ಹಾಸನ: ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಜೆಡಿಎಸ್ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರನ್ನು ಬೆಂಬಿಡದೆ ಕಾಡುತ್ತಿದ್ದು, ಕ್ಷಣಕ್ಷಣಕ್ಕೂ ಹೊಸ ಹೊಸ ತಿರುವು ಪಡೆಯುತ್ತಲೇ ಸಾಗುತ್ತಿದೆ.
ಇನ್ನು ಈ ಪ್ರಕರಣದ ಹಿಂದಿರೋರು ಯಾರು ಎಂಬ ಪ್ರಶ್ನೆ ಮಧ್ಯೆ, ಜೆಡಿಎಸ್-ಬಿಜೆಪಿ ನಡುವೆಯೇ ಸುತ್ತುಹಾಕುತ್ತಿದ್ದ ಕೇಸ್ ಸದ್ಯ ಈಗ ಡಿಸಿಎಂ ಶಿವಕುಮಾರ್ ಬುಡಕ್ಕೆ ಬಂದು ನಿಂತಿದೆ. ಈ ಬಗ್ಗೆ ವಕೀಲ ದೇವರಾಜೇಗೌಡ ಇಟ್ಟ ಡೈನಮೆಟ್ ಕಾಂಗ್ರೆಸ್ ಕೋಟೆಯನ್ನು ಶೇಕ್ ಶೇಕ್ ಮಾಡುತ್ತಿದೆ.
ಹೌದು! ಕ್ಷಣ ಕ್ಷಣಕ್ಕೂ ಟ್ವಿಸ್ಟ್.. ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ.. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ತಿರುವು ಪಡೆಯುತ್ತಲೇ ಸಾಗುತ್ತಿರುವುದು ರಾಜಕಾರಣಿಗಳು ಕೆಸರೆರೆಚಾಟದಿಂದ ಮತ್ತ್ಯಾರೋದು ಕುಟುಂಬ ಬೀದಿಗೆ ಬಂದು ನಿಲ್ಲುವಂತಾಗಿದೆ.
ಇನ್ನು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಸಿಡಿಸಿರೋ ಬಾಂಬ್ ಕಾಂಗ್ರೆಸ್ ಕೋಟೆಯಲ್ಲಿ ನಡುಕ ಹುಟ್ಟಿಸಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ವಕೀಲ ದೇವರಾಜೇಗೌಡ ಗಭೀರ ಆರೋಪ ಮಾಡಿದ್ದಾರೆ.
ಪೆನ್ಡ್ರೈವ್ ಪ್ರಕರಣದಲ್ಲಿ ನನ್ನನ್ನ ಆರೋಪಿ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಪೊಲೀಸರ ರಹಸ್ಯ ಸಭೆಯಲ್ಲಿ ರ್ಯಾರು ಈ ಕೇಸ್ನಲ್ಲಿ ಇರಬೇಕು ಎಂಬುದನ್ನು ಡಿಸಿಎಂ ಹೇಳಿದ್ದಾರೆ ಎಂದು ನೇರವಾಗಿ ದೇವರಾಜೇಗೌಡ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ಪ್ರಕರಣದ ಕಥಾನಾಯಕ ಡಿ.ಕೆ.ಶಿವಕುಮಾರ್ ಎಂದೇ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯರು ಮತ್ತು ಅವರ ಕುಟುಂಬದವರ ಬಗ್ಗೆ ಇವರಿಗೆ ಲೆಕ್ಕಕ್ಕೇ ಇಲ್ಲ. ಆದರೆ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ದೇವರಾಜೇಗೌಡರನ್ನು ಫಿಕ್ಸ್ ಮಾಡಬೇಕು ಎನ್ನುವ ಭಾವನೆಯಲ್ಲಿ ನೋಟಿಸ್ ನೀಡಲು ತುರ್ತು ಸಭೆ ಕರೆದು ಮಾತಾಡಿದ್ದಾರೆ. ನನಗೆ ಎಸ್ಐಟಿಯಿಂದ ಫೋನ್ ಬಂತು. ನಿಮಗೆ ನೋಟಿಸ್ ಬರುತ್ತಿದೆ, ನೀವು ಬರಬೇಕು ಎಂದು. ಈ ಎಲ್ಲ ಗೇಮ್ನ ಮಾಸ್ಟರ್ ಯಾರು ಅಂದರೆ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದರು.
ಹಲವು ವಿಚಾರಗಳನ್ನು ಇದೇ ವೇಳೆ ಬಿಚ್ಚಿಟ್ಟ ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ಜತೆ ನಾನು ಮಾತನಾಡಿರೋ ಆಡಿಯೋವನ್ನು ಬಿಡುಗಡೆಮಾಡಿದ್ದಾನೆ. ಇನ್ನು ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮನ್ನ ಭೇಟಿ ಮಾಡಿರೋ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದು, ಅಲ್ಲದೇ ನನಗೆ ರಾಜ್ಯದ ಮಹಾನ್ ನಾಯಕ ಬಿಗ್ ಆಫರ್ ಕೊಟ್ಟಿದ್ರು ಅಂತ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಇತ್ತ ಎಚ್.ಡಿ. ರೇವಣ್ಣ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ಯಾವುದೆ ಸಂಶಯವಿಲ್ಲ. ಆದ್ರೆ ಇದನ್ನು ಕೆಲ ಕಿಡಿಗೇಡಿ ರಾಜಕಾರಣಿಗಳು, ತಮ್ಮ ರಾಜಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದರು.
ಇನ್ನು ಎಸ್ಐಟಿ ತಂಡ ಸಾಕ್ಷಿ ಹಾಗೂ ಹೇಳಿಕೆಯನ್ನು ನನ್ನಿಂದ ಪಡೆದುಕೊಂಡಿದೆ. ತಡೆಯಾಜ್ಞೆ ಇದ್ದರೂ ಪೆನ್ ಡ್ರೈವ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುಖ ಸಹ ಬ್ಲರ್ ಮಾಡಿಲ್ಲ ಎಂದು ದೇವರಾಜೇಗೌಡ ಆರೋಪಗಳ ಸುರಿಮಳೆಗೈದಿದ್ದಾರೆ.
ಇನ್ನು ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಕೊರಳಿಗೆ ಸುತ್ತಿಕೊಂಡ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಮತ್ತ್ಯಾವ ಮಜಲು ಪಡೆಯುತ್ತದೋ ಅನ್ನೋದೆ ಭಾರಿ ಕುತೂಹಲವಾಗಿದೆ.