BMTC: ಟಿಕೆಟ್ ಕೇಳಿದರೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ ಎಂದು ದೂರುಕೊಟ್ಟ ಮಹಿಳೆ- ನಿರ್ವಾಹಕ ಅರೆಸ್ಟ್
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಬಸ್ ನಿರ್ವಾಹಕ ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ನಡೆದಿದೆ.
ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಟಿಕೆಟ್ ಕೇಳಿದ್ದಾಳೆ. ಈ ವೇಳೆ ಕಂಡಕ್ಟರ್ ಆಧಾರ್ ಕಾರ್ಡ್ ತೋರಿಸಲು ಮನವಿ ಮಾಡಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಮಹಿಳೆ ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದಾಳೆ. ಆಗ ಕಂಡಕ್ಟರ್ ಕೂಡ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ.
ಆ ಬಳಿಕ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354A, 323, 506, 509 ಅಡಿಯಲ್ಲಿ ಕಂಡಕರ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದ ಪೊಲೀಸರು: ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿದ್ದಾಪುರ ಪೊಲೀಸರು, ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಡಿಪೋ 34ರ ಕಂಡಕ್ಟರ್ ಆಗಿರುವ ಹೊನ್ನಪ್ಪ, ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆಗೈದಿದ್ದ. ಬಳಿಕ ತನ್ಜಿಲಾ ಇಸ್ಮಾಯಿಲ್ ದೂರು ದಾಖಲಿಸಿದ್ದರು. ಅದರಂತೆ ಇದೀಗ ಅರೆಸ್ಟ್ ಮಾಡಲಾಗಿದೆ.
ದೂರಿನಲ್ಲೇನಿದೆ? ಘಟನೆ ಬಳಿಕತನ್ಜಿಲಾ ಇಸ್ಮಾಯಿಲ್ ಠಾಣೆಗೆ ತೆರಳಿ ಇಂದು ಬೆಳಗ್ಗೆ 09-45 ಗಂಟೆಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಬಿಎಂಟಿಸಿ ಬಸ್ ನಂ.ಕೆಎ-57-ಎಫ್-1602 ರೂಟ್ ನಂ.368 ರಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ಬಸ್ ಕಂಡೆಕ್ಟರ್ ರವರಿಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಟಿಕೆಟ್ ನೀಡಲು ಕೇಳಿದಾಗ ಕಂಡೆಕ್ಟರ್ ಕಾಯಲು ಹೇಳಿ ನೀಡಿರುವುದಿಲ್ಲ. ಮತ್ತೆ ಮತ್ತೆ ಕೇಳಿದರೂ ಟಿಕೆಟ್ ಕೊಡಲಿಲ್ಲ.
ನಂತರ ನಾನು ಡೈರಿ ಸರ್ಕಲ್ ಹತ್ತಿರ ಮತ್ತೋಮ್ಮೆ ಟಿಕೆಟ್ ಕೇಳಿದಾಗ ಟಿಕೆಟ್ ನೀಡದೆ ಕಾಯಲು ತಿಳಿಸಿರುತ್ತಾರೆ. ನಂತರ ಸುಮಾರು ಬೆಳಗ್ಗೆ 10-15 ಗಂಟೆಗೆ ನಾನು ಕಂಡೆಕ್ಟರ್ ಅವರಿಗೆ ಜೊರಾಗಿ ಟಿಕೆಟ್ ನೀಡಲು ಕೇಳಲಾಗಿ ಬಸ್ ಕಂಡೆಕ್ಟರ್ ನೀಡಿರುವುದಿಲ್ಲ. ನಂತರ ನಾನು ಬಸ್ ಡ್ರೈವರ್ ರವರಿಗೆ ದೂರು ನೀಡುವುದಕ್ಕೆ ಪೊಲೀಸ್ ಸ್ಟೇಷನ್ ಬಳಿ ಬಸ್ ನಿಲ್ಲಿಸಲು ಹೇಳಿದಾಗ ನನ್ನ ಬಳಿಗೆ ಕಂಡೆಕ್ಟರ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ಬಟ್ಟೆ ಹಿಡಿದು, ತಲೆ ಕೂದಲು ಎಳೆದು ಕೈಯಿಂದ ಮುಖಕ್ಕೆ ಹೊಡೆದಾಗ ಕಂಡಕ್ಟರ್‌ಗೆ ತಳ್ಳಿರುತ್ತೇನೆ.
ನಂತರ ನಾನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಹೋದಾಗ ನನ್ನ ಕೈಯಿಂದ ಮೊಬೈಲ್ ಕಿತ್ತು ಕೆಳಗೆ ಬಿಸಾಕಿ ನಾವು ಇದೇ ಬಸ್ ರೂಟ್ ನಲ್ಲಿ ದಿನಾ ಓಡಾಡುತ್ತೇವೆ ಮತ್ತೋಮ್ಮೆ ಇದೇ ಬಸ್ ನಲ್ಲಿ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ನನ್ನನ್ನು ವಿಲ್ಸನ್ ಗಾರ್ಡನ್ ಬಳಿ ಬಸ್ ನಿಲ್ಲಿಸಿ ನನ್ನನ್ನು ಕೆಳಗಿ ಇಳಿಸಿ ಹೋಗಿರುತ್ತಾರೆ.
ಆದ್ದರಿಂದ ನಾನು ಬಸ್ ಟಿಕೆಟ್ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ನನ್ನ ಬಟ್ಟೆ ಹಿಡಿದು ಕೂದಲು ಹಿಡಿದು ಎಳೆದಾಡಿ ನನ್ನನ್ನು ಕೈಯಿಂದ ಹೊಡೆದಿರುವ ಬಿಎಂಟಿಸಿ ಬಸ್ ನಂ. ಕೆಎ-57-ಎಫ್-1602 ರೂಟ್ ನಂ.368 ನ ಕಂಡಕ್ಟರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಕಂಡಕ್ಟರ್ನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಘಟಕ -34 ನಿರ್ವಾಹಕರಾಗಿರುವ ಹೊನ್ನಪ್ಪ ನಾಗಪ್ಪ ಅಗಸರ್ ಅವರು ಇಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ಮಾಡಿರುತ್ತಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಸದರಿ ಅಂತರ್ಜಾಲದ ಸುದ್ದಿಯ ಆಧಾರದ ಮೇಲೆ ಹೊನ್ನಪ್ಪ ನಾಗಪ್ಪ ಅಗಸರ್ ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.
Related
You Might Also Like
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ. ಒಂಟಿ...
KSRTC: ಶೇ.15ರಷ್ಟು ಬಸ್ ಟಿಕೆಟ್ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನಿಗಮಗಳ 10 ವರ್ಷದ ಮನವಿಗೆ ಸ್ಪಂದಿಸಿದೆ....
KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) 9 ರಾಷ್ಟ್ರದ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಂಸ್ಥೆಗೆ 5 ಆಡ್ ವರ್ಲ್ಡ್ ಶೌಡೌನ್ ಚಿನ್ನದ ಪ್ರಶಸ್ತಿ, 2 ಗೌಕೇರ್...
KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ರಾಜ್ಯದ ನಾಲ್ಕು ಬಸ್ ನಿಗಮಗಳು ಶೇ.15ರಷ್ಟು ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಈ ಕುರಿತು ಸರಕಾರ ಚರ್ಚೆ...
KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ
ಬೆಂಗಳೂರು: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬಹು ವರ್ಷಗಳ ಬೇಡಿಕೆಗಳಲ್ಲಿ ಒಂದಾದ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಅನುಷ್ಠಾನಕ್ಕೆ ಮುಹೂರ್ತ ನಿಗದಿಯಾಗಿದ್ದು, ಜ.6ರಂದು...
ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು...
ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಜ್ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರುವ ಜತೆಗೆ ದರ್ಶನವನ್ನೂ ಕೊಟ್ಟಿದ್ದಾರೆ....
ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು?
ಹಾಸನ: ಹೊಸ ವರ್ಷದ ಸಂಭ್ರಮದಲ್ಲಿ ಸ್ನೇಹಿತರೊಟ್ಟಿಗೆ ಇದ್ದ ಪ್ರಿಯಕರನೊಂದಿಗೆ ಜಗಳ ಮಾಡಿದ ಪ್ರೇಯಸಿಯೊಬ್ಬಳು, ಏಕಾಏಕಿ ಚಾಕು ಇರಿದ ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ...
ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು
2025ರ ನೂತನ ವರ್ಷವನ್ನು ಅಧಿಕೃತವಾಗಿ ಹಲವು ದೇಶಗಳು ಈಗಾಗಲೇ ಸ್ವಾಗತಿಸಿವೆ. ಅದರ ಒಂದು ನೋಟ ಸಿಡ್ನಿಯು ಹೊಸ ವರ್ಷಕ್ಕೆ ಹಲೋ ಸ್ವಾಗತ ಎಂದು ಹೇಳಿ ಸಿಡ್ನಿ ಹಾರ್ಬರ್...
KSRTC: 4 ಸಾರಿಗೆ ನಿಗಮಗಳು 2,000 ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಸರ್ಕಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಆರ್ಥಿಕ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆ ಸಾರಿಗೆ ಸಂಸ್ಥೆಗಳಿಗೆ ಹಣಕಾಸಿನ ಸಂಸ್ಥೆಗಳಿಂದ ಸಾಲ (Loan) ಪಡೆಯುವುದಕ್ಕೆ ಇಂದು ಸರ್ಕಾರ...
ವರ್ಲ್ಡ್ ಆಫ್ ರೆಕಾರ್ಡ್ಸ್: ವಿಶ್ವ ದಾಖಲೆ ಸೇರಿದ 1.9 ವರ್ಷದ ಜನ್ವಿತಾ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಉದ್ದೇಬೋರನಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ದಿವ್ಯ ಮತ್ತು ಲೋಹಿತ್ ಅವರ 1 ವರ್ಷ 9ತಿಂಗಳ ಮಗು ಜನ್ವಿತಾಳನ್ನು ಅಂತಾ ರಾಷ್ಟ್ರೀಯ ವರ್ಲ್ಡ್ ಆಫ್...