NEWSಕೃಷಿನಮ್ಮಜಿಲ್ಲೆನಮ್ಮರಾಜ್ಯ

ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ವಿದ್ಯುತ್‌ ಸಂಪರ್ಕವನ್ನೇ ಕಾಣದ ಗ್ರಾಮಗಳು- ಸರ್ಕಾರದಿಂದ ಬಂದ ₹15 ಲಕ್ಷ ನುಂಗಿದ ಭ್ರಷ್ಟರು

ವಿಜಯಪಥ ಸಮಗ್ರ ಸುದ್ದಿ

ಲಿಂಗಸಗೂರು: ನಾಚಿಕೆಯಾಗಬೇಕು ನಮ್ಮ ರಾಜ್ಯ ಸರ್ಕಾರವನ್ನಾಳಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ. ಥೂ ನಿಮ್ಮ ಜನ್ಮಕ್ಕೆ ಅಧಿಕಾರ ಸಿಕ್ಕಿಬಿಟ್ಟರೆ ಸಾಕು ನಾವು ಜನರ ಸೇವೆಗಾಗಿ ಇರೋದು ಅನ್ನೋದನ್ನೆ ಮರೆತುಬಿಡುತ್ತೀರಿ ಅಲ್ಲ.

1947ರ ಆಗಸ್ಟ್‌ 15ರಂದು  ಮಧ್ಯರಾತ್ರಿ ಬ್ರಿಟಿಷರು ನಮಗೆ ಸ್ವಾತಂತ್ರ್ಯಕೊಟ್ಟು ಹೋದರು. ಆದರೆ ಆ ಸ್ವಾತಂತ್ರ್ಯವನ್ನೇ ನೀವು ಜನಗಳಿಗೆ ಕುಣಿಕೆ ಮಾಡಿಕೊಂಡು ಅವರಿಂದಲೇ ಅಧಿಕಾರಕ್ಕೆ ಬಂದು ಬಳಿಕ ಜುಟ್ಟು ಹಿಡಿದುಕೊಂಡು ದಬ್ಬಾಳಿಕ ಮಾಡುತ್ತಿದ್ದೀರಲ್ಲ ನಿಮಗೆ ಸ್ವಲ್ಪಕೂಡ ನಾಚಿಕೆ ಅನ್ನೋದೆ ಆಗುವುದಿಲ್ಲವೇ?

ನೋಡಿ ನಮಗೆ ಸ್ವಾತಂತ್ರ್ಯಸಿಕ್ಕಿ 78 ವರ್ಷಗಳು ಕಳೆದು ಹೋಗಿದ್ದರೂ ಇನ್ನೂ ರಾಜ್ಯದ ಹಲವು ಗ್ರಾಮಗಳು ವಿದ್ಯುತ್‌ ಬೆಳಕನ್ನೇ ಕಾಣುತ್ತಿಲ್ಲ ಎಂದರೆ ಇಲ್ಲಿನ ಜನಪ್ರತಿನಿಧಿಗಳು ಇದ್ದಾರೋ ಇಲ್ಲ ಮಣ್ಣಲ್ಲಿ ಮಣ್ಣಾಗಿದ್ದಾರೋ ಎಂದು ಕೇಳಬೇಕು ಎನ್ನುವಷ್ಟು ಆಕ್ರೋಶವಾಗುತ್ತಿದೆ.

ಹೌದು! ಇಂದು (16.08.2024) ರಾಯಚೂರು ಜಿಲ್ಲೆಯ ಲಿಂಗಸಗೂರಿನ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಈ ಬಗ್ಗೆ ಕಿಡಿಕಾರಿದ್ದಾರೆ.

ಲಿಂಗಸುಗೂರು ತಾಲೂಕಿನ ಪೂಲಭಾವಿ ಗ್ರಾಮದ ಕಟ್ಟಿಗೆನ ಹೊಲದೊಡ್ಡಿ, ಬಡವಲ ದೊಡ್ಡಿ ಮತ್ತು ಶಿಕಾರಿದೊಡ್ಡಿ ಗ್ರಾಮಗಳಿಗೆ ಈವರೆಗೂ ವಿದ್ಯುತ್‌ ಸೌಲಭ್ಯವನ್ನೇ ಕಲ್ಪಿಸಿಲ್ಲ ಎಂದರೆ ಎಂಥ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದಾರೆ ಹೇಳಿ ಎಂದು ರೈತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಸ್ವತಂತ್ರ ಸಿಕ್ಕು 78 ವರ್ಷಗಳು ಕಳೆದರೂ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅಲ್ಲಿಯ ಜನರು ಮಕ್ಕಳ ವಿದ್ಯಾಭ್ಯಾಸ, ಕುಡಿಯುವ ನೀರಿಗೋಸ್ಕರ 7 ದಶಕಗಳಿಂದಲೂ ಕಚೇರಿಯಿಂದ ಕಚೇರಿಗೆ ಅಲೆಯುತ್ತಲೇ ಇದ್ದಾರೆ.

ಇತ್ತ ಇಲಾಖೆಗೆ ಮತ್ತು ಜನ ಪ್ರತಿನಿಧಿಗಳ ಹತ್ತಿರ ಹಲವಾರು ಸಲ ಅಲೆದಾಡಿದ್ದರಿಂದ 15.03.2024 ರಂದು ಸುಮಾರು 15 ಲಕ್ಷ ರೂಪಾಯಿಯ ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಕಳಿಸಿಕೊಡಲಾಯಿತ್ತು. ಸರ್ಕಾರದಿಂದ ಆ ಹಣ ಕೂಡ ಮಂಜೂರಾಗಿ ಬಂದಿದೆ. ಆದರೆ ಬಂದ ಆ ಹಣವನ್ನು ಜೆಸ್ಕಾಂ ಇಲಾಖೆ ಲಿಂಗಸಗೂರಿನ ಅಧಿಕಾರಿಗಳು ಮತ್ತು ಇಲಾಖೆಯ ಗುತ್ತಿಗೆದಾರ ರಾಜು ಎಂಬುವರು ಸೇರಿಕೊಂಡು ನುಂಗಿ ನೀರು ಕುಡಿದಿದ್ದಾರೆ.

ಇದಿಷ್ಟಕ್ಕೇ ಸುಮ್ಮನಾಗದ ಈ ಭ್ರಷ್ಟರು ಗ್ರಾಮಗಳ ನಿವಾಸಿಗಳಿಂದ ಅಂದರೆ 100 ಕ್ಕೂ ಅಧಿಕ ಕುಟುಂಬಗಳಿಂದ ನಿಮಗೆ ಮನೆಯ ಆರ್.ಆರ್. ನಂಬರ್ ಮಾಡಿಸಿಕೊಡುತ್ತೇವೆ ಎಂದು ಪ್ರತಿ ಕುಟುಂಬದಿಂದಲೂ 3600 ರೂ.ಗಳಂತೆ ಹಣ ಕೂಡ ಪಡೆದುಕೊಂಡಿದ್ದಾರೆ. ಆದರೆ ಇಂದಿಗೂ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ ಈ ನೀಚ ಅಧಿಕಾರಿಗಳು ಎಂದು ರೈತ ಮುಖಂಡರು ಕಿಡಿಕಾರಿದರು.

ಇಲ್ಲ ಇತ್ತಕಡೆ ಆರ್.ಆರ್. ನಂಬರ್ ಹೆಸರಿನಲ್ಲಿ ಗ್ರಾಮಸ್ಥರಿಂದ ಹಣ ಪಡೆದ ಇಲಾಖೆಯ ಗುತ್ತಿಗೆದಾರ ರಾಜು ಎಂಬಾತ ಮತ್ತು ಇಲಾಖೆಯ ಸಿಬ್ಬಂದಿಗಳು ಸೇರಿಕೊಂಡು ಆ ಮೂರು ದೊಡ್ಡಿಗಳ ಜನತೆಗೆ ವಂಚನೆ ಮಾಡುವುದರ ಜತೆಗೆ ಸರ್ಕಾರದ ಹಣ ಕೂಡ ಲೂಟಿ ಹೊಡೆದಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಿ ಗ್ರಾಮನಸ್ಥರಿಗೆ ವಿದ್ಯುತ್‌ ಸಂಪರ್ಕ ಕ್ಲಪಿಸಿಕೊಡಬೇಕು ಎಂದು ಮೇಲಧಿರಿಗಳಿಗೆ ಆಗ್ರಹಿಸಿದರು.

ಜೆಸ್ಕಾಂ ಇಲಾಖೆಗೆ ಮತ್ತು ಇಲಾಖೆಯ ಲೈಸೆನ್ಸ್ ಗುತ್ತಿಗೆದಾರ ರಾಜು ಎಂಬಾತ ಸೇರಿಕೊಂಡು 09/09/2024 ರ ಒಳಗಾಗಿ ಈ ಮೂರು ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಆ ಮೂಲಕ ಅಲ್ಲಿನ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ ಸುಲ್ತಾನಪುರ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ಲಿಂಗಸಗೂರು ತಾಲೂಕ ಅಧ್ಯಕ್ಷ ವೆಂಕಟೇಶ ಕೋಠ, ಮಸ್ಕಿ ತಾಲೂಕ ಗೌರವ ಅಧ್ಯಕ್ಷ ಲಾಲ ಸಾಬ ಪೂಜಾರಿ ನಾಡಗೌಡ, ಸಿಂಧನೂರು ತಾಲೂಕು ಕಾರ್ಯಾಧ್ಯಕ್ಷ ಕೊಠಾರಿ ಜಯ ರಾಘವೇಂದ್ರ, ರೈತ ಸಂಘದ ಜಿಲ್ಲಾ ವರದಿಗಾರ ಮಾನಯ್ಯ ಅಂಕುಶದೊಡ್ಡಿ, ಲಿಂಗಸಗೂರು ತಾಲೂಕ ಉಪಾಧ್ಯಕ್ಷ ದುರುಗಪ್ಪ ಪೂಲಭಾವಿ, ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ನೀರಲ ಕೇರಾ, ಕಾರ್ಯಾಧ್ಯಕ್ಷ ಸಂತೋಷ ಕುಮಾರ್ ಲಿಂಗಸಗೂರು ಹಾಗೂ ಗ್ರಾಮ ಘಟಕ ಅಧ್ಯಕ್ಷರು ಫಲಾನುಭವಿ ರೈತರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...