NEWSಸಂಸ್ಕೃತಿಸಿನಿಪಥ

ಇಂದು ಚಿರಂಜೀವಿ ಸರ್ಜಾರ ಪುಣ್ಯತಿಥಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಯುವನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ಇಂದಿಗೆ ಹನ್ನೊಂದು ದಿನ.ಹಾಗಾಗಿ ಪುಣ್ಯತಿಥಿ ಕಾರ್ಯವನ್ನು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್‌ನಲ್ಲಿ ಇಂದು ಬೆಳಗ್ಗೆ 10.30ಕ್ಕೆ ನೆರವೇರಿಸಲಾಗುತ್ತಿದೆ.

ಸರ್ಜಾ ಮತ್ತು ಮೇಘನಾ ರಾಜ್ ಕುಟುಂಬ ಸದಸ್ಯರು, ಅವರ ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ನಮ್ಮ ಕುಟುಂಬದಲ್ಲಿ ಇಂಥಾದ್ದೊಂದು ಸಂದರ್ಭ ಬರುತ್ತೆ ಎಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದಿರುವ ಧ್ರುವ ಸರ್ಜಾ ಪುಣ್ಯತಿಥಿ ಕಾರ್ಯಕ್ಕೆ ಮಾಧ್ಯಮದವರಿಗೂ ಆಹ್ವಾನ ನೀಡಿದ್ದಾರೆ. ಆದರೆ ಇದು ನಮ್ಮ ಖಾಸಗಿ ಕಾರ್ಯವಾಗಿರುವುದರಿಂದ ಕ್ಯಾಮರಾಗಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಭವ್ಯ ಮಂಟಪ ನಿರ್ಮಿಸಲು ಧ್ರುವ ಸರ್ಜಾ ಈಗಾಗಲೇ ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ಸಣ್ಣದೊಂದು ಮಂಟಪ ನಿರ್ಮಿಸಿದ್ದಾರೆ. ಅದೇ ಸ್ಥಳದಲ್ಲಿ ಭವ್ಯವಾದ ಮಂಟಪವನ್ನು ಕಟ್ಟುವ ಇರಾದೆ ಧ್ರುವ ಸರ್ಜಾ ಅವರಿಗಿದೆ.

ಕೆಲವು ದಿನಗಳ ಹಿಂದಷ್ಟೆ ರಾಘವೇಂದ್ರ ರಾಜ್‌ಕುಮಾರ್ ಚಿರು ಸರ್ಜಾ ಮನೆಗೆ ಭೇಟಿ ನೀಡಿ ಧೈರ್ಯತುಂಬಿದರು. ಜತೆಗೆ ಮೇಘನಾ ರಾಜ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್