ಜ.19-BMTC ನೌ.ಸ.ಸಂ.ಚುನಾವಣೆ: ಭ್ರಷ್ಟ, ಕಮಿಷನ್ ಮುಕ್ತ 20 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಸಾಮಾನ್ಯ ನೌಕರರ ತಂಡ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಚುನಾವಣೆ ಇದೇ ಜನವರಿ 19 ರಂದು ನಡೆಯಲಿದ್ದು, ಈಗಾಗಲೇ ಚುನಾವಣಾ ಕಾವು ಏರುತ್ತಿದೆ, ನೌಕರರ ಸಂಘಟನೆಗಳ ಮುಖಂಡರು ತಂಡ ರಚನೆ ಮಾಡಿಕೊಂಡು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಚುನಾವಣೆಯಲ್ಲಿ ಒಂದು ತಂಡದಿಂದ 13 ಅಭ್ಯರ್ಥಿಗಳು ಸ್ಪರ್ಧಿಸಬಹುದು. ಹೀಗಾಗಿ ಒಬ್ಬ ಅಭ್ಯರ್ಥಿಯೂ 3 ರಿಂದ 4 ಲಕ್ಷ ರೂ.ಗಳವರೆಗೆ ತನ್ನ ತಂಡದ ಮುಂದಾಳತ್ವ ವಹಿಸಿರುವವರಿಗೆ ಕೊಡಬೇಕು. ಇನ್ನು ಇಷ್ಟೇ ಅಲ್ಲ ತಂಡದ ಮುಂದಾಳತ್ವ ವಹಿಸಿರುವವರ ವರ್ಚಸ್ಸಿನ ಆಧಾರದ ಮೇಲೆ ಹಣ ಫಿಕ್ಸ್ ಮಾಡಲಾಗುತ್ತಿದೆ. ಹೀಗೆ 4 ರಿಂದ 6 ಲಕ್ಷ ರೂ. ವರೆಗೆ ಖರ್ಚು ಮಾಡಿ ಅಧಿಕಾರಕ್ಕೆ ಬಂದರೆ ಸೊಸೈಟಿಯನ್ನು ಲೂಟಿ ಮಾಡುವುದಿಲ್ಲವೇ ಎನ್ನುವುದು ಸಾಮಾನ್ಯ ನೌಕರರ ಪ್ರಶ್ನೆ.
ಈ ಎಲ್ಲದರಿಂದ ಎಚ್ಚೆತ್ತುಕೊಂಡು ಬಿಎಂಟಿಸಿ ನೌಕರರ ಸೊಸೈಟಿಯಲ್ಲಿ ಭ್ರಷ್ಟಾಚಾರ ತೊಲಗಿಸಲು ನಾಯಕರನ್ನು ಮತ್ತು ಸಂಘಟನೆಗಳನ್ನು ಹೊರತು ಪಡಿಸಿ ಸಂಸ್ಥೆಯ ಸಾಮಾನ್ಯ ನೌಕರರೆಲ್ಲ ಸೇರಿ “ಸಾಮಾನ್ಯ ನೌಕರರ ತಂಡ” ಎಂದು ಹೆಸರಿಟ್ಟು ಚುನಾವಣೆ ಎದುರಿಸಲು ತಂಡ ರಚನೆ ಮಾಡಿಕೊಂಡಿದ್ದಾರೆ. ಅದರ ಮೊದಲ ಹಂತವಾಗಿ ನೌಕರರ ಇಚ್ಛೆಯಂತೆ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಗೊಳಿಸಿದ್ದಾರೆ.
ಹೌದು! ನಗರದ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಾಮಾನ್ಯ ನೌಕರರ ತಂಡದ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಈ ವೇಳೆ ಅನೇಕ ನೌಕರರು ಭಾಗಿಯಾಗಿದ್ದರು.
ಇನ್ನು “ಸಾಮಾನ್ಯ ನೌಕರರ ತಂಡ”ದ ಪ್ರಣಾಳಿಕೆಯ ಒಂದೊಂದು ವಿಷಯವು ಕೂಡ ಭ್ರಷ್ಟಾಚಾರ, ಲಂಚ ಗುಳಿತನದ ವಿರುದ್ಧವಾಗಿರುವ ಜತೆಗೆ ಎಲ್ಲವೂ ನೌಕರರ ಪರವಾಗಿಯೇ ಇವೆ. ಭ್ರಷ್ಟಾಚಾರ ಹಾಗೂ ಕಮಿಷನ್ ಮುಕ್ತವಾಗಿಸಿ, ವಿಶೇಷ ಎಂದರೆ ಭ್ರಷ್ಟಾಚಾರ ಕಮಿಷನ್ ದಂಧೆಯಿಂದ ಲೂಟಿ ಯಾಗುತ್ತಿರುವ ಹಣವನ್ನು ಸೊಸೈಟಿಗೆ ಉಳಿಸಿ ಸದಸ್ಯರಿಗೆ ಉಚಿತ ಸಮವಸ್ತ್ರ (ಯೂನಿಫಾರ್ಮ್) ಕೊಡುವುದಾಗಿಯೂ ತಂಡ ಘೋಷಣೆ ಮಾಡಿದೆ. ಈ ಪ್ರಣಾಳಿಕೆಯನ್ನು ನೋಡಿ ಬಿಎಂಟಿಸಿ ನೌಕರರ ಸಹಕಾರ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಣಾಳಿಕೆಯಲ್ಲೇನಿವೆ? 1. ಉಚಿತ ಸಮವಸ್ತ್ರ ಭಾಗ್ಯ ಯೋಜನೆ. ಪ್ರತಿ ಸದಸ್ಯರಿಗೆ ವರ್ಷಕ್ಕೆ ಒಂದು ಜತೆ ಸಮವಸ್ತ್ರ ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು. 2. ಕಮಿಷನ್ ದಂಧೆ ಮಟ್ಟ ಹಾಕುವುದು ( ದಲ್ಲಾಳಿಗಳ ಹಾವಳಿ ತಡೆಯಿವುದು ): ಸದಸ್ಯರ ಮತ ಬಿಕ್ಷೆಯಿಂದ ನಿರ್ದೇಶಕರಾಗಿ ಸದಸ್ಯರು ಖರೀದಿ ಮಾಡುವ ಎಲ್ಲಾ ವಸ್ತುಗಳ ಮೇಲೆ 10% ಯಿಂದ 30% ವರೆಗೆ ಹಿಂಬಾಗಿಲಿನಿಂದ ಕಮಿಷನ್ ಪಡೆಯುವ ಪದ್ಧತಿಯನ್ನು ತೊಲಗಿಸಲಾಗುವುದು
3. ಭ್ರಷ್ಟಾಚಾರ ಮುಕ್ತ ಚಿನ್ನಾಭರಣ ಸಾಲ ಮತ್ತು ಬಡ್ಡಿ ದರ ಕಡಿಮೆ ಮಾಡುವುದು. ಸಾರ್ವಜನಿಕರಿಗೆ ಒಂದು ಬೆಲೆ, ನೌಕರನಿಗೆ ಒಂದು ಬೆಲೆ ಇರುವ ಚಿನ್ನಾಭರಣ ಸಾಲ ಯೋಜನೆಯ ಬದಲು ಸದಸ್ಯರಿಗೆ ಅನುಕೂಲವಾಗುವಂತೆ ಅವರಿಷ್ಟದ ಚಿನ್ನಾಭರಣ ಅಂಗಡಿಯಲ್ಲಿ ಖರೀದಿ ಮಾಡಿದರೆ RTGS ಮೂಲಕ ಪಾವತಿ, ಚಿನ್ನಾಭರಣ ಸಾಲದ ಬಡ್ಡಿ ದರ ಕಡಿಮೆ ಮಾಡಲಾಗುವುದು
4. ಗೃಹೋಪಯೋಗಿ ವಸ್ತುಗಳ ಮೇಲೆ ಗೃಹೋಪಯೋಗಿ ವಸ್ತುಗಳಾದ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ಇತರೆ ವಸ್ತುಗಳನ್ನು ಖರೀದಿಸಲು ನಿಮ್ಮ ಮನೆಯ ಹತ್ತಿರ ಇರುವ ನಿಮಗೆ ಇಷ್ಟವಾದ ಅಂಗಡಿಯಲ್ಲಿ ಖರೀದಿಸುವಂತೆ ಯೋಜನೆ ಜಾರಿಗೊಳಿಸುತ್ತೇವೆ. 5. ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರಿಷ್ಟದ ಅಂಗಡಿಯಲ್ಲಿ ಲ್ಯಾಪ್ಟಾಪ್ (LAPTOP) ಖರೀದಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು
6. ದಿನಸಿ ವಸ್ತುಗಳನ್ನು ಕಡಿಮೆ ದರದಲ್ಲಿ, APP ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೊಳಿಸುತ್ತೇವೆ. 7. ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು, ಸಮವಸ್ತ್ರಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಗುವುದು. 8. ಸಂಘದ ಎಲ್ಲಾ ದಾಖಲೆಗಳನ್ನು ಗಣಕೀಕರಣ ಮಾಡುವುದು.
9. ಸದಸ್ಯರು ಇಚ್ಛಿಸಿದರೆ, RD , ಹಾಗೂ ಸಾಲವನ್ನು ECS ಮುಖಾಂತರ ಸದಸ್ಯರು ವೇತನ ಪಡೆಯುವ ಬ್ಯಾಂಕ್ ನಿಂದ ಕಡಿತಮಾಡಿ ಸಂಘಕ್ಕೆ ಪಡೆದು ಸದಸ್ಯರಿಗೆ ಹೆಚ್ಚಿನ ಸಾಲ ನೀಡಲಾಗುವುದು. 10. ಸದಸ್ಯರಿಗೆ ಎಲ್ಲಾ ಕಂಪನಿಯ ಮೊಬೈಲ್ ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಗುವುದು. 11. ಪ್ರತಿ ವರ್ಷ ನಡೆಯುವ ಸರ್ವಸದಸ್ಯರ ಸಭೆಯನ್ನು ಸರಳವಾಗಿ ನಡೆಸಲಾಗುವುದು.
12. ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರದ ಹಣವನ್ನು ಹೆಚ್ಚಿಸಲಾಗುವುದು. 13. ಶುಭಕಾರ್ಯಗಳಿಗೆ ಒಂದು ಲಕ್ಷದವರೆಗೆ ದಿನಸಿ ಸಾಲ ನೀಡಲಾಗುವುದು. 14. ಟಿಟಿಎಂಸಿ ಬಸ್ ನಿಲ್ದಾಣಗಳಲ್ಲಿ ಮೆಡಿಕಲ್ ಸ್ಥಾಪನೆ ಮಾಡಿ ರಿಯಾಯಿತಿ ದರದಲ್ಲಿ ಔಷಧ ಮಾರಾಟ ಮಾಡಲಾಗುವುದು. 15. ದ್ವಿಚಕ್ರ ವಾಹನ ಖರೀದಿ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
16. ಸಂಸ್ಥೆಯ ನೌಕರರ ತುರ್ತು ಅನುಕೂಲಕ್ಕಾಗಿ BLOOD BANK ತೆರೆಯಲಾಗುವುದು. 17. ನೌಕರರ ಅನುಕೂಲಕ್ಕಾಗಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸೂಪರ್ ಮಾರ್ಕೆಟ್ ತೆರೆಯಲಾಗುವುದು18. ನೌಕರರ ಆರೋಗ್ಯ ಸುರಕ್ಷತೆಗಾಗಿ ಹಾಗಾಗ ಹೆಲ್ತ್ ಕ್ಯಾಂಪ್ ಮಾಡಲಾಗುವುದು. 19. ಸದಸ್ಯತ್ವ ಅಭಿಯಾನ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿಕೊಳ್ಳುವುದು.
20. ಸಂಸ್ಥೆಯ ನೌಕರರು ಮತ್ತು ನೌಕರರ ಮಕ್ಕಳಿಗೆ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಲು ಯೋಜನೆ ಜಾರಿಗೊಳಿಸುತ್ತೇವೆ. ಈ ತಂಡ ವಿಜಯ ಸಾಧಿಸಿದರೆ ಬಿಎಂಟಿಸಿಯ ನೌಕರರಿಗೆ ಸಹಾಯ ವಾಗುವುದು ಖಚಿತ ಎಂದು ಅನೇಕ ನೌಕರರ ಅಭಿಪ್ರಾಯ.
13 ಜನರ ತಂಡದಲ್ಲಿ ಸದ್ಯಕ್ಕೆ ಎಚ್ ಎಸ್.ರಾಜು, ಎಸ್.ಎಂ. ಯತೀಶ್ ಮತ್ತು ಟಿ.ಸತೀಶ್ ಕುಮಾರ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು 10 ಜನ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕೆ.ಎಸ್.ಪ್ರೀತಮ್ ಚುನಾವಣೆ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ವೇಳೆ ಶರತ್ ಗೌಡ, ಸೋಮಶೇಖರ್ ಮತ್ತು ಗೋಣಿ ಬಸವರಾಜ್ ತಂಡದ ನೇತೃತ್ವ ವಹಿಸಿದ್ದರು.
Related
You Might Also Like
ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್ ಸರ್ಕಾರ…!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ 2024 ಮುನ್ನೆಲೆಗೆ ಬಂದಿದ್ದು ಸರಿ ಸಮಾನ ವೇತನ ನಿರ್ಧಾರ ತೆಗೆದುಕೊಳ್ಳುವ...
KSRTC 4 ನಿಗಮಗಳ ಬಸ್ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿ ಇದೇ ಜ.5ರಿಂದ ಜಾರಿಗೆ ಬಂದಿದೆ. ಆದರೆ ಈ ಪರಿಷ್ಕೃತ ದರ...
KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸು ಇಂದು ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ...
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ
ಹುಬ್ಬಳ್ಳಿ: ಉದ್ದೇಶ ಪೂರ್ವಕವಾಗಿ ವಾಹನ ತಪಾಸಣೆ ನಡೆಸಿ ನನ್ನನ್ನು ಅಮಾನತು ಮಾಡುವ ಸಂಚು ರೂಪಿಸಲಾಗಿದೆ ಎಂದು ಮನನೊಂದ ನಿರ್ವಾಹಕರೊಬ್ಬರು ಡ್ಯೂಟಿ ಮೇಲೆ ಇದ್ದಾಗಲೇ ವಿಸ ಸೇವಿಸಿ ಆತ್ಮಹತ್ಯೆಗೆ...
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ
ಬೆಂಗಳೂರು: ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಡೆಂಗ್ಯೂ, ಉಸಿರಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ...
ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ
ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ...
ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ
ಬೆಂಗಳೂರು: ಅನಿಲ್ ಗುನ್ನಾಪೂರ ಅವರು ಬರೆದ 'ಸರ್ವೇ ನಂಬರ್-97' ಎಂಬ ಕಥಾಸಂಕಲನವನ್ನು ಹೊಂಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ,...
ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ?
ಆರೋಗ್ಯ ಮಾಹಿತಿ: ಜ್ವರದ ಸಮಯದಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಈ ವೇಳೆ ಎಳನೀರು ಕುಡಿಯುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸಿ, ನಿರ್ಜಲೀಕರಣವನ್ನು ತಡೆಯುತ್ತದೆ....
ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್ ದರ ಹೆಚ್ಚಳ: ಪಟ್ಟಿ ರಿಲೀಸ್ ಮಾಡಿದ ಸಾರಿಗೆ ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದನ್ನು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಂಡಿಸಿ ಸರ್ಕಾರದ ವಿರುದ್ಧ...
KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ...
APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿಯೋಗ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು...