ಬಳ್ಳಾರಿ: ಕೋವಿಡ್-19ಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಸಹ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ವಿವಿಧ ರಾಜ್ಯಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಅವರು ಬಳ್ಳಾರಿ ಕೆಸ್ವಾನ್‍ನಲ್ಲಿ ವಿಡಿಯೋ ಕಾನ್ಪರೆನ್ಸ್ ಮುಖಾಂತರ ಭಾಗವಹಿಸಿ ಕೋವಿಡ್-19 ರಾಜ್ಯದ ಸ್ಥಿತಿಗತಿ ಮತ್ತು ಕೈಗೊಳ್ಳಲಾಗಿರುವ ಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಿದರು.
ರಾಜ್ಯದಲ್ಲಿ ಇದುವರೆಗೆ 207 ಕೊರೊನಾ ಪಾಸಿಟಿವ್ ಪ್ರಕರಗಳು ಪತ್ತೆಯಾಗಿದ್ದು, ಇದುವರೆಗೆ 06 ಜನರು ಸಾವನ್ನಪ್ಪಿದ್ದಾರೆ. 30 ಜನರು ಗುಣಮುಖರಾಗಿದ್ದಾರೆ. ದೆಹಲಿಗೆ ಹೋಗಿ ಬಂದವರಲ್ಲಿ 40 ಜನರಿಗೆ ಪಾಸಿಟಿವ್ ದೃಢವಾಗಿದೆ. 16334 ಜನರಿಗೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನಿಗಾವಹಿಸಲಾಗಿದೆ. ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಗಮನಕ್ಕೆ ತಂದರು.
ಈಗಾಗಲೇ ಸೊಂಕು ಪಾಸಿಟಿವ್ ಆಗಿರುವವರಲ್ಲಿ 1804 ಪ್ರಥಮ ಮತ್ತು 5533 ದ್ವಿತೀಯ ಸಂಪರ್ಕಕ್ಕೆ ಬಂದಿದ್ದು,ಅವರೆಲ್ಲರ ಮೇಲೂ ನಿಗಾವಹಿಸಲಾಗಿದೆ. 7613 ಜನರ ಸ್ಯಾಂಪಲ್ಸ್‍ನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗಿತ್ತು. 7176 ಸ್ಯಾಂಪಲ್ಸ್ ವರದಿ ನೆಗೆಟಿವ್ ಅಂತ ಬಂದಿದೆ. 437 ಜನರ ವರದಿ ಬರಬೇಕಿದೆ ಎಂದರು.
10 ಲ್ಯಾಬ್‍ಗಳಿದ್ದು ಇನ್ನೆರಡು ಲ್ಯಾಬ್‍ಗಳ ಒದಗಿಸಿ
ರಾಜ್ಯದಲ್ಲಿ 10 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಎರಡು ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ಭಾಗಕ್ಕೆ ಇನ್ನೇರಡು ಲ್ಯಾಬ್‍ಗಳ ಅಗತ್ಯವಿದ್ದು ಒದಗಿಸಿಕೊಡುವಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಲ್ಲಿ ಆರೀಗ್ಯ ಸಚಿವ ಶ್ರೀರಾಮುಲು ಅವರು ಮನವಿ ಮಾಡಿದರು.
ಇನ್ನೇರಡು ಲ್ಯಾಬ್‍ಗಳು ತಾವು ಅನುಕೂಲ ಮಾಡಿಕೊಟ್ಟಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸ ನಿರ್ವಹಿಸುವುದಕ್ಕೆ ಅನುಕೂಲವಾಗಲಿದೆ ಎಂದರು.
ನಂಜನಗೂಡು ಜ್ಯೂಬಿಲಿಯೆಂಟ್ ಕಾರಖಾನೆಯೊಂದರಲ್ಲಿಯೇ 26 ಪಾಸಿಟಿವ್
ರಾಜ್ಯದ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರು ಜಿಲ್ಲೆಯಲ್ಲಿ 37 ಪಾಸಿಟಿವ್ ಪ್ರಕರಗಳು ದೃಢಪಟ್ಟಿದ್ದು,ಅದರಲ್ಲಿ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರಖಾನೆಯೊಂದರಲ್ಲಿಯೇ 26 ಪಾಸಿಟಿವ್ ಆಗಿರುವುದು ಅತ್ಯಂತ ಆತಂಕಕಾರಿ ಎಂಬುದನ್ನು ಕೇಂದ್ರ ಆರೋಗ್ಯ ಮಂತ್ರಿಗಳ ಗಮನಕ್ಕೆ ಸಚಿವ ಶ್ರೀರಾಮುಲು ತಂದರು.
ಈ ಜ್ಯೂಬಿಲೆಯೆಂಟ್ ಕಾರಖಾನೆಗೆ ಸೆಮಿಲಿಕ್ವಿಡ್ ಕಂಟೈನರ್ ಚೀನಾದಿಂದ ಬಂದಿದ್ದು, ಅದರ ಸ್ಯಾಂಪಲ್‍ನ್ನು ಪುಣೆಯ ಎನ್‍ಎಬಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇದುವರೆಗೆ ವರದಿ ಬಂದಿರುವುದಿಲ್ಲ ಎಂಬುದನ್ನು ಕೇಂದ್ರ ಆರೋಗ್ಯ ಸಚಿವರ ಗಮನಕ್ಕೆ ತಂದ ಶ್ರೀರಾಮುಲು ಅವರು ಈ ವರದಿ ಬಂದಲ್ಲಿ ನಾವು ಇನ್ನಷ್ಟು ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂಬುದನ್ನು ಪ್ರಸ್ತಾಪಿಸಿದರು.
ಈ ಕಾರ್ಖಾನೆಗೆ ಜಪಾನಿನ 3 ಜನ ಟೆಕ್ನಿಶಿಯನ್‍ಗಳು ಹಾಗೂ ದೆಹಲಿಯ ಓರ್ವ ಟೆಕ್ನಿಶಿಯನ್ ಕೂಡ ಬಂದಿದ್ದ ಎಂಬ ಮಾಹಿತಿ ಇದ್ದು, ಈಗಾಗಲೇ ಜಪಾನ್ ದೇಶಕ್ಕೂ ಪತ್ರ ಬರೆಯಲಾಗಿದೆ ಎಂದರು.
1ಲಕ್ಷ ರ್ಪಿಡ್ ಟೆಸ್ಟ್ ಕಿಟ್ ಶೀಘ್ರ ಆಗಮನ* ರಾಜ್ಯಕ್ಕೆ 1ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಏ.13ರೊಳಗೆ ಆಗಮಿಸಲಿವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
10ಲಕ್ಷ ಪಿಪಿಇ ಕಿಟ್‍ಗಳು, 18.33ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರೀಬಲ್ ಲೇಯರ್ ಮಾಸ್ಕ್,ಹೈಡ್ರಾಕ್ಸಿಕ್ಲೋರೋಕ್ವಿನ್ ಪಾಸ್ಪಲೇಟ್ ಟ್ಯಾಬ್ಲೆಟ್ಸ್ 2.80ಲಕ್ಷ ,324 ವೆಂಟಿಲೇಟರ್ ಗಳ ಆರ್ಡ್‍ರ್ ಮಾಡಲಾಗಿದೆ ಎಂದು ವಿವರಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತಿತರರು ಇದ್ದರು.