ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!
ಗಬಗಬನೆ ಊಟ ಮಾಡುವುದರಿಂದ ಹಲವಾರು ತೊಂದರೆಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಿಮಗೆ ತಿಳಿಸಬಹಸುತ್ತಿದ್ದೇವೆ. ಹೌದು! ಗಬಗಬನೆ ಊಟ ತಿಂದಾಗ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು.
ತೂಕ ಹೆಚ್ಚಾಗುವುದು: ಗಬಗಬನೆ ತಿಂದಾಗ ದೇಹಕ್ಕೆ ಅಗತ್ಯವಿರುವ ಪ್ರಮಾಣದ ಆಹಾರ ಸರಿಯಾಗಿ ತಲುಪುವುದಿಲ್ಲ. ಇದರಿಂದಾಗಿ ಹೆಚ್ಚು ತಿನ್ನುವ ಪ್ರವೃತ್ತಿ ಉಂಟಾಗುತ್ತದೆ ಮತ್ತು ತೂಕ ಹೆಚ್ಚಾಗಬಹುದು.
ಮಧುಮೇಹ ಬರಬಹುದು: ಗಬಗಬನೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಇದು ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾಗಿ ಊಟ ಮಾಡುವಾಗ ಸರಿಯಾದ ಕ್ರಮದಲ್ಲಿ ಊಟ ಮಾಡಬೇಕಿದೆ.
ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು: ಗಬಗಬನೆ ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ನಾವು ಹಲವಾರು ದೈಹಿಕ ತೊಂದರೆಗೂ ಒಳಗಾಗಬಹುದು.
ಉಸಿರಾಟದ ತೊಂದರೆ: ಗಬಗಬನೆ ತಿನ್ನುವಾಗ ಆಹಾರವು ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಉಸಿರಾಟದ ತೊಂದರೆ ಉಂಟಾಗಬಹುದು. ಇದರಿಂದ ಜೀವಕ್ಕೂ ಹಾಣಿಯಾಗಬಹುದು.
ಪೌಷ್ಟಿಕಾಂಶದ ಕೊರತೆ: ಗಬಗಬನೆ ತಿಂದಾಗ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳು ದೊರೆಯುವುದಿಲ್ಲ. ಇದರಿಂದಾಗಿ ದೇಹವು ದುರ್ಬಲವಾಗಬಹುದು. ಈ ತೊಂದರೆಗಳನ್ನು ತಪ್ಪಿಸಲು, ಆಹಾರವನ್ನು ನಿಧಾನವಾಗಿ ಮತ್ತು ಚೆನ್ನಾಗಿ ಅಗಿದು ತಿನ್ನಬೇಕು. ಊಟ ಮಾಡುವಾಗ ಇತರ ಕೆಲಸಗಳಲ್ಲಿ ತೊಡಗಬಾರದು ಮತ್ತು ಆಹಾರದ ಬಗ್ಗೆ ಗಮನ ಹರಿಸಬೇಕು.