NEWSನಮ್ಮಜಿಲ್ಲೆ

ನಿರ್ಬಂಧಿತ ಪ್ರದೇಶದ ಸಮುದಾಯವನ್ನು ಪರೀಕ್ಷೆಗೆ ಒಳಪಡಿಸಿ

ಅಧಿಕಾರಿಗಳಿಗೆ ಬೆಳಗಾವಿ ಪ್ರಾದೇಶಿ ಆಯುಕ್ತ ಆದಿತ್ಯ ಬಿಸ್ವಾಸ್ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ:  ಕೊರೊನಾ ಸೋಂಕಿತ ವ್ಯಕ್ತಿಗಳ ವಾಸದ ಕಂಟೆನ್‍ಮೆಂಟ್ ಮತ್ತು ಬಫರ್ ಝೋನದಲ್ಲಿರುವ ಸಮುದಾಯದ ಎಲ್ಲ ಜನರನ್ನು ಪರೀಕ್ಷೆಗೆ ಒಳಪಡಿಸುವಂತೆ ಬೆಳಗಾವಿ ಪ್ರಾದೇಶಿ ಆಯುಕ್ತ ಅಮ್ಲಾನ ಆದಿತ್ಯ ಬಿಸ್ವಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾದಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್-19 ಕುರಿತು ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಕೋವಿಡ್ ನೋಡಲ್ ಅಧಿಕಾರಿಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಕಂಟೆನ್‍ಮೆಂಟ್ ಝೋನ್‍ನಲ್ಲಿ ಒಟ್ಟು 6500 ಜನರಿದ್ದು,   60 ವರ್ಷ ಮೇಲ್ಪಟ್ಟ ವೃದ್ದರ ಮೇಲೆ ಹೆಚ್ಚು ನಿಗಾ ವಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಈ ಪ್ರದೇಶದಲ್ಲಿರುವ ಕುಟುಂಬಗಳಿಗೆ ಕುಡಿಯುವ ನೀರು ಹಾಗೂ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಮುಂದಿನ ಸಿದ್ದತೆಗೆ ಎಚ್ಚರವಾಗಿ ಸಿದ್ದರಾಗಬೇಕಿದೆ. ಯಾವುದೇ ಸಾವನ್ನು ಸಹ ಕಾರಣ ಏನೆಂಬುದನ್ನು ವೈದ್ಯಕೀಯ ಪರೀಕ್ಷಿಸದೇ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಈ ಕುರಿತು ಗ್ರಾಮೀಣ ಪ್ರದೇಶದಲ್ಲಿ ಪಿಡಿಓಗಳು, ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಿಗಾ ವಹಿಸಲು ಸೂಚಿಸಿದರು. ಸಮುದಾಯದವರ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಕಾಳಜಿ ವಹಿಸಬೇಕು.

ಡ್ರಗ್ಸ್ ಕಂಟ್ರೋಲರ್‍ಗಳು ಪ್ರತಿ ಔಷಧಿ ಅಂಗಡಿಗಳಲ್ಲಿ ಬರುವ ಹೈಪರ್‍ಟೆನ್ಸನ್, ಡೈಯಾಬಿಟಿಸ್ ಮತ್ತು ಜ್ವರ ಇರುವ ವ್ಯಕ್ತಿಗಳ ಹೆಸರು ಹಾಗೂ ಮೊಬೈಲ್ ನಂಬರಗಳನ್ನು ಬರೆದಿಟ್ಟು ಕೊಳ್ಳಬೇಕು. ಇವರನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸರ್ವೆಲೆನ್ಸ್ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕು. ಸ್ಯಾಂಪಲ್‍ಗಲು ಹೆಚ್ಚು ರಿಜೆಕ್ಟ್ ಆಗುತ್ತಿರುವದರಿಂದ ಗಂಟಲು ದ್ರವ ತೆಗೆದುಕೊಳ್ಳುವವರು ಹೆಚ್ಚು ತರಬೇತಿಗೆ ಒಳಪಡಿಸಬೇಕು. ಎಎನ್‍ಎಂಗಳನ್ನು ಹೆಚ್ಚಿನ ತರಬೇತಿಗೊಳಿಸಲು ತಿಳಿಸಿದರು.

ಎನ್.ಎಚ್.ಎಂ ಅನುದಾನದಡಿ ಬ್ಲಡ್ ಸೇಲ್ ಕೌಂಟರ್ಸ್ ಸಹ ಖರೀದಿಸಬೇಕು. ಎಲ್ಲ ವೈದ್ಯರು ಮತ್ತು ನರ್ಸಗಳು ಕ್ವಾರಂಟೈನಾಗಿ ಕೇಂದ್ರದಲ್ಲಿಯೇ ಇರತಕ್ಕದ್ದು, ಮನೆಗೆ ಹೋಗುವಂತಿಲ್ಲ. ಆಕ್ಸಿಜನ್ ಸಿಲಿಂಡರ್‍ಗಳನ್ನು ಸ್ಟಾಕ್ ಇಟ್ಟುಕೊಳ್ಳಬೇಕು. ಎಲ್ಲಿಯೂ ಸಹ ಡಯಾಲಿಸಿಸ್ ನಿಲ್ಲಿಸಕೂಡದು. ತುರ್ತು ಪರಿಸ್ಥಿತಿ ಎದುರಾಗುವದಕ್ಕಿಂತ ಮುಂಚೆಯೇ ಎಲ್ಲವನ್ನು ಸಿದ್ದಗೊಳಿಸಿಕೊಳ್ಳಲು ತಿಳಿಸಿದರು. ಹೈಡ್ರೋಕ್ಲೋರೋಫಿನ್ ಸ್ಟೋರ್ ಇರಬೇಕು ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಗೆ ಬೇರೆ ರಾಜ್ಯಗಳಿಂದ ಬಂದ ವಲಸೆ ಕೂಲಿ ಕಾರ್ಮಿಕರನ್ನು 8 ವಸತಿ ನಿಲಯಗಳಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಪರಿಹಾರ ಕೇಂದ್ರದಲ್ಲಿ 178 ಜನರನ್ನು ಕ್ವಾರಂಟೈನಾಗಿ ಇರಿಸಲಾಗಿದೆ. ಐಸಿಯು ವಾರ್ಡಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 6, ಆಯಾ ತಾಲೂಕಾ ಆಸ್ಪತ್ರೆಗಳು ಸೇರಿ 15, ಕುಮಾರೇಶ್ವರ ಆಸ್ಪತ್ರೆಯಲ್ಲಿ 5 ಹಾಗೂ ಕೆರೂಡಿ ಆಸ್ಪತ್ರೆಯಲ್ಲಿ 2 ಸೇರಿ ಒಟ್ಟು 28 ಐಸಿಯು ವಾರ್ಡ್‌ಗಳು ಇರುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕೋವಿಡ್ ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಡಿಎಚ್‍ಓ ಡಾ.ಎ.ಎನ್.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...