ನಿಮ್ಮ ಹೊಲಕ್ಕೆ ಹೋಗುವುದು ನಿಮ್ಮ ಹಕ್ಕು: ಅಕ್ಕ-ಪಕ್ಕ ಜಮೀನವರು ದಾರಿ ಕೊಡ್ತಿಲ್ವಾ? ಭಯಬೇಡ ಹೀಗೆ ಮಾಡಿ!

ಬೆಂಗಳೂರು: ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಹೀಗಾಗದರೆ ಏನು ಮಾಡೋದು ಎಂದು ಎಷ್ಟೋ ಜನ ರೈತರು ಕಾನೂನುನ ಅರಿವಿಲ್ಲದೆ ವ್ಯವಸಾಯ ಮಾಡುವುದನ್ನೇ ನಿಲ್ಲಿಸಿದ್ದಾರೆ.
ಆದರೆ, ನಮ್ಮ ರೈತ ಬಾಂಧವರೇ (Farmers), ಬೆಳ್ಳಂಬೆಳಗ್ಗೆ ಎದ್ದು ಹೊಲದ ಕಡೆ ಮುಖ ಮಾಡೋದೆ ನಿಮ್ಮ ಜೀವನ. ಹೊಲವೇ ದೇವರು, ಅದೇ ಅನ್ನ ನೀಡೋ ತಾಯಿ. ಹಗಲು ರಾತ್ರಿ ಬೆವರಿಳಿಸಿ ದುಡಿಯೋ ಅನ್ನದಾತನಿಗೆ ಕೆಲವೊಮ್ಮೆ ತನ್ನ ಜಮೀನಿಗೆ (Property) ಹೋಗೋಕೆ ಒಂದು ದಾರಿನೇ ಇರಲ್ಲ. ಇದು ಎಂಥಾ ವಿಪರ್ಯಾಸ ಅಲ್ವಾ? ಹಲವು ಹಳ್ಳಿಗಳಲ್ಲಿ ಇವತ್ತಿಗೂ ಈ ಸಮಸ್ಯೆ ಜೀವಂತವಾಗಿದೆ. ಸ್ವಂತ ಜಮೀನು ಇರುತ್ತೆ, ಇಲ್ಲ ಬಾಡಿಗೆಗೆ ಪಡೆದು ವ್ಯವಸಾಯ ಮಾಡ್ತಿರ್ತಾರೆ.
ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನು ಆ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಇದರಿಂದಾಗಿ ಎಷ್ಟೋ ರೈತರು ಕಂಗಾಲಾಗಿ, ವ್ಯವಸಾಯವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಹೀಗಾದರೆ ನಾವು ಏನ್ ಮಾಡೋದು? ದಾರಿ ಕೊಡಲ್ಲ ಅಂದ್ರೆ ಸುಮ್ಮನೆ ಕೂರಬೇಕಾ ಎಂದು ಯೋಚನೆ ಮಾಡಬೇಡಿ. ನೀವು ಖಂಡಿತ ಸುಮ್ಮನೆ ಕೂರಬೇಕಾಗಿಲ್ಲ. ನಿಮಗೂ ಒಂದು ಹಕ್ಕಿದೆ, ನಿಮ್ಮ ಪರವಾಗಿ ನಿಲ್ಲೋಕೆ ಕಾನೂನಿದೆ. ಈ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು.
ಏನಿದು ದಾರಿಯ ಹಕ್ಕಿನ ಕಾನೂನು?: ಭಾರತೀಯ ಕಾನೂನಿನಲ್ಲಿ “ಸರಾಗಗೊಳಿಸುವ ಕಾಯ್ದೆ, 1882” (Indian Easements Act, 1882) ಇದೆ. ಇದರಲ್ಲಿ ಜಮೀನಿನ ದಾರಿಯ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ, ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲದಿದ್ದರೆ, ಪಕ್ಕದ ಜಮೀನಿನವರು ನಿಮಗೆ ದಾರಿ ಮಾಡಿಕೊಡಲೇಬೇಕು. ಇದಕ್ಕೆ ಅವಶ್ಯಕತೆಯ ಸುಲಭಾನುಭೋಗ (Easement of Necessity) ಎನ್ನುತ್ತಾರೆ.
ಸರಳವಾಗಿ ಹೇಳಬೇಕೆಂದರೆ, ಒಂದು ಜಮೀನಿನ ಹಿಂದೆ ಇನ್ನೊಂದು ಜಮೀನು ಇದ್ದರೆ, ಮುಂದಿರುವ ಜಮೀನಿನ ಮಾಲೀಕ ಹಿಂದಿನ ಜಮೀನಿಗೆ ದಾರಿ ಬಿಟ್ಟುಕೊಡಲೇಬೇಕು. ಇದು ಅವರು ನಿಮಗೆ ಕೊಡುವ ಔದಾರ್ಯವಲ್ಲ, ಅದು ನಿಮ್ಮ ಕಾನೂನಾತ್ಮಕ ಹಕ್ಕು. ಒಂದು ವೇಳೆ ಅವರು ನಿರಾಕರಿಸಿದರೆ, ನೀವು ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬಹುದು.
ಹಿಂದೆ ದಾರಿ ಇದ್ದು ಈಗ ಮುಚ್ಚಿದ್ರೆ?: ಇನ್ನೊಂದು ಪ್ರಮುಖ ವಿಚಾರವೆಂದರೆ, ಈ ಹಿಂದೆ ನಿಮ್ಮ ಜಮೀನಿಗೆ ಹೋಗಲು ಒಂದು ದಾರಿ ಇತ್ತು, ಆದರೆ ಈಗ ಪಕ್ಕದವರು ಅದನ್ನು ಮುಚ್ಚಿಹಾಕಿದ್ದಾರೆ ಅಥವಾ ಬೇಲಿ ಹಾಕಿದ್ದಾರೆ ಎಂದಾದರೆ, ನೀವು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗಬಹುದು. ಹಿಂದಿನಿಂದಲೂ ಇದೇ ದಾರಿಯನ್ನು ಬಳಸುತ್ತಿದ್ದೆವು, ಈಗ ತೊಂದರೆಯಾಗಿದೆ ಎಂದು ನೀವು ಸಾಬೀತುಪಡಿಸಿದರೆ, ನ್ಯಾಯಾಲಯವು ದಾರಿಯನ್ನು ಪುನಃ ತೆರವುಗೊಳಿಸಲು ಆದೇಶ ನೀಡುತ್ತದೆ.
ಹೊಸ ದಾರಿ ನಿರ್ಮಿಸಿಕೊಳ್ಳುವ ಹಕ್ಕು!: ಅಷ್ಟೇ ಅಲ್ಲ, ನಿಮ್ಮ ಜಮೀನಿಗೆ ದಾರಿಯೇ ಇಲ್ಲದಿದ್ದಾಗ, ಹೊಸ ದಾರಿಯನ್ನು ನಿರ್ಮಿಸಿಕೊಳ್ಳಲು ಕೂಡ ಕಾನೂನಿನಲ್ಲಿ ಅವಕಾಶವಿದೆ. ಟೆನೆನ್ಸಿ ಆಕ್ಟ್‌ನ ಸೆಕ್ಷನ್ 251ರ ಅಡಿಯಲ್ಲಿ, ನೀವು ನಿಮ್ಮ ಕೃಷಿ ಚಟುವಟಿಕೆಗಳಿಗಾಗಿ ಹೊಸ ರಸ್ತೆಯನ್ನು ನಿರ್ಮಿಸಿಕೊಳ್ಳಲು ಅನುಮತಿ ಕೋರಬಹುದು. ಹೀಗೆ ರೈತರಿಗೆ ಕಿರಿಕಿರಿ ಮಾಡುವ ಕೆಲವರಿಂದ ರಕ್ಷಣೆ ನೀಡುವುದಕ್ಕೆ 1882 ಕಾಯ್ದೆ ಇರುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.
ಇನ್ನು ತಾಜಾ ನಿದರ್ಶನವಾಗಿ ತಿಳಿಸಬೇಕು ಎಂದರೆ, ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಹಿಳೆಯೊಬ್ಬರಿಗೆ ಅವರ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡದಿದ್ದಕ್ಕೆ ಆಕೆ 3 ವರ್ಷಗಳಿಂದ ವ್ಯವಸಾಯ ಮಾಡಲಾಗಲ್ಲಿ. ಆದರೆ ಕೆಲ ಸಂಘಟನೆಗಳ ನಾಯಕರ ಜತೆಗೂಡಿ ಆಕೆ ತಹಸೀಲ್ದಾರ್ ಹಾಗೂ ಎಸಿ ಅವರಿಗೆ ದೂರು ನೀಡಿ ಪ್ರಸ್ತುತ ಖುದ್ದು ತಹಸೀಲ್ದಾರ್ ಹಾಗೂ ಎಸಿ ಅವರೆ ಸ್ಥಳಕ್ಕೆ ಬಂದು ದಾರಿ ಬಿಡಿಸಿಕೊಟ್ಟಿದ್ದಾರೆ.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...