ಬೆಂಗಳೂರು:ಕೊರೊನಾಗೆ ಇಂದು ವಿಜಯಪುರದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಜತೆಗೆ ಇಂದು ಬೆಳಗ್ಗೆ 12 ಮಂದಿಗೆ ಕೊರೊನಾ ಪಾಸಿಟಿವ್ ಇತ್ತು. ಆದರೆ ಅದು ಸಂಜೆ ವೇಳೆಗೆ 25ಕ್ಕೇರಿದೆ. ಈ ಮೂಲಕ ಸೋಂಕಿತರ ಸಂಖ್ಯೆ 384ಕ್ಕೇರಿದೆ. ಅದರಲ್ಲಿ 100 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ವಿಜಯಪುರದ ಕೇಸ್ ನಂ.374 ರ ಸೋಂಕಿತ ವ್ಯಕ್ತಿ ಕೊರೊನಾ ಪಾಸಿಟಿವ್ ಇದೆ ಎಂಬುದರಿಂದ ಅಘಾತಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಮೂರು, ಗದಗ1, ಮಂಡ್ಯ 1, ಮೈಸೂರು 7, ಬಾಗಲಕೋಟೆ 7, ಬೆಳಗಾವಿಯಲ್ಲಿ 1, ಕಲಬುರಗಿ 2, ವಿಜಯಪುರ 2, ಹುಬ್ಬಳ್ಳಿ 1 ಸೇರಿದಂತೆ ಒಟ್ಟು 25 ಮಂದಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇನ್ನು ಹೊಸ 25 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಈವರೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 384ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಮೂರು ಸೋಂಕು ಇರುವುದು ದೃಢಪಟ್ಟಿದ್ದು . ಹೀಗಾಗಿ ಅಲ್ಲಿ 88 ಸೋಂಕಿತರು ಇದ್ದಾರೆ. ಇನ್ನು ಮೈಸೂರಿನಲ್ಲಿ ನಿನ್ನೆ 73 ಇದ್ದು, ಇಂದು 7 ಹೊಸ ಪ್ರಕರಣ ಪಾಸಿಟಿವ್ ಆಗಿದ್ದು, 80 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಈವರೆಗೆ 14ಮಂದಿ ಅಸುನೀಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಮತ್ತು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ನಾಗರಿಕರು ಕೂಡ ಅವರ ಶ್ರಮಕ್ಕೆ ಕೈಜೋಡಿಸುವ ಮೂಲಕ ಈ ವಿಶ್ವಮಾರಿ ಕೊರೊನಾವನ್ನು ದೇಶದಿಂದ ಬಡಿದೋಡಿಸಲು ಮುಂದಾಗಬೇಕು.
ದೇಶದಲ್ಲಿ 14,438ಕ್ಕೇರಿದ ಸಾವಿನ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 14438 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 489 ಮಂದಿ ಮೃತಪಟ್ಟಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 22,52,596 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 1,54,330 ಜನರು ಮೃತಪಟ್ಟಿದ್ದಾರೆ. 5,74,818 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.