ಬೆಂಗಳೂರು: ರಾಜ್ಯದಲ್ಲಿ ಈವರೆಗೂ ಹಸಿರು ವಲಯದಲ್ಲಿದ್ದ ಹಾಸನ ಮತ್ತು ಕೋಲಾರ ಜಿಲ್ಲೆಯಲ್ಲಿ ಇಂದು ತಲಾ 5 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ತನ್ನ ವಲಯವನ್ನು ಬದಲಾಯಿಸಿಕೊಳ್ಳುವತ್ತ ಜಿಲ್ಲೆಗಳು ವಾಲಿವೆ.
ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಅಟ್ಟಹಾಸವನ್ನು ಮೆರೆಯುವ ಮೂಲಕ ತನ್ನ ರುದ್ರನರ್ತನವನ್ನು ಮುಂದುವರಿಸಿದೆ. ಇಂದು (ಮೇ 12) ಒಂದೇ ಸಂಜೆ ವೇಳಗೆ ರಾಜ್ಯದ 12 ಜಿಲ್ಲೆಗಳಲ್ಲಿ ಒಟ್ಟು 63 ಮಂದಿಯಲ್ಲಿ ಸೋಂಕು ಪಾಸಿಟಿವ್ ಬಂದಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅದರಲ್ಲಿ ಅತಿ ಹೆಚ್ಚು ಬಾಗಲಕೋಟೆ 15 ಮತ್ತು ದಾವಣಗೆರೆಯಲ್ಲಿ 12 ಕೊರೊನಾ ಪಾಸಿಟಿವ್ ಬಂದಿದ್ದು, ಧಾರವಾಡದಲ್ಲಿ ಒಂಬತ್ತು, ಬೆಂಗಳೂರು ನಗರದಲ್ಲಿ4, ಗದಗದಲ್ಲಿ ಮೂರು, ದಕ್ಷಿಣ ಕನ್ನಡ, ಯಾದಗಿರಿ ಮತ್ತು ಬೀದರ್‌ನಲ್ಲಿ ತಲಾ ಎರಡು ಪ್ರಕರಣಗಳು ಹಾಗೂ ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ ಮತ್ತು ಮಂಡ್ಯದಲ್ಲಿ ತಲಾ ಒಂದೊಂದು ಸೋಂಕಿತ ಪ್ರಕರಣ ಪತ್ತೆಯಾಗಿವೆ.
ರಾಜ್ಯದಲ್ಲಿ ಇಂದು ಒಂದೇದಿನ 65 ಕೋವಿಡ್-19 ಪಾಸಿಟಿವ್ ಬರುವ ಮೂಲಕ ಒಟ್ಟು 923ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಅದರಲ್ಲಿ 31 ಮಂದಿ ಮೃತಪಟ್ಟಿದ್ದು, ಇನ್ನು 426 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗುವ ಮೂಲಕ ಮನೆಗೆ ಮರಳಿದ್ದಾರೆ. ಹಾಗಾಗಿ 466 ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮೈಸೂರಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ 88 ಪ್ರಕರಣಗಳಲ್ಲಿ 84 ಮಂದಿ ಗುಣಮುಖರಾಗಿದ್ದು ಇನ್ನು ಕೇವಲ 4 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಯಾವುದೇ ಪಾಸಿಟಿವ್‌ಪ್ರಕರಣ ವರದಿಯಾಗಿಲ್ಲ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ದೇಶದಲ್ಲಿ 70,827 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 70,827 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 2.294 ಮಂದಿ ಮೃತಪಟ್ಟಿದ್ದಾರೆ.22,549 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 42,68,496 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,87,463 ಜನರು ಮೃತಪಟ್ಟಿದ್ದಾರೆ. 15,33,701 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail