ಬೆಂಗಳೂರು: ಕೇಂದ್ರ ಗೃಹ ಮಂತ್ರಾಲಯದಿಂದ ಲಾಕ್‍ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರವು ಆದೇಶದಂತೆ ಸಾರಿಗೆ ಇಲಾಖೆ ಮೇ 5ರಿಂದ ಹಸಿರು ವಲಯಕ್ಕೊಳಪಡುವ 14 ಜಿಲ್ಲೆಗಳ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ವಾಹನ ನೋಂದಣಿಗೆ, ಚಾಲನಾ ಅನುಜ್ಞಾಪತ್ರ ನೀಡುವಿಕೆ, ವಾಹನಗಳ ಅರ್ಹತಾ ಪತ್ರ ನೀಡುವಿಕೆ, ತೆರಿಗೆ ಸ್ವೀಕೃತಿ ಮುಂತಾದವುಗಳನ್ನು ಪುನರಾಂಭಿಸಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಸಾರ್ವಜನಿಕರು ಸಾರಿಗೆ ಕಚೇರಿಗಳಲ್ಲಿ ಕೋವಿಡ್ -19 ರ ಮಾರ್ಗಸೂಚಿಗಳನ್ನು ಪಾಲಿಸಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಒಳಪಡುವುದು ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮೇಲಿನ ಸೇವೆಗಳನ್ನು ಪಡೆಯಬಹುದಗಿದೆ.
ಈ 14 ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ, ಡಿ.ಎಲ್. ಮತ್ತು ಕಲಿಕಾ ಲೈಸೆನ್ಸ್ ಟೆಸ್ಟ್‌ಗಾಗಿ ಈಗಾಗಲೇ ಆನ್‍ಲೈನ್‍ನಲ್ಲಿ ನೋಂದಾಯಿಸಿ ಕಾಯುತ್ತಿರುವ ಅಭ್ಯರ್ಥಿಗಳು ಆದ್ಯತೆಯ ಮೇರೆಗೆ ಪ್ರತಿದಿನ ಕೇವಲ ಶೇ. 50 ರಷ್ಟು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮೇ 7 ರಿಂದ ಇವುಗಳ ಟೆಸ್ಟ್ ಪ್ರಾರಂಭವಾಗಲಿದ್ದು, ನಿಗದಿತ ಟೆಸ್ಟ್ ನಡೆಸುವ ದಿನಾಂಕಗಳ ಸಂದೇಶಗಳನ್ನು ಅಭ್ಯರ್ಥಿಗಳ ಮೊಬೈಲ್‍ಗಳಿಗೆ ಕಳುಹಿಸಲಾಗಿದೆ.
ಹಸಿರು ವಲಯದ 14 ಜಿಲ್ಲೆಗಳಲ್ಲಿ ಇದರ ಸದುಪಯೋಗ ಪಡೆಯಲು ಕೋರಲಾಗಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿನ ಸಾರಿಗೆ ಕಚೇರಿಗಳಲ್ಲಿ ವಾಹನ್ -4 ತಂತ್ರಾಂಶದ ಅಡಿಯಲ್ಲಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ, ಅರ್ಹತಾ ಪತ್ರ ನವೀಕರಣ ಇನ್ನಿತರ ಕೆಲಸಗಳನ್ನು ಪೂರೈಸಲಾಗುತ್ತಿದೆ. ಸದರಿ ಕಚೇರಿಗಳಲ್ಲಿ ಲೈಸೆನ್ಸ್‍ಗೆ ಸಂಬಂಧಿಸಿದ ಸೇವೆಗಳ ಲಭ್ಯತೆ ಇರುವುದಿಲ್ಲವೆಂದು ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail