ಧಾರವಾಡ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿರುವುದರಿಂದ ಹಾಲು ಒಕ್ಕೂಟಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಅಧಿಸೂಚಿತ ಹಾಗೂ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳಲ್ಲಿ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ಕೆ ಧಾರವಾಡ ಶ್ರೀನಗರದ ಭಾವಿಕಟ್ಟಿ ಪ್ಲಾಟಿನಲ್ಲಿ ಬೃಹತ್ ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಅವಳಿನಗರದಲ್ಲಿ ಸುಮಾರು 37 ಸಾವಿರ ಕೊಳಚೆ ಪ್ರದೇಶಗಳ ಕುಟುಂಬಗಳು ,ಸುಮಾರು 5 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ , ಇಟ್ಟಿಗೆ ಭಟ್ಟಿ ಕಾರ್ಮಿಕರಿಗೆ ಹಾಲು ವಿತರಿಸಲಾಗುತ್ತಿದೆ. ಧಾರವಾಡ ಹಾಲು ಒಕ್ಕೂಟ ಪ್ರತಿನಿತ್ಯ 25 ಸಾವಿರ ಲೀಟರ್ ಹಾಲು ಪೂರೈಸಲಿದೆ.
ಸಾಂಕೇತಿಕವಾಗಿ ಹಾಲು ವಿತರಿಸಿದ ಸಚಿವರು ನಾಗರಿಕರು ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ವಸತಿ ಪ್ರದೇಶಗಳಿಗೆ ಕಾಯಿಪಲ್ಯ, ಕಿರಾಣಿ ಮಾರಾಟಗಾರರು ಬರುತ್ತಿರುವ ಬಗ್ಗೆ ಜನರಿಂದ ಮಾಹಿತಿ ಪಡೆದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ,ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯಕ, ಜಂಟಿ ನಿರ್ದೇಶಕ ಡಿ.ಟಿ.ಕಳಸದ, ಉಪವ್ಯವಸ್ಥಾಪಕ ಆನಂದ ಬಬಲೇಶ್ವರ, ನೋಡಲ್ ಅಧಿಕಾರಿ ನಂದೀಶ ಪ್ಯಾಟಿಮಠ ಇತರರು ಇದ್ದರು.