ಎಲ್ಲಿದ್ದೇವೆ ಎಂದು ವಿವರ ನೀಡದ ಐವರು ಕ್ರಿಕೆಟಿಗರಿಗೆ ನೋಟಿಸ್ ನೀಡಿದ ನಾಡಾ
ನ್ಯೂಡೆಲ್ಲಿ: ತಾವು ಎಲ್ಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡದ ಐವರು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಶನಿವಾರ ನೋಟಿಸ್ ಜಾರಿ ಮಾಡಿದೆ.
ಕ್ರಿಕೆಟಿಗರಾದ ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಒಳಗೊಂಡಂತೆ ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿರುವ ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಐವರು ಈ ನೋಟಿಸ್ಗೆ ಉತ್ತರ ನೀಡಬೇಕಿದೆ.
ಈ ನೋಟಿಸ್ ಪಡೆದವರಲ್ಲಿ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನಾ ಮತ್ತು ದೀಪ್ತಿ ಶರ್ಮಾ ಅವರು ಇದ್ದಾರೆ. ಇವರೆಲ್ಲರೂ ನಾಡ ಅಡಿಯಲ್ಲಿ ಬರುವ ಒಟ್ಟು 110 ಮಂದಿ ಕ್ರೀಡಾಪಟುಗಳ ಪಟ್ಟಿಯಲ್ಲಿದ್ದಾರೆ. ಇನ್ನು ನೋಟಿಸ್ಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಆಟಗಾರರನ್ನು ಸಮರ್ಥಿಸಿಕೊಂಡಿದ್ದು ಪಾಸ್ವರ್ಡ್ ಸಮಸ್ಯೆಯಿಂದ ವಿವರ ಸಲ್ಲಿಸಲು ವಿಳಂಬವಾಗಿದೆ ಎಂದು ತಿಳಿಸಿದೆ.
ಕ್ರಿಕೆಟ್ ಆಟಗಾರರೆಲ್ಲರೂ ತಂತ್ರಜ್ಞಾನ ಬಳಕೆಯಲ್ಲಿ ಪಳಗಿದವರೇ ಆಗಿದ್ದಾರೆ ಆದರೂ ಕೆಲವರಿಗೆ ವಿವರಗಳನ್ನು ತುಂಬಲು ಆಗುತ್ತಿಲ್ಲ. ಇನ್ನು ಕೆಲವರಿಗೆ ಸಮಯ ಸಿಗುತ್ತಿಲ್ಲ. ಅದೇನೇ ಇರಲಿ ಅವರು ಪ್ರತಿನಿಧಿಸುವ ಸಂಸ್ಥೆಯೂ ಇದಕ್ಕೆ ಜವಾಬ್ದಾರಿಯಾಗಿದ್ದು, ಆಟಗಾರರ ಮಾಹಿತಿ ಒದಗಿಸಬೇಕಿತ್ತು. ಈ ಬಗ್ಗೆ ಬಿಸಿಸಿಐ ಈ ಹಿಂದೆ ಒಪ್ಪಿಕೊಂಡಿದೆ ಆದ್ದರಿಂದ ಸಂಸ್ಥೆ ಮಾಹಿತಿ ಅಪ್ಲೋಡ್ ಮಾಡಬೇಕಾಗಿತ್ತು ಎಂದು ನಾಡಾ ಮಹಾ ನಿರ್ದೇಶಕ ನವೀನ್ ಅಗರವಾಲ್ ತಿಳಿಸಿದ್ದಾರೆ.
ಇನ್ನು ಕ್ರಿಕೆಟಿಗರ ಮಾಹಿತಿ ಸಮರ್ಪಕವಾಗಿ ಅಪ್ಲೋಡ್ ಆಗದೇ ಇರುವುದಕ್ಕೆ ಬಿಸಿಸಿಐ ಈಗಾಗಲೇ ಕಾರಣ ನೀಡಿದೆ. ಸಾಫ್ಟ್ ವೇರ್ ನ ಪಾಸ್ ವರ್ಡ್ ಗೆ ಸಂಬಂಧಿಸಿದ ಸಮಸ್ಯೆಯಾಗಿತ್ತು ಈಗ ಅದನ್ನು ಸರಿಪಡಿಸಲಾಗಿದೆ ಎಂದು ವಿವರಿಸಿದೆ. ಆದರೆ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ನವೀನ್ ಹೇಳಿದ್ದಾರೆ.
ಗಂಭೀರ ತಪ್ಪು ಎಸಗಿದರೆ ಅಮಾನತು
ಮಾಹಿತಿ ನೀಡಲು ಸತತ ಮೂರು ಬಾರಿ ವಿಫಲವಾದರೆ ಉದ್ದೀಪನಾ ಮದ್ದು ತಡೆ ನಿಯಮದಡಿ (ಎಡಿಆರ್ ಬಿ) ಮೊದಲ ತಪ್ಪು ಎಂದು ಪರಿಗಣಿಸಲಾಗುತ್ತದೆ. ಜತೆಗೆ ತಪ್ಪೆಸಗಿರುವುದು ಸಾಬೀತಾದರೆ ವಿಚಾರಣೆಗಾಗಿ ಎರಡು ವರ್ಷ ಕಾಲ ಅಮಾನತು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಕುರಿತು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ಮಾತನಾಡಿದ್ದು, ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ಚಾಟ್ ಮಾಡುವವರಿಗೆ ಸಾಫ್ಟ್ ವೇರ್ ನಲ್ಲಿ ಮಾಹಿತಿ ತುಂಬಲು ಕಷ್ಟವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಆಟಗಾರರಿಗೆ ಇದು ಸಮಸ್ಯೆಯಾಗಿದ್ದರೆ ಸಂಸ್ಥೆಯೇ ಅದರ ಜವಾಬ್ದಾರಿ ತೆಗೆದುಕೊಂಡು ವಿವರವನ್ನು ತುಂಬಬೇಕಿತ್ತಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related
You Might Also Like
BMTC: ಆಧಾರ್ ಕಾರ್ಡ್ ಯಾವ ಭಾಷೆಯಲ್ಲಿದ್ದರೂ ಓಕೆ- ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣಕ್ಕೆ ಅವಕಾಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಆಧಾರ್ ಕಾರ್ಡ್ ಯಾವುದೇ ಭಾಷೆಯಲ್ಲಿರಲಿ ಅದು ಕರ್ನಾಟಕ ರಾಜ್ಯದ್ದಾಗಿದ್ದರೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಬೇಕು...
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್
ಹಾವೇರಿ: ಚೆಲಿಸುತ್ತಿದ್ದ ಬಸ್ ಹತ್ತಲು ಹೋಗಿ ವೃದ್ಧೆಯೊಬ್ಬರು ಕೆಳಗೆ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಹರಿದು ಎರಡು ಕಾಲುಗಳು ತುಂಡಾಗಿರುವ ಘಟನೆ ನಗರದ ಕೇಂದ್ರ ನಿಲ್ದಾಣದಲ್ಲಿ...
KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್ ಬಂಧನ
ಮಡಿಕೇರಿ: ನಿತ್ಯ ತಾನು ಬಸ್ ಚಲಾಯಿಸುತ್ತಿದ್ದ ಮಾರ್ಗವನ್ನು ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದಕ್ಕೆ ಸಹೋದ್ಯೋಗಿ ನಿರ್ವಾಹಕನೆ ಕಾರಣ ಕಾರಣ ಎಂದು ನಿರ್ವಾಹಕನ ಮೇಲೆ ಮುಗಿಬಿದ್ದು ಸಾರ್ವಜನಿಕ...
KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ
ಲಿಂಗಸಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ದಿನನಿತ್ಯ ಒಂದಿಲೊಂದು ರೀತಿಯಲ್ಲಿ ಕಿರುಕುಳು ನೀಡುತ್ತಿದ್ದು...
ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟರ್: ನಾಲೆಗೆ ಹಾರಿ ಆತ್ಮಹತ್ಯೆ
ಮೈಸೂರು: ಸಾಲದ ಸುಳಿಯಲ್ಲಿ ಸಿಲುಕಿ ಅದನ್ನು ತೀರಿಸಲಾಗದೆ ಮನಸ್ಸಿನಲ್ಲಿ ಭಾರಿ ನೋವು ಅನುಭವಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗದ ನಿರ್ವಾಹಕರೊಬ್ಬರು ನದಿಗೆ ಹಾರಿ...
ಎಸ್.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ
ಬೆಂಗಳೂರು: ಡಿಸೆಂಬರ್ 10ರ ಮಂಗಳವಾರ ನಸುಕಿನಲ್ಲಿ ನಿಧನರಾದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮ ಕೃಷ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ...
ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ
ಬೆಂಗಳೂರು: ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ...
ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ
ಬೆಂಗಳೂರು: ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್.ಎಂ.ಕೃಷ್ಣ (92) ಅವರು ನಿಧನರಾಗಿದ್ದಾರೆ. ಎಸ್ಎಂ ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ...
ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ
ಬೆಳಗಾವಿ: ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪವೂ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು...
KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್ ಕೊಡಿ: ಹಣ ಕಟ್ಟಿದ ಮೇಲೆ ಪಾಸ್ ನೀಡುವುದು ಸಲ್ಲ
ಬೆಂಗಳೂರು: ರಾಜಕಾರಣಿಗಳಿಗೆ ಹಾಗೂ ಸ್ವತಂತ್ರ್ಯ ಹೋರಾಟಗಾರರು ಸೇರಿದಂತೆ ಹಲವಾರು ಜನರಿಗೆ ಈಗಲೂ ಸಹ ಸಾರಿಗೆ ಸಂಸ್ಥೆ ಫ್ರೀ ಪಾಸ್ಗಳನ್ನು ನೀಡಿದೆ. ಆದರೆ ಸಂಸ್ಥೆಯಲ್ಲಿ (30) ಮೂವತ್ತಕ್ಕೂ ಹೆಚ್ಚು...
BMTC- ಅನ್ಯ ಭಾಷೆ ಆಧಾರ್ಕಾರ್ಡ್ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ
ಬೆಂಗಳೂರು: ಶಕ್ತಿ ಯೋಜನೆಯಡಿ ಅನ್ಯ ಭಾಷೆಯ ಆಧಾರ್ಕಾರ್ಡ್ನ ವಿಳಾಸವು ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರಿಗೆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸೂಚನೆ...
ಜಾಲಪ್ಪ ಓದಿದ ಶಾಲೆಯಲ್ಲೇ ಕುಡಿಯುವ ನೀರಿಗೆ ಪರದಾಟ- ಕೇಳುವವರೆ ಇಲ್ಲ ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆ
ತೂಬಗೆರೆ: ಸರ್ಕಾರಿ ಶಾಲೆ ಅಂದರೆ ಕೀಳಾಗಿ ನೋಡುವ ಮನೋಭವನೆ ಈ ಹಿಂದಿನಿಂದಲೂ ಇದೆ. ಅದೇರೀತಿ ಜಾಲಪ್ಪ ನವರಿಂದ ಹಿಡಿದು ಅನೇಕ ಘಟಾನುಘಟಿಗಳು, ಗಣ್ಯವ್ಯಕ್ತಿಗಳು ಕಲಿತ ಶಾಲೆ ಮೂಲಭೂತ...