Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಸಂಚಾರಿ ನಿರೀಕ್ಷಕ (TI) ವೈ. ಉಮೇಶ್ ತನ್ನ ಕೈ ಕೆಳಗಿನ ಸಿಬ್ಬಂದಿಗಳಿಗೆ ಅನಾವಶ್ಯ ಕಿರುಕುಳ ನೀಡುತ್ತಿದ್ದದ್ದು ಸೇರಿ ಹಲವು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ವಜಾಗೊಳಿಸಿ ಸಂಸ್ಥೆಯ ಶಿಸ್ತುಪಾಲನ ಅಧಿಕಾರಿಯೂ ಆಗಿರುವ ಮುಖ್ಯ ಸಂಚಾರಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇದೇ ಜ.17ರಂದು ವಜಾ ಮಾಡಿ ಆದೇಶ ಹೊರಡಿಸಿರುವ ಶಿಸ್ತುಪಾಲನ ಅಧಿಕಾರಿ ಜೆ.ಆತೋನಿ ಜಾರ್ಜ್‌ ಅವರು ಬಸ್ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ತನ್ನ ಕೈ ಕೆಳಗಿನ ಸಿಬ್ಬಂದಿಗಳಿಗೆ ಅನಾವಶ್ಯ ಕಿರುಕುಳ ನೀಡುತ್ತಿದ್ದರು.  ಅದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಹಾಯಕ ಮಕ್ಸೂದ್ ಅಲಿ ಖಾನ್ ಅವರು ಕೆಲಸಕ್ಕೆ ತಡವಾಗಿ ಬಂದ ಕಾರಣ ನೀಡಿ ಅವರ ಮೊಬೈಲನ್ನು ಕಿತ್ತುಕೊಂಡಿದ್ದರು.

ಅದಕ್ಕೆ ಸಂಬಂಧಿಸಿದಂತೆ ಖಾನ್ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ಈ ಉಮೇಶ್‌ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದ. ಈ ಸಂಬಂಧ ತಾಂತ್ರಿಕ ಸಹಾಯಕರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಮೇಲಧಿಕಾರಿಗಳು ವಿಚಾರಣೆ ನಡೆಸಿ ಅವರ ವೈಯಕ್ತಿಕ ಮೊಬೈಲ್ ಅನ್ನು ಕಸಿದುಕೊಂಡಿರುವುದು ಅಪರಾಧವೆಂದು ತೀರ್ಮಾನಿಸಿ ಆ ಪ್ರಕರಣವೂ ಸೇರಿ ಹಲವು  ಕಾರಣಗಳಿಂದ  ವಜಾ ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ಇದಿಷ್ಟೇ ಅಲ್ಲದೆ ಸಂಚಾರಿ ನಿರೀಕ್ಷಕ (TI) ವೈ.ಉಮೇಶ್ ಹಲವು ಬಾರಿ ತಮ್ಮ ಮೇಲಧಿಕಾರಿಗಳಿಗೆ ಹಲವರ ಮುಖಾಂತರ ಅನಾವಶ್ಯಕವಾಗಿ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುವಂತೆ ಪ್ರೇರೇಪಣೆ ನೀಡಿದ್ದರು ಎಂಬ ಆರೋಪವು ಕೂಡ ಇದೆ.

ಈ ತಮ್ಮ ದುರ್ಬುದ್ಧಿಯಿಂದ ಬೇರೆಯವರ ಮೊಬೈಲ್‌ನಿಂದ ತಮ್ಮ ಮೇಲೆ ಅವರು ಜಾತಿ ನಿಂದನೆ ಪದಗಳನ್ನು ಬಳಸಿ ಮೆಸೇಜ್ ಮಾಡಿರುವಂತೆ ದಾಖಲೆಯನ್ನು ತಾನೇ ಸೃಷ್ಟಿಸಿಕೊಂಡು ಬಳಿಕ ತಮಗೆ ಆಗದ ಕೆಲ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಆರೋಪ ಕೂಡ ಉಮೇಶ್ ಮೇಲೆ ಇದೆ.ʼ

ಇನ್ನು ಈ ಎಲ್ಲವುಗಳ ಬಗ್ಗೆ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (Forensic Science Laboratory report) ಮೊರೆ ಹೋದಾಗ ಅಲ್ಲಿ ಈ ಎಲ್ಲವನ್ನು ಉಮೇಶ್‌ ಅವರೆ ಮಾಡಿರುವುದು ಎಂಬ ವರದಿ ಬಂದಿದೆ. ಇನ್ನು ಮೆಸೇಜ್‌ ಕೂಡ ಈತನ ಮೊಬೈಲ್‌ನಿಂಲೇ ಮೊದಲು ಬಂದಿರುವುದು ಎಂಬ ಬಗ್ಗೆಯೂ ಸೈಬರ್ ಕ್ರೈಂ ಮುಖಾಂತರ ತಿಳಿದು ಬಂದಿದೆ.

ಹೀಗೆ ಎಲ್ಲ ಆರೋಪಗಳು ಉಮೇಶ್ ವಿರುದ್ಧ ಇರುವುದು ಜತೆಗೆ ಇವರೇ ಮಾಡಿರುವುದು ಎಂದು ಸಾಬೀತಾಗಿರುವುದರಿಂದ ಈ ಎಲ್ಲವನ್ನು ಸಹ ಗಣನೆಗೆ ತೆಗೆದುಕೊಂಡು ವಜಾ ಮಾಡಲಾಗಿದೆ.

ಇನ್ನು ಇತ್ತ ಉಮೇಶ್‌ ತಮ್ಮ ಜಾತಿಯನ್ನು ಬಂಡವಾಳ ಮಾಡಿಕೊಂಡು ತಮ್ಮ ದುರ್ಬುದ್ಧಿಯಿಂದ ಹಲವು ಅಧಿಕಾರಿಗಳನ್ನು ಹೆದರಿಸಲು ಪ್ರಯತ್ನ ಮಾಡಿರುವುದು ಇವರ ಮೇಲೆ ದಾಖಲಾಗಿರುವ ಆರು ಪ್ರಕರಣಗಳೇ ಸಾಕ್ಷಿಕರಿಸುತ್ತಿವೆ. ಇವರ ಮೇಲೆ ಪ್ರಸ್ತುತ 6 ಗಂಭೀರ ಪ್ರಕರಣಗಳು ದಾಖಲಾಗಿದ್ದು ಹಲವು ವಿಚಾರಣಾ ಹಂತದಲ್ಲೇ ಇವೆ.

ವೈ.ಉಮೇಶ್ ಸುಮಾರು 18 ವರ್ಷಗಳಿಂದ ಸಂಸ್ಥೆಯ ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದು ಕೆಲಸ ನಿರ್ವಹಿಸಿದ ಎಲ್ಲ ಸ್ಥಳಗಳಲ್ಲಿಯೂ ಜಾತಿಯನ್ನು ಬಂಡವಾಳ ಮಾಡಿಕೊಂಡು ಮೇಲಧಿಕಾರಿಗಳನ್ನು ಹೆದರಿಸಲು ಪ್ರಯತ್ನ ಪಟ್ಟಿದ್ದರು. ತಮ್ಮ ಅಧೀನ ಸಿಬ್ಬಂದಿಗಳಿಂದ ಹಣ ವಸೂಲಿ ಮಾಡುವ ಮೂಲಕ ಭ್ರಷ್ಟ ಅಧಿಕಾರಿಯಾಗಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.

ಈ ಎಲ್ಲವನ್ನು ಪರಿಗಣಿಸಿ ಪ್ರಸ್ತುತ  ಉಮೇಶ್‌ ನಮ್ಮ ಸಾರಿಗೆಯ ಯಾವುದೇ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ವಿಲ್ಲದಂತೆ ಹಾಗೂ ಸಂಸ್ಥೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂಪಡೆದು ಈ ತಕ್ಷಣದಿಂದಲೇ (ಜ.17-2025) ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ಮುಖ್ಯ ಸಂಚಾರಿ ವ್ಯವಸ್ಥಾಪಕ ಅಂತೋನಿ ಜಾರ್ಜ್ ಸಂಚಾರಿ ನಿರೀಕ್ಷಕ ಹುದ್ದೆಯಿಂದ ವಜಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!
LATEST
BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು