NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಎಚ್ಆರ್‌ಎಂಎಸ್‌ ಅನುಷ್ಠಾನದಲ್ಲಿ ಡಿಎಂ ನಿರ್ಲಕ್ಷ್ಯ- ಕಾರಣ ಕೇಳಿ ಮೆಮೋ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕಗಳಲ್ಲಿ ಜಾರಿಗೆ ಬಂದಿರುವ ಎಚ್ಆರ್‌ಎಂಎಸ್ ಮೂಲಕ ಹಾಜರಾತಿ ಹಾಗೂ ರಜೆ ನಿರ್ವಹಣೆ ಮಾಡದೆ ಬಹುತೇಕ ಎಲ್ಲ ಘಟಕಗಳ ವ್ಯವಸ್ಥಾಪಕರು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿವೆ.

ಆದರೂ ಅಂಥ ಘಟಕ ವ್ಯವಸ್ಥಾಪಕರ ವಿರುದ್ಧ ಈವರೆಗೂ ಯಾವುದೇ ಕ್ರಮಕ್ಕೆ ಮೇಲಧಿಕಾರಿಗಳು ಮುಂದಾಗಿಲ್ಲ, ಇದರಿಂದ ನಮಗೆ ತುರ್ತು ಸಂದರ್ಭದಲ್ಲಿ ಎಚ್ಆರ್‌ಎಂಎಸ್ ಮೂಲಕ ಹಾಕಿದ ರಜೆಗಳು ರದ್ದಾಗಿ ನಮಗೆ ಗೈರು ಹಾಜರಿ ತೋರಿಸಿ ವೇತನವನ್ನು ಕಟ್‌ ಮಾಡಲಾಗಿದೆ ಎಂಬ ಬಗ್ಗೆ ಹಲವು ದೂರುಗಳು ವಿಜಯಪಥಕ್ಕೆ ಬಂದಿವೆ.

ಈ ಎಲ್ಲದರ ಬಗ್ಗೆ ಈ ಹಿಂದೆ ವಿಜಯಪಥ ಸಮಗ್ರ ವರದಿ ಮಾಡಿತ್ತು. ಆದರೂ ಸಂಬಂಧಪಟ್ಟ ಕೆಲ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ್ದರು. ಇದರ ಫಲವಾಗಿ ಹಲವೆಡೆ ಎಚ್ಆರ್‌ಎಂಎಸ್ ನಿರ್ವಹಣೆ ಮಾಡುವುದಕ್ಕೆ ಈಗಲೂ ಡಿಎಂಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ.

ಈ ರೀತಿ ಎಚ್ಆರ್‌ಎಂಎಸ್ ಮೂಲಕ ರಜೆ ಮಂಜೂರು ಮಾಡಲು ಮತ್ತು ಹಾಜರಿ ನೀಡುವುದಕ್ಕೆ ನಿರ್ಲಕ್ಷ್ಯವಹಿಸಿದ ಬೆಂಗಳೂರು ಕೇಂದ್ರೀಯ ವಿಭಾಗದ KSRTC ಘಟಕ-4ರ ಹಿರಿಯ ಘಟಕ ವ್ಯವಸ್ಥಾಪಕರಿಗೆ ಕಾರಣ ಕೇಳಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮೆಮೋ ಕೊಟ್ಟಿದ್ದಾರೆ.

ಘಟಕ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಆಧುನಿಕತೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ರಜೆ ಮಂಜೂರಾತಿಯಲ್ಲಿ ಪಾರದರ್ಶಕತೆ ತರಲು ಎಚ್ಆರ್‌ಎಂಎಸ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಅದರಂತೆ, ಕೇಂದ್ರ ಕಚೇರಿ ನಿರ್ದೇಶನದಂತೆ ರಜೆ ಮತ್ತು ಹಾಜರಾತಿಯನ್ನು ಸಂಪೂರ್ಣವಾಗಿ ಏಪ್ರಿಲ್‌ -2024ರಿಂದಲೇ ಜಾರಿಗೆ ಬರುವಂತೆ ಎಚ್ಆರ್‌ಎಂಎಸ್‌ನಲ್ಲಿ ನಿರ್ವಹಣೆ ಮಾಡಲು ಆಗ್ಗಿಂದಾಗ್ಗೆ ಸೂಚನೆಗಳನ್ನು ನೀಡಿ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು ಹೇಳಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದಾಗ್ಯೂ ಏಪ್ರಿಲ್-2024ರ ಮಾಹೆಯಲ್ಲಿ ಎಚ್ಆರ್‌ಎಂಎಸ್‌ನಲ್ಲಿ ಕೇವಲ ಶೇ.10 ರಷ್ಟು ಸಿಬ್ಬಂದಿಗಳಿಗೆ ಮಾತ್ರ ರಜೆ ಮಂಜೂರಾಗಿದ್ದು, ಉಳಿದಂತೆ ಶೇ.90ರಷ್ಟು ರಜೆ ಅರ್ಜಿಗಳನ್ನು ಮ್ಯಾನ್ಯುಯಲ್ ಮೂಲಕ ಸ್ವೀಕರಿಸಿ, ಶಿಫಾರಸು ಮಾಡಿ ಮಂಜೂರಾತಿಗಾಗಿ ವಿಭಾಗೀಯ ಕಚೇರಿಗೆ ಕಳುಹಿಸುತ್ತಿರುವುದು ಕಂಡುಬಂದಿದೆ.

ಕೇಂದ್ರ ಕಚೇರಿಯ ಹಾಗೂ ವಿಭಾಗೀಯ ಕಚೇರಿಯ ನಿರ್ದೇಶನದಂತೆ ಘಟಕ ಮಟ್ಟದಲ್ಲಿ ಎಚ್ಆರ್‌ಎಂಎಸ್ ಅನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ತಮ್ಮದಾಗಿದ್ದರೂ (ಘಟಕ ವ್ಯವಸ್ಥಾಪಕ) ಈ ರೀತಿ ಹೆಚ್ಚಿನ ಮ್ಯಾನ್ಯುಯಲ್ ರಜೆ ಮಂಜೂರಾತಿಯಿಂದ ಹಾಜರಾತಿ, ರಜೆ ಮತ್ತು ಇತರೆ ದತ್ತಾಂಶಗಳು ಎಚ್ಆರ್‌ಎಂಎಸ್‌ನಲ್ಲಿ ಪರಿಪೂರ್ಣವಾಗದೇ ತಾಳೆಯಾಗುತ್ತಿಲ್ಲ.

ಇದರಿಂದ ಎಚ್ಆರ್‌ಎಂಎಸ್ ಅನುಷ್ಠಾನಕ್ಕೆ ತೊಡಕು ಉಂಟಾಗುತ್ತಿದ್ದು ಇದು ನಿಮ್ಮ ಬೇಜವಾಬ್ದಾರಿ / ಕರ್ತವ್ಯ ನಿರ್ಲಕ್ಷತನ ಕಾರಣವಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಏಕೆ ನಿಮ್ಮ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ಲಖಿತ ಸಮಜಾಯಿಷಿಯನ್ನು ಏಳು ದಿನಗಳೊಳಗೆ ಸಲ್ಲಿಸಬೇಕು ಎಂದು ಮೇ 7ರಂದು (ಮಂಗಳವಾರ) ಹಿರಿಯ ಘಟಕ ವ್ಯವಸ್ಥಾಪಕರಿಗೆ ಮೆಮೋ ನೀಡಲಾಗಿದೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...