Vijayapatha - ವಿಜಯಪಥ > Blog > NEWS > Crime > BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಬ್ರೇಕ್ ಫೇಲ್‌ಆದ ಪರಿಣಾಮ ಚಾಲಕ ನಿಯಂತ್ರ ತಪ್ಪಿ ಡಾಬಾ ಮತ್ತು ಬೀಡಾ ಅಂಗಡಿಗೆ ಡಿಕ್ಕಿ ಹೊಡೆದ ನಾಗದೇವನಹಳ್ಳಿ ರಸ್ತೆಯಲ್ಲಿ ಜರುಗಿದೆ.
ಇಂದು ಜ.19ರ ಬೆಳಗ್ಗೆ 6.30ರ ಸುಮಾರಿಗೆ ಅವಘಡ ಸಂಭವಿಸಿದ್ದು, ಇದ್ದು ಶಿರ್ಕೆ ಸರ್ಕಲ್‌ನಿಂದ ನಾಗರಭಾವಿ ಕಡೆ ಬರುತ್ತಿದ್ದಾಗ ನಡೆದಿದೆ. ಇನ್ನು ಬೀಡಾ ಅಂಗಡಿ ಮತ್ತು ಡಾಬಾ ಸೇರಿದಂತೆ ಅಪಘಾತ ಸ್ಥಳದಲ್ಲಿ ಯಾರು ಇಲ್ಲದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಅಪಘಾತದಿಂದಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಸ್ ಅಪಘಾತಕ್ಕೆ ಈಡಾಗಲು ಬ್ರೇಕ್ ಫೇಲ್ ಆಗಿರುವುದೇ ಕಾರಣವ ಅಥವಾ ಚಾಲಕನ ಬೇಜವಾಬ್ದಾರಿಯಿಂದ ಇದು ಆಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Related
Deva
Leave a reply