅಳವಡಿಸಿಕೊಳ್ಳಬೇಕು. ಜತೆಗೆ ಜೀವನದುದ್ದಕ್ಕೂ ಕೂಡ ಇತರರ ಸಂತೋಷಕ್ಕೆ, ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಹೇಳಿದರು.

ಇಂದು ನಗರದ ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಪುಣ್ಯಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಮೂಲಕ ಒಂದು ವಿಶಿಷ್ಟವಾದ ಹಾಗೂ ನೂತನವಾದ ಪುಣ್ಯಕೋಟಿ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ. ಯಾರು ಸಂಕಷ್ಟದಲ್ಲಿರುವರೋ ಮತ್ತು ನಿರ್ಗತಿಕರಾಗಿರುವರೋ ಅಂತಹವರಿಗೆ ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಸ್ಪಂದಿಸಿ, ಅವರ ಅವಶ್ಯಕತೆಗಳನ್ನು ಈಡೇರಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ, ಕಚೇರಿಗಳಲ್ಲಿರುವಂತಹ ಶೇ.50ರಷ್ಟು ವಸ್ತಗಳನ್ನು ನಾವು ಉಪಯೋಗಿಸುವುದಿಲ್ಲ. ಅವು ಬಟ್ಟೆ, ಹೊದಿಕೆ, ಪಾದರಕ್ಷೆ, ಮತ್ತು ಕೈಗಡಿಯಾರಗಳಿರಬಹುದು, ಇಂತಹ ವಸ್ತುಗಳು ಬೇರೆಯೊಬ್ಬ ವ್ಯಕ್ತಿಗೆ ಅವಶ್ಯಕವಾದ ವಸ್ತುಗಳಾಗಿರುತ್ತದೆ ಎಂದು ತಿಳಿಸಿದರು.

ಉಳ್ಳವರು ಮತ್ತು ಉಳ್ಳದೆ ಇರುವವರ ಮಧ್ಯೆ ಸೇತುವೆಯಾಗಿ ಈ ಪುಣ್ಯಕೋಟಿ ಕೆಲಸ ಮಾಡಲಿದೆ. ಅದರಲ್ಲು ಪ್ರಮುಖವಾಗಿ ಆಸ್ಪತ್ರೆಗೆ ಬಹಳ ದೂರದಿಂದ ಬಂದಿರುವಂತಹ ಜನರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಈ ಪುಣ್ಯಕೋಟಿ ಸ್ಪಂದಿಸುತ್ತದೆ ಹಾಗೂ ಬೇರೆ ಕಡೆಯಿಂದ ಕೆಲಸ ಮಾಡಲು ಬಂದಿರುವಂತಹ ಜನರಿಗೆ ಪುಣ್ಯಕೋಟಿ ಸಕರಾತ್ಮಕವಾಗಿ ಸಹಕರಿಸುತ್ತದೆ. ಈ ಯೋಜನೆಯು ನಿಸ್ವಾರ್ಥದಿಂದ ಕೂಡಿದ ಜನರಿಗೆ ಸದುಪಯೋಗವಾಗುವಂತಹ ಯೋಜನೆಯಾಗಿದೆ. ಈ ಯೋಜನೆಗೆ ಮಂಡ್ಯ ಜಿಲ್ಲೆಯ ಎಲ್ಲಾ ನಾಗರಿಕರು ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಮಾತನಾಡಿ, ಈ ಒಂದು ಕಾರ್ಯಕ್ರಮಕ್ಕೆ ಪುಣ್ಯಕೋಟಿ ಅಂತ ಹೆಸರನ್ನು ಇಟ್ಟಿರುವುದು ತುಂಬ ಸೂಕ್ತವಾಗಿದೆ. ಏಕೆಂದರೆ ಈ ಪುಣ್ಯಕೋಟಿ ಕಥೆ ನಡೆದಿದ್ದು, ಬರೆದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ, ಎಷ್ಟೋ ಜನಗಳು ಬೇರೆ ಸ್ಥಳಗಳಿಂದ ಬಂದಿದ್ದು ಅವರ ಸ್ವಂತ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಅಂತಹವರಿಗೆ ಉಪಯೋಗಿಸಿದ ಶುಭ್ರ ಬಟ್ಟೆಯನ್ನು ಕೊಡುವ ಮೂಲಕ ನಿಷ್ಕಲ್ಮಶವಾದ ಈ ಕಾರ್ಯಪ್ರವೃತ್ತಿಯನ್ನು ಎಲ್ಲರೂ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿಗಳಾದ ಟಿ.ಕೆ ಹರೀಶ್, ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ