ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ಸಿಎಂ ಜತೆ ಅಂತಿಮಾ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳಿಗೆ ಸುಳ್ಳು ಭರವಸೆ ನೀಡಿಕೊಂಡೆ ಬರುತ್ತಿದ್ದಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು! ಇಲ್ಲ ಸಾರಿಗೆ ಸಚಿವರು ಆ ರೀತಿ ಹೇಳದಿದ್ದರೂ ನಮಗೆ ಇದೇ ಇದೇ ರಿಂಗಳು ಬರುವ ತಿಂಗಳು ಇಲ್ಲ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಈ ಬಗ್ಗೆ ಕೊನೆಯ ನಿರ್ಧಾರ ಮಾಡಲಾಗುವುದು ಎಂದು ಕಳೆದ ಒಂದೂವರೆ ವರ್ಷದಿಂದಲೂ ಹೇಳಿಕೊಂಡೇ ಬರುತ್ತಿದ್ದಾರೆ ಆದರೆ ಈವರೆಗೂ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ರೀತಿಯ ಗೊಂದಲದಲ್ಲಿ 1.25 ಲಕ್ಷ ಸಾರಿಗೆ ನೌಕರರು ಕೂಡ ಸಿಲುಕಿಕೊಂಡಿದ್ದಾರೆ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸಭೆಯನ್ನು ಸಾರಿಗೆ ನಿಗಮಗಳ ನೌಕರರಿಗೆ ಸಂಬಂಧಪಟ್ಟಂತೆ ಈವರೆಗೂ ಮಾಡೇ ಇಲ್ಲ. ಹೀಗಿರುವಾಗ ಮತ್ತೆ ದಿಢೀರನೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ಮತ್ತೆ ಅದೇ ಹಳೇ ಮನವಿ ಪತ್ರವನ್ನು ದಿನಾಂಕ ಬದಲಿಸಿ ಸಲ್ಲಿಸಿ ಫೋಟೋಗಳಿಗೆ ಫೋಸ್‌ಕೊಟ್ಟು ಹಳೆಯ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ಹೇಳುತ್ತಿರುತ್ತಾರೆ.
ಇದನ್ನು ಗಮನಿಸಿದರೆ ಇಲ್ಲಿ ನೌಕರರ ಪರ ಸಂಘಟನೆಗಳು ಕೂಡ ನೌಕರರ ಸಮಸ್ಯೆ ಪರಿಹರಿಸುವುದಕ್ಕೆ ಸಾಧ್ಯವಿಲ್ಲವೇನೋ ಎಂಬ ಗೊಂದಲಕ್ಕೆ ಸಿಕ್ಕಿಕೊಂಡಿವೆ ಎಂದು ಅನಿಸುತ್ತಿದೆ. ಇಲ್ಲ ತಮ್ಮ ಸ್ವಾರ್ಥಕ್ಕಾಗಿ ಪದೇಪದೇ ಸಾರಿಗೆ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ 32 ಹಲ್ಲುಗಳನ್ನು ಕಿಸಿದು ಫೋಟೋಗೆ ಫೋಸ್ ಕೊಟ್ಟ ಬಳಿಕ ತೆಪ್ಪಗಾಗುವುದರಲ್ಲೇ 18 ತಿಂಗಳುಗಳನ್ನು ಕಳೆದಿವೆ ಎಂಬುವುದು ಮಾತ್ರ ಬಚ್ಚಿಟ್ಟುಕೊಳ್ಳಲಾಗದ ಸತ್ಯವಾಗಿದೆ.
ಇನ್ನು 2020ರ ವೇತನ ಪರಿಷ್ಕರಣೆಯ ಹಿಂಬಾಕಿಯನ್ನೇ 4 ವರ್ಷ ಕಳೆದೆ ಐದನೇ ವರ್ಷ ಬಂದರು ಇನ್ನೂ ಕೊಡಿಸಲು ಆಗದ ಈ ಇವರು, 2024ರ ವೇತನ ಪರಿಷ್ಕರಣೆಗೆ ಆಗುವುದಕ್ಕೂ ಈಗಾಗಲೇ 7 ತಿಂಗಳು ತಿಂಗಳು ಕಳೆದು ಹೋಗಿದ್ದರೂ ಆ ಬಗ್ಗೆ ಇನ್ನು ಯಾವುದೇ ಸ್ಪಷ್ಟ ನಿಲುವು ಸಿಕ್ಕಿಲ್ಲ. ಹೀಗಿರುವಾಗ 2024ರ ವೇತನ ಪರಿಷ್ಕರಣೆ ಹೋರಾಟದ ಹಾದಿ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುವುದೋ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
ಇನ್ನೂ 2020ರ ವೇತನ ಪರಿಷ್ಕರಣೆಯ ಹಿಂಬಾಕಿಯೇ ಕೈ ಸೇರುತ್ತದೋ ಇಲ್ಲವೋ ಎಂಬ ಗೊಂದಲ ಈಗಲೂ ಕೂಡ ನೌಕರರಿಗೆ ಒಂದುಕಡೆಯಾದರೆ ಮತ್ತೊಂದೆಡೆ 2024ರ ವೇತನ ಮರಿಷ್ಕರಣೆ ಯಾವಾಗ ಮಾಡಿಸುತ್ತಾರೋ ಎಂಬ ಚಿಂತೆಯಲ್ಲಿ ನೌಕರರು ನಿತ್ಯ ಮುಳುಗೇಳುತ್ತಿದ್ದಾರೆ.
ಈ ಸಂಘಟನೆಗಳು ಮಾತ್ರ ಆ ಮಂತ್ರಿ ಭೇಟಿ ಮಾಡಿದ್ದೆವು ಅವರು ಈ ಭರವಸೆಕೊಟ್ಟರು. ಇತ್ತ ಎಂಡಿ ಭೇಟಿ ಮಾಡಿದ್ದೇವು ಅವರು ಇನ್ನೇನು ನಾಳೆಯೇ ಆಗಿಬಿಡುತ್ತದೆ ಎಂದು ಹೇಳಿದ್ದಾರೆ ಎಂಬ ಹುಸಿ ಮಾತಿನಿಂದ ನೌಕರರ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಿಕೊಂಡೆ ಬರುತ್ತಿದ್ದಾರೆ. ಆದರೆ ಫಲಮಾತ್ರ ಇನ್ನೂ ಸಿಕ್ಕಿಲ್ಲ.
ಇನ್ನು ಜಂಟಿ ಕ್ರಿಯಾ ಸಮಿತಿ, ಸಮಾನ ಮನಸ್ಕರ ವೇದಿಕೆ ಸೇರಿದಂತೆ ಇತರ ಸಂಘಟನೆಗಳ ಪದಾಧಿಕಾರಿಗಳು ಸಾರಿಗೆ ಮಂತ್ರಿಗಳನ್ನು ಭೇಟಿ ಮಾಡಿದ್ದೇವೆ ನೌಕರರಿಗೆ ವೇತನ ಹಿಂಬಾಕಿ ಬಗ್ಗೆ ಅಂತಿಮಾ ತೀರ್ಮಾನವಾಗುತ್ತದೆ. ನೋಡಿ ನಾವು ಯಾವ ರೀತಿ ಮಾಡಿಸುತ್ತಿದ್ದೇವೆ ಎಂದು ಕೆಲ ಪದಾಧಿಕಾರಿಗಳು ನೌಕರರಿಗೆ ಖುಷಿಯಿಂದಲೇ ವಿಷಯ ಪ್ರಸ್ತಾಪಿಸುತ್ತಾರೆ. ಆದರೆ ಪ್ರಯೋಜನ ಮಾತ್ರ ಇನ್ನೂ ಶೂನ್ಯ ಸ್ಥಿತಿಯಲ್ಲೇ ಇದೆ.
ಇನ್ನುಸಾರಿಗೆ ನೌಕರರಿಗೆ ಸಂಬಂಧಪಟ್ಟಂತೆ ಸರ್ಕಾರ ಮತ್ತು ಸಾರಿಗೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ನಡೆದಿರುವ ಹತ್ತಾರು ಸಭೆಗಳಲ್ಲಿ ನೌಕರರ ವೇತನ, ಸಮಸ್ಯೆಗೆ ಸಂಬಂಧಪಟ್ಟಂತೆ ಯಾವುದೇ ಬೆಳವಣಿಗೆ ಆಗಿಲ್ಲ. ಇದನ್ನು ಗಮನಿಸಿದರೆ ಇಲ್ಲಿ ಸಾರಿಗೆ ಮಂತ್ರಿ ಮತ್ತು ಎಂಡಿ ಇಬ್ಬರೂ ಸಾರಿಗೆ ನೌಕರರ ಪರ ಸಂಘಟನೆಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೋ? ಇಲ್ಲ ಸಂಘಟನೆಗಳು ನೌಕರರನ್ನು ಯಾಮಾರಿಸಲು ಈ ರೀತಿ ಹೇಳಿಕೆ ಕೊಡುತ್ತಿವೆಯೋ? ಗೊತ್ತಾಗುತ್ತಿಲ್ಲ.
ಒಟ್ಟಾರೆ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಲೆಕ್ಕಾಚಾರಲ್ಲಿ ಸಾರಿಗೆ ಮಂತ್ರಿ, ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ನಡೆದುಕೊಳ್ಳುತ್ತಿದ್ದಾರೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದು ಮಾತ್ರ ಸ್ಪಷ್ಟ.