CrimeNEWSನಮ್ಮಜಿಲ್ಲೆ

BMTC: ಟಿಕೆಟ್‌ ಕೇಳಿದರೆ ಕಂಡಕ್ಟರ್‌ ಕಪಾಳಮೋಕ್ಷ ಮಾಡಿದ ಎಂದು ದೂರುಕೊಟ್ಟ ಮಹಿಳೆ- ನಿರ್ವಾಹಕ ಅರೆಸ್ಟ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಬಸ್ ನಿರ್ವಾಹಕ ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ನಡೆದಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಟಿಕೆಟ್​ ಕೇಳಿದ್ದಾಳೆ. ಈ ವೇಳೆ ಕಂಡಕ್ಟರ್ ಆಧಾರ್‌ ಕಾರ್ಡ್‌ ತೋರಿಸಲು ಮನವಿ ಮಾಡಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಮಹಿಳೆ ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದಾಳೆ. ಆಗ ಕಂಡಕ್ಟರ್‌ ಕೂಡ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ.

ಆ ಬಳಿಕ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354A, 323, 506, 509 ಅಡಿಯಲ್ಲಿ ಕಂಡಕರ್ಟ್‌ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದ ಪೊಲೀಸರು: ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿದ್ದಾಪುರ ಪೊಲೀಸರು, ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಡಿಪೋ 34ರ ಕಂಡಕ್ಟರ್ ಆಗಿರುವ ಹೊನ್ನಪ್ಪ, ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆಗೈದಿದ್ದ. ಬಳಿಕ ತನ್ಜಿಲಾ ಇಸ್ಮಾಯಿಲ್ ದೂರು ದಾಖಲಿಸಿದ್ದರು. ಅದರಂತೆ ಇದೀಗ ಅರೆಸ್ಟ್ ಮಾಡಲಾಗಿದೆ.

ದೂರಿನಲ್ಲೇನಿದೆ? ಘಟನೆ ಬಳಿಕತನ್ಜಿಲಾ ಇಸ್ಮಾಯಿಲ್ ಠಾಣೆಗೆ ತೆರಳಿ ಇಂದು ಬೆಳಗ್ಗೆ 09-45 ಗಂಟೆಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಬಿಎಂಟಿಸಿ ಬಸ್ ನಂ.ಕೆಎ-57-ಎಫ್-1602 ರೂಟ್ ನಂ.368 ರಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ಬಸ್ ಕಂಡೆಕ್ಟರ್ ರವರಿಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಟಿಕೆಟ್ ನೀಡಲು ಕೇಳಿದಾಗ ಕಂಡೆಕ್ಟರ್ ಕಾಯಲು ಹೇಳಿ ನೀಡಿರುವುದಿಲ್ಲ. ಮತ್ತೆ ಮತ್ತೆ ಕೇಳಿದರೂ ಟಿಕೆಟ್‌ ಕೊಡಲಿಲ್ಲ.

ನಂತರ ನಾನು ಡೈರಿ ಸರ್ಕಲ್ ಹತ್ತಿರ ಮತ್ತೋಮ್ಮೆ ಟಿಕೆಟ್ ಕೇಳಿದಾಗ ಟಿಕೆಟ್ ನೀಡದೆ ಕಾಯಲು ತಿಳಿಸಿರುತ್ತಾರೆ. ನಂತರ ಸುಮಾರು ಬೆಳಗ್ಗೆ 10-15 ಗಂಟೆಗೆ ನಾನು ಕಂಡೆಕ್ಟರ್ ಅವರಿಗೆ ಜೊರಾಗಿ ಟಿಕೆಟ್ ನೀಡಲು ಕೇಳಲಾಗಿ ಬಸ್ ಕಂಡೆಕ್ಟರ್ ನೀಡಿರುವುದಿಲ್ಲ. ನಂತರ ನಾನು ಬಸ್ ಡ್ರೈವರ್ ರವರಿಗೆ ದೂರು ನೀಡುವುದಕ್ಕೆ ಪೊಲೀಸ್ ಸ್ಟೇಷನ್ ಬಳಿ ಬಸ್ ನಿಲ್ಲಿಸಲು ಹೇಳಿದಾಗ ನನ್ನ ಬಳಿಗೆ ಕಂಡೆಕ್ಟರ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ಬಟ್ಟೆ ಹಿಡಿದು, ತಲೆ ಕೂದಲು ಎಳೆದು ಕೈಯಿಂದ ಮುಖಕ್ಕೆ ಹೊಡೆದಾಗ ಕಂಡಕ್ಟರ್‌ಗೆ ತಳ್ಳಿರುತ್ತೇನೆ.

ನಂತರ ನಾನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಹೋದಾಗ ನನ್ನ ಕೈಯಿಂದ ಮೊಬೈಲ್ ಕಿತ್ತು ಕೆಳಗೆ ಬಿಸಾಕಿ ನಾವು ಇದೇ ಬಸ್ ರೂಟ್ ನಲ್ಲಿ ದಿನಾ ಓಡಾಡುತ್ತೇವೆ ಮತ್ತೋಮ್ಮೆ ಇದೇ ಬಸ್ ನಲ್ಲಿ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ನನ್ನನ್ನು ವಿಲ್ಸನ್ ಗಾರ್ಡನ್ ಬಳಿ ಬಸ್ ನಿಲ್ಲಿಸಿ ನನ್ನನ್ನು ಕೆಳಗಿ ಇಳಿಸಿ ಹೋಗಿರುತ್ತಾರೆ.

ಆದ್ದರಿಂದ ನಾನು ಬಸ್ ಟಿಕೆಟ್ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ನನ್ನ ಬಟ್ಟೆ ಹಿಡಿದು ಕೂದಲು ಹಿಡಿದು ಎಳೆದಾಡಿ ನನ್ನನ್ನು ಕೈಯಿಂದ ಹೊಡೆದಿರುವ ಬಿಎಂಟಿಸಿ ಬಸ್ ನಂ. ಕೆಎ-57-ಎಫ್-1602 ರೂಟ್ ನಂ.368 ನ ಕಂಡಕ್ಟರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

ಇನ್ನು ಘಟನೆ ಬೆನ್ನಲ್ಲೇ ಕಂಡಕ್ಟರ್​ನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಘಟಕ -34 ನಿರ್ವಾಹಕರಾಗಿರುವ ಹೊನ್ನಪ್ಪ ನಾಗಪ್ಪ ಅಗಸರ್ ಅವರು ಇಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ಮಾಡಿರುತ್ತಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಸದರಿ ಅಂತರ್ಜಾಲದ ಸುದ್ದಿಯ ಆಧಾರದ ಮೇಲೆ ಹೊನ್ನಪ್ಪ ನಾಗಪ್ಪ ಅಗಸರ್ ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.

Leave a Reply

error: Content is protected !!
LATEST
BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ