Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ – ನೊಂದ ನೌಕರರ ಮನವಿ

ಎಸ್‌.ಜೆ.ಮೇಟಿ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಳಕೆದಾರ ಸಹಕಾರ ಸಂಘದಲ್ಲಿ ಎಲ್ಲ ಲೂಟಿ ಮಾಡಿರುವ ಎಸ್.ಜೆ. ಮೇಟಿ ಮತ್ತು ಚುಂಚಯ್ಯ ಸಂಘವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸುತ್ತಿದ್ದಾರೆ ಇಂತವರಿಗೆ ನಿಮ್ಮ ಮತ ಹಾಕಬೇಕೆ ಎಂಬುದರ ಬಗ್ಗೆ ಯೋಚಿಸಿ ಎಂದು ಸದಸ್ಯರಿಗೆ ಸೈಟ್‌ ಹಣ ಕಳೆದುಕೊಂಡ ನೌಕರರು ಸಲಹೆ ನೀಡಿದ್ದಾರೆ.

ಏನು ಗೋಲ್ಡ್ ಸಾಲ ಕೊಡ್ತಾರೆ ಅದರಲ್ಲಿ ಒಂದು ಮೂಲಗಳ ಪ್ರಕಾರ 30 ಲಕ್ಷ ರೂಪಾಯಿ ಲೂಟಿ ಹೊಡೆದಿದ್ದಾರೆ. ಈ ಕಮಿಷನ್‌ ಹಣವನ್ನು ಬೇರೆ ಯಾವ ಡೈರೆಕ್ಟರ್‌ಗಳಿಗೂ ನೀಡಿಲ್ಲ. ನಾಲ್ಕು ಜನ ನಿರ್ದೇಶಕರು ಮಾತ್ರ ತೆಗೆದುಕೊಂಡಿರುತ್ತಾರೆ. ಈ ಮೇಟಿದು ಏನಂದ್ರೆ ಇನ್ನೊಂದು ಟ್ಯಾಕಲ್ ನಮ್ಮ ಸಮುದಾಯದ ಮತ ಪಡೆದು ನಮ್ಮ ಸಮುದಾಯಕ್ಕೆ ಮೋಸ ಮಾಡುವುದಾಗಿದೆ.

ಇದೇ ಕೃಷ್ಣಕುಮಾರ್‌ಗೆ ನಿನ್ನನ್ನು ಕೋಆಫ್‌ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿ ಮೋಸ ಮಾಡಿದ್ದರು. ಅಲ್ಲದೆ ಪತ್ತಿನ ಸಹಕಾರ ಸಂಘದಲ್ಲಿ ಸಹ ಇವರನ್ನು ನಿರ್ದೇಶಕರಾಗಿ ಕೊನೆವರೆಗೂ ತಗೋಬೇಡಿ ಅಂತ ಹೇಳಿದ್ರು. ಆಮೇಲೆ ಇದೇ ಸಮುದಾಯದ ಕೆಎಸ್ಆರ್ಟಿಸಿ ಬಳಕೆದಾರರ ಸಹಕಾರ ಸಂಘ ಪ್ರಕಾಶ್ ಮದ್ದರಕಿ ಅವರ ವೋಟನ್ನು ಸಹ ರವಿಪ್ರಕಾಶ್‌ಗೆ ಹೇಳಿ ಕಿತ್ತಾಕ್ಸಿದರು.

ಯಾಕಂದ್ರೆ ಅವರು ಬಿಎಂಟಿಸಿ ಬಳಕೆದಾರ ಸಹಕಾರ ಸಂಘದಲ್ಲಿ ಉತ್ತರ ಕರ್ನಾಟಕದ ಟೀಮ್ ಮಾಡ್ತಾವ್ರೆ ಅದಕ್ಕೆ ಅವರನ್ನು ಕಿತ್ತಾಕ್ಸಿದರು. ನಮ್ಮ ಸಮುದಾಯದ ಹಿಂದೆ ಅಧ್ಯಕ್ಷರಾಗಿದ್ದಂತ ಮೋಹನ್ ಕುಮಾರ್ ಅವರ ಹತ್ತಿರ 5 ಲಕ್ಷ ಹಣ ಪಡೆದು ಅವರ ನಿಧನದ ನಂತರ ಅವರ ಕುಟುಂಬಕ್ಕೆ ವಾಪಸ್ ಮಾಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದುವರೆಗೂ ನಮ್ಮ ಸಮುದಾಯದ ವೋಟುಗಳನ್ನು ಪಡೆದು ಸಮುದಾಯದ ಯಾವುದೇ ವ್ಯಕ್ತಿಯನ್ನು ಇದುವರೆಗೂ ನಿರ್ದೇಶಕರನ್ನಾಗಿ ಮಾಡಿಲ್ಲ. ಇವನೊಬ್ಬ ಗುಳ್ಳೇನರಿ ಹಾಗೂ ನಾನು ಉತ್ತರ ಕರ್ನಾಟಕದ ಎಂದು ಹೇಳಿ ಮತ ಪಡೆಯುವುದು. ಆಮೇಲೆ ಬಳಕೆದಾರ ಸಹಕಾರ ಸಂಘದಲ್ಲಿದ್ದ ಒಬ್ಬ ದಲಿತ ನಾಯಕ ಚಿಕ್ಕತಿಮ್ಮಯ್ಯನವರನ್ನು ವೈಯಕ್ತಿಕ ದ್ವೇಶದಿಂದ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿ ವೋಟಿಂಗ್ ಕೊಡದೆ ದಲಿತ ಎನ್ನುವ ಕಾರಣಕ್ಕೆ ಮೋಸ ಮಾಡಿದ್ದರು.

ಅಲ್ಲದೆ ಮೂರು ವರ್ಷ ಕೋರ್ಟ್‌ಗೆ ಅಲೆದಾಡಿಸಿ ಸಂಘದ ಹಣವನ್ನು ನೀರಿನಂತೆ ಖರ್ಚು ಮಾಡಿಸಿದ್ದಾರೆ. ಪತ್ತಿನ ಸಹಕಾರ ಸಂಘದಲ್ಲಿ ಚಿಕ್ಕ ಭೈರಪ್ಪ ಅವರು ಅಧ್ಯಕ್ಷರಾಗಬೇಕಾದರೆ ಅದನ್ನು ತಡೆಯಲು ಆ ಚುನಾವಣೆಯಲ್ಲಿ ಸೋತರೂ ಸಹ ಈತ ನಿರ್ದೇಶಕರ ಮನೆ ಬಾಗಿಲಿಗೆ ಹೋಗಿ ಚಿಕ್ಕಬೈರಪ್ಪನವರು ಅಧ್ಯಕ್ಷರಾಗುವುದು ಬೇಡ ಎಂದು ಹೇಳಿದ ಮಹಾನ್ ಮೋಸಗಾರ ಇವನು.

ಬಳಕೆದಾರ ಸಹಕಾರಿ ಸಂಘದಲ್ಲಿ ಕೋ ಅಪ್ ಮಾಡಿ ಒಬ್ಬೊಬ್ಬರ ಹತ್ತಿರ ಮೂರು ಲಕ್ಷ ಹಣ ಪಡೆದಿದ್ದಾರೆ. ಇದೇ ಮೇಟಿ, ಚುಂಚಯ್ಯ ಹಾಗೂ ಬಸಯ್ಯ ನಂದಿಕೋಲ್ ಕೆಎಸ್ಆರ್ಟಿಸಿ ಹೌಸಿಂಗ್ ಸೊಸೈಟಿ ಮಾಡಿ ಅಲ್ಲಿರುವ ಶೇರುಹಣದಿಂದ ಹಿಡಿದು ಎಲ್ಲ ಲೂಟಿ ಮಾಡಿ ಸೊಸೈಟಿಯನ್ನು ದಿವಾಳಿ ಮಾಡಿ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಸೊಸೈಟಿಯನ್ನು ಮುಚ್ಚಿದ್ದಾರೆ. ಆ ಸೊಸೈಟಿಯ ಸದಸ್ಯರಿಗೆ ನಾಮ ಹಾಕಿದ್ದಾರೆ.

ಸದಸ್ಯರೇ ನಿಮಗೆ ಎಲ್ಲರಿಗೂ ಈಗಾಗಲೇ ತಿಳಿದಿರುವಂತೆ ಹೌಸಿಂಗ್ ಸೊಸೈಟಿ ಸಾರಿಗೆ ಬಡಾವಣೆ ಮಾಡಿ ಗೋಮಾಳದ ಸೈಟುಗಳನ್ನು ನೀಡಿ ನಮ್ಮ ನೌಕರರಿಗೆ ಮೋಸ ಮಾಡಿರುವುದು ಹಾಗೂ ಇನ್ನು ಕೆಲವರ ಹತ್ತಿರ ದುಡ್ಡು ತೆಗೆದುಕೊಂಡು ಸೈಟ್ ನೀಡದೆ ವಂಚಿಸಿರುವುದು ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದು ಹಾಗೂ ಸಂಸ್ಥೆಯಿಂದಲೂ ಸಹ ದೂರು ದಾಖಲಾಗಿರುವುದು ನಿಮಗೆ ಗೊತ್ತಿದೆ.

ಇನ್ನು ಸೈಟ್‌ಗಾಗಿ ಹಣ ನೀಡಿದ್ದವವರು ವಾಪಸ್ ಕೇಳಿದರೆ ಧಮ್ಕಿಯಾಕುವುದು ಹಾಗೂ ಅಲ್ಲೇ ಮಾಡುವುದು ರೌಡಿಗಳನ್ನು ಬಿಟ್ಟು ಹೊಡಿಸುವುದು ಮಾಡಿಕೊಂಡು ಬರುತ್ತಿದ್ದಾನೆ. ಕಳೆದ ವರ್ಷ ಪತ್ತಿನ ಸಾಕಾರ ಸಂಘ ಚುನಾವಣೆಯಲ್ಲಿ ಇವರ ಎದುರಿಗೆ ನಿಂತಿದ್ದ ನರಸರಾಜ ಅವರಿಗೆ ರೌಡಿಗಳಿಂದ ಧಮ್ಕಿ ಹಾಕಿಸಿದ್ದಾನೆ.

ಒಬ್ಬ ಲೂಟಿಕೋರ ಇನ್ನೊಬ್ಬ ಭ್ರಷ್ಟಾಚಾರಿ ಇದೇ ಚುಂಚಯ್ಯ ಕಳೆದ ಬಾರಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದಾಗ ಕಚೇರಿ ನವೀಕರಣದ ಹೆಸರಿನಲ್ಲಿ 16 ಲಕ್ಷ ರೂ. ಲೋಟಿ ಹೊಡೆದಿದ್ದ ಆದ್ದರಿಂದ ಅಲ್ಲಿನ ಸದಸ್ಯರು ಸರಿಯಾಗಿ ಪಾಠ ಕಲಿಸಿದರು. ಇಲ್ಲೂ ಸಹ ಲೆಕ್ಕವಿಲ್ಲದಷ್ಟು ಲೂಟಿ ಹೊಡೆದಿದ್ದಾರೆ ಸರಿಯಾಗಿ ಪಾಠ ಕಲಿಸಿ ಸದಸ್ಯರೇ.

ಇವರೇ ಮುಂದಿನ ಆಡಳಿತದಲ್ಲಿ ಬಂದರೆ ಹೌಸಿಂಗ್ ಸೊಸೈಟಿ ಆದಗತಿ ಬಳಕೆದಾರ ಸೊಸೈಟಿಗೂ ಬಂದೇ ಬರುತ್ತದೆ. ಕೋಟಿಗಟ್ಟಲೆ ಇರುವ ನಮ್ಮ ನಿಮ್ಮ ಹಣವನ್ನು ಇವರು ಲೂಟಿ ಹೊಡೆದು ಸದಸ್ಯರುಗಳಿಗೆ ಮೋಸ ಮಾಡುವುದು ಶತಸಿದ್ಧ. ಆದ್ದರಿಂದ ಸದಸ್ಯರುಗಳೇ ಮತ ನೀಡಬೇಕಾದರೆ ಜಾಗರೂಕತೆಯಿಂದ ಹಾಕಿ ಬದಲಾವಣೆ ತನ್ನಿ ಇಂತಹ ಮೋಸಗಾರರ ಕೈಗೆ ಸೊಸೈಟಿಯನ್ನು ನೀಡಬೇಡಿ.

ನಿಜವಾಗಿಯೂ ನೀವು ಯಾರಿಗಾದರೂ ಮತ ನೀಡಿ ಲೂಟಿಕೋರರಿಗೆ ಮತ ನೀಡಬೇಡಿ. ಇವರು ಸಂಘದಲ್ಲಿ ಆಡಳಿತ ನಡೆಸುತ್ತಿರುವುದು ಇವರ ಸ್ವಂತ ಆಸ್ತಿಯಂತೆ. ನಾವು ಖರೀದಿಸುವ ದಿನಸಿ ಬಟ್ಟೆ ಮೊಬೈಲ್ ಚಿನ್ನ ಅನ್ನ ಪ್ರತಿಯೊಂದರಲ್ಲೂ ಕಮಿಷನ್ ಪಡೆದು ನಮ್ಮ ಹಣವನ್ನು ಲೂಟಿ ಮಾಡಿದ್ದಾರೆ.

ನಿಮಗೆ ತಿಳಿದಿರಲಿ ಸುಮಾರು 20 ವರ್ಷಗಳಿಂದ ಯಾಕೆ ಇವರು ಸೊಸೈಟಿಯಲ್ಲಿ ಇದ್ದಾರೆ ಎಂದರೆ ನಮ್ಮ ಬೆವರಿನ ಹಣ ಕಮಿಷನ್ ರೂಪದಲ್ಲಿ ತಿನ್ನಲು ನಮ್ಮ ಶಾಪ ಇವರ ಕುಟುಂಬಕ್ಕೂ ತಟ್ಟಲಿ. ನಮ್ಮ ಹಣದಿಂದ ಇವರ ಕುಟುಂಬವನ್ನು ನಡೆಸುತ್ತಿರುವುದು ಇವರ ಪಾಪದ ಕೊಡ ತುಂಬಿದೆ. ಭಗವಂತ ಇವರಿಗೆ ಶಿಕ್ಷೆ ಕೊಟ್ಟೇ ಕೊಡುತ್ತಾನೆ. ಕಾರ್ಮಿಕರ ಬೆವರಿನ ಹಣವನ್ನು ತಿಂದು ಉಳಿದವರು ಇತಿಹಾಸದಲ್ಲೇ ಇಲ್ಲ.

ನಿಮಗೆ ಗೊತ್ತಿರಲಿ ಕೆಎಸ್ಆರ್ಟಿಸಿ ಕ್ರೆಡಿಟ್ ಸಹಕಾರ ಸಂಘದಲ್ಲಿ ಯಾವ ರೀತಿ ಲೂಟಿಕೋರರನ್ನು ಮನೆಗೆ ಕಳಿಸಿದ್ದೀರಾ ಅದೇ ರೀತಿ ಇಲ್ಲಿಯೂ ಸಹ ಮಾಡಿ. ಕಳೆದ ಸಾಲಿನಲ್ಲಿ ಇವರು ಇವರ ಫ್ಯಾಮಿಲಿಯನ್ನು ಕರೆದುಕೊಂಡು ಸಂಘದ ದುಡ್ಡಿನಲ್ಲಿ ಹೈದರಾಬಾದಿಗೆ ವಿಮಾನದಲ್ಲಿ ಟ್ರಿಪ್ ಹೋಗಿದ್ದರು. ಇಡೀ ಸಂಘವನ್ನು ಇವರ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಹೇಳುವುದು ಸಂಘ ನಷ್ಟದಲ್ಲಿದೆ ಎಂದು.

ಇವರು ಪಡೆದಿರುವ ಕಮಿಷನ್ ಸಂಘಕ್ಕೆ ಬಂದಿದ್ದರೆ ಸಂಘ ಲಾಭದಲ್ಲಿ ಇರುತ್ತಿತ್ತು ಸದಸ್ಯರೇ. ಕಾಲ ಮಿಂಚಿಲ್ಲ ನಮ್ಮ ಹಣವನ್ನು ಸುರಕ್ಷಿತವಾಗಿಸೋಣ ಇಂಥ ಲೂಟಿಕೋರರನ್ನು ಸಂಘದಿಂದ ದೂರ ಮಾಡೋಣ ನೀವು ಯಾರಿಗಾದರೂ ಮತ ಚಲಾಯಿಸಿ ಇಂಥ ಲೂಟಿಕೋರರಿಗೆ ದಯವಿಟ್ಟು ಮತ ಚಲಾಯಿಸಬೇಡಿ ಎಂದು ಚಿಕ್ಕತಮ್ಮಯ್ಯ ಸೇರಿ ನೊಂದ ನೌಕರರು ಮನವಿ ಮಾಡಿದ್ದಾರೆ.

ಯಾಕೆ ಇವರೇ ಯಾವಾಗಲೂ ನಿರ್ದೇಶಕರು ಆಗುತ್ತಾರೆ ಹೊಸಬರಿಗೂ ಅವಕಾಶ ಸಿಗಲಿ ಬಿಡಿ ಎಲ್ಲರೂ ಅವಕಾಶ ಪಡೆಯಲಿ. ನೌಕರರೇ ಎಚ್ಚರವಹಿಸಿ 19.01.2025ರ ಭಾನುವಾರ ನಡೆಯಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಮತದಾನ ಪ್ರಾಮಾಣಿಕವಾಗಿ ದುಡಿಯುವರಿಗೆ ಹಾಕಿ ಇಂಥ ಭ್ರಷ್ಟ ಲೂಟಿಕೋರರಿಗಲ್ಲ ಎಂದು ಇವರಿಂದ ಮೋಸಕ್ಕೊಳಗಾಗಿರುವ ನೌಕರರು ಸದಸ್ಯರಲ್ಲಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌