ನ್ಯೂಡೆಲ್ಲಿ: ಹೆಸರುಕಾಳು ಉದ್ದು, ಉದ್ದಿನಬೇಳೆ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳಿಗೆ ದೇಶಾದ್ಯಂತ ಎಂಎಸ್ಪಿ ಖಾತರಿ ಕಾನೂನು ನೀಡುವ ಬಗ್ಗೆ ಕೇಂದ್ರ ಸರ್ಕಾರ ರೈತರಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಕರ್ನಾಟಕ ರಾಜ್ಯದ ರೈತ ಮುಖಂಡರಾದ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾನುವಾರ ನಡೆದ ಕೇಂದ್ರ ಸರ್ಕಾರದ ಜತೆಗಿನ ರೈತ ಮುಖಂಡರ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ರೈತರಿಗೆ ಈ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕ ರೈತರು ಒಪ್ಪಿದ್ದರೆ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಹೇಳಿದೆ.
ಇನ್ನು ಸಹಿ ಹಾಕಿದರೆ ಮೊದಲ ಹಂತದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು, ಮುಂದಿನ ಹಂತದಲ್ಲಿ ಇತರ ಬೆಳೆಗಳಿಗೂ ವಿಸ್ತರಿಸುವ ಚಿಂತನೆ ನಡೆಸಲಾಗುವುದು ರೈತರು ಇದನ್ನು ಒಪ್ಪಿದರೆ ಇನ್ನುಳಿದ ಒತ್ತಾಯ, ಸಾಲ ಮನ್ನಾ ವಿಚಾರ, ಸ್ವಾಮಿನಾಥನ್ ವರದಿ ಬೆಂಬಲ ಬೆಲೆ, ಡಬ್ಲ್ಯೂಟಿಒ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದು ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರದ ನೆರವು ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಸಚಿವ ಪಿಯುಷ್ ಗೂಯಲ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಸ್ತಾವನೆ ಬಗ್ಗೆ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲ ಮಾತನಾಡಿ, ನಾವು ಇನ್ನೂರಕ್ಕೂ ಹೆಚ್ಚು ಸಂಘಟನೆಗಳ ಮುಖಂಡರ ಜತೆ ಹಾಗೂ ವಿಷಯ ಪರಿಣಿತರ ಜತೆ ಚರ್ಚೆ ಮಾಡಿ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿ ಕಾಲವಕಾಶ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಹೋರಾಟ ಆರಂಭವಾದ ನಂತರ ಕೇಂದ್ರ ಸರ್ಕಾರದ ಜತೆ ಇದು ನಾಲ್ಕನೇ ಸುತ್ತಿನ ಮಾತುಕತೆಯಾಗಿದ್ದು, 5 ಗಂಟೆಗಳ ಕಾಲ ಸಭೆಯಲ್ಲಿ ಚರ್ಚೆ ನಡೆದು ಈ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರ ಮಂದಗತಿ ಧೋರಣೆ ತೋರಿದರೆ ಫೆ.21ರಂದು ಲಕ್ಷಾಂತರ ರೈತರು ದೆಹಲಿ ಚಲೋ ನಡೆಸುವುದಾಗಿ ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಅಶ್ರುವಾಯು ಪ್ರಯೋಗ: ಕಣ್ಣು ಕಳೆದುಕೊಂಡ ಯುವ ರೈತ: ಪಂಜಾಬ್, ಹರಿಯಾಣ, ಸೇರಿದಂತೆ ಬೇರೆ ಬೇರೆ ರಾಜ್ಯಗಳ 14 ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದರು ಮುಖ್ಯಮಂತ್ರಿ ಭಗವಂತಮಾನ್, ಕೇಂದ್ರ ಸಚಿವ ಪಿಯುಷ್ ಗೋಯಲ್, ಕೃಷಿ ಸಚಿವ ಅರ್ಜುನ್ ಮುಂಡ, ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ಹಾಗೂ ಸರ್ಕಾರದ ಕಾರ್ಯದರ್ಶಿಗಳು ಸಭೆಯಲ್ಲಿದ್ದರು.
13 ರಂದು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಬರುತ್ತದ್ದ ರೈತರ ಮೇಲೆ ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದರು.
ಹರ್ಯಾಣ-ಪಂಜಾಬ್ ಗಡಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಹರ್ಯಾಣ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದರು. ರೈತರ ಗುಂಪಿನ ಮಧ್ಯೆ ಪೊಲೀಸರಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಡ್ರೋನ್ ಮೂಲಕ ಟಿಯರ್ ಗ್ಯಾಸ್ ಶೆಲ್ಗಳನ್ನು ಬೀಳಿಸಿ ರೈತರನ್ನು ಚದುರಿಸಲು ಯತ್ನಿಸಿದರು.
ಈ ವೇಳೆ ಅಂದು ಪಂಜಾಬ್ನಲ್ಲಿ 96ರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲ ರೈತರು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಗಾಯಾಳುಗಳನ್ನು ನೋಡಲು ಇಂದು ಪಂಜಾಬ್ನ ಚೆಂಡಿಗಡ ಸರ್ಕಾರಿ ಆಸ್ಪತ್ರೆಗೆ ರೈತ ಮುಖಂಡರಾದ ಜಗಜಿತ್ ದಲೈವಾಲಾ ಜತೆ ಕುರುಬೂರು ಶಾಂತಕುಮಾರ್ ಅವರು ಕೂಡ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವ ರೈತ ಮುಖಂಡರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗಿ ಎಂದು ಆಶೀಸಿದರು.
ಅಂದು ಪೊಲೀಸರ ದೌರ್ಜನ್ಯದಿಂದ ಕಣ್ಣಿಗೆ ಮಾರಣಾಂತಿಕ ಗಾಯವಾಗಿದ್ದು, ತುರ್ತುನಿಗಾ ಘಟಕದಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ರೈತ ಯುವಕನ ನೋಡಿ ಭಾವುಕರಾದರು . ಇದೇ ವೇಳೆ ಅವರಿಗೆ ಸಾಂತ್ವನ ಹೇಳಿದರು.