NEWSನಮ್ಮಜಿಲ್ಲೆನಮ್ಮರಾಜ್ಯ

ಇಂದು ಮಧ್ಯಾಹ್ನ ನೌಕರರ ಬ್ಯಾಂಕ್‌ ಖಾತೆಗೆ ಮುಂಗಡ ವೇತನ ಪಾವತಿಸಿದ BMTC

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಕ್ಟೋಬರ್ ಮೊದಲ ವಾರದಲ್ಲಿ ದಸರಾ ಹಬ್ಬ ಇರುವುದರಿಂದ ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ದಸರಾ ಹಬ್ಬಕ್ಕೆ ಮುಂಚಿತವಾಗಿ ವೇತನ ಮುಂಗಡವಾಗಿ ಕಾಯಂ ನೌಕರರಿಗೆ 15000 ರೂ.ಗಳನ್ನು ಹಾಗೂ ತರಬೇತಿ ನೌಕರರಿಗೆ 5000 ರೂ.ಗಳನ್ನು ಎಲ್ಲ ಸೆ.30 ರಂದು ಪಾವತಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಎಂಡಿ ಅನುಮೋದನೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎಲ್ಲ ನೌಕರರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದೆ.

ಮಂಗಳವಾರ ಅಂದರೆ ನಿನ್ನೆ ಆದೇಶ ಹೊರಡಿಸಿರುವ ಬಿಎಂಟಿಸಿ ಎಂಡಿ ರಾಮಚಂದ್ರನ್‌ ಈ ಮೊತ್ತವನ್ನು ಸೆಪ್ಟೆಂಬರ್ ವೇತನದಲ್ಲಿ ಕಡಿತಗೊಳಿಸಲು ಎಲ್ಲ ಅಧಿಕಾರಿಗಳು ಪಾಲನೆ ಮಾಡುವಂತೆ ತಿಳಿಸಿದ್ದಾರೆ.

ಇನ್ನು ವೇತನ ಮುಂಗಡವಾಗಿ ಪಾವತಿಸುವ ಸಂಬಂಧ ಸೆ.30 ರಂದು ಕೇಂದ್ರ ಕಚೇರಿಯಿಂದ ಎಲ್ಲ ವಿಭಾಗಗಳಿಗೆ ನಿಧಿ ವರ್ಗಾವಣೆ ಮಾಡಿ, ಈ ನಿಧಿಯನ್ನು ಉಪಯೋಗಿಸಿ ತಮ್ಮ ವಿಭಾಗದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ಮುಂಗಡವನ್ನು ಸೆ.30 ರಂದು ನೌಕರರ ಕುಂದು ಕೊರತೆಗೆ ಅಸ್ಪದ ನೀಡದಂತೆ NEFT/RTGS ಮುಖಾಂತರ ಪಾವತಿಸಬೇಕು ಎಂದು ತಿಳಿಸಿದ್ದರು.

ಈ ಮುಂಗಡ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ನೌಕರರು ಈ ಹಿಂದಿನ ತಿಂಗಳಲ್ಲಿ ಪಡೆದ ನಿವ್ವಳ ವೇತನ ಮತ್ತು ಸೆಪ್ಟೆಂಬರ್ ತಿಂಗಳ ಹಾಜರಾತಿಗೆ ಅನುಗುಣವಾಗಿ ಸೆಪ್ಟೆಂಬರ್-2025ರ ವೇತನದಲ್ಲಿ ಕಡ್ಡಾಯವಾಗಿ ಕಡಿತಗೊಳಿಸುವುದನ್ನು ಗಮನದಲ್ಲಿರಿಸಿಕೊಂಡು ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದರು.

ರಾಜ್ಯ ಸರ್ಕಾರದ ಸಾರಿಗೆಯ ಮೂರು ನಿಗಮಗಳಾದ KSRTC, NWKRTC ಹಾಗೂ KKRTC ನೌಕರರಿಗೆ ಸೆ.30ರಂದೆ ವೇತನ ಕೈ ಸೇರಿತ್ತು. ಅದರಲ್ಲಿ KSRTC ನೌಕರರಿಗೆ ಪೂರ್ಣ ಪ್ರಮಾಣದ ವೇತನ ಸೆ.30ರಂದೆ ಕೈ ಸೇರಿದ್ದರೆ, ಬಿಎಂಟಿಸಿ ನೌಕರರು ಆಯುಧ ಪೂಜೆಗೆ ಸಂಬಳ ಇಲ್ಲದೆ ಹಬ್ಬ ಮಾಡಬೇಕು ಎಂದು ಹೇಳಲಾಗುತ್ತಿತ್ತು. ಆದರೆ, ಅದನ್ನು ಮನಗಂಡ ಎಂಡಿ ರಾಮಚಂದ್ರನ್‌ ಸೆ.30ರಂದು ಬೆಳಗ್ಗೆ ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬಿಎಂಟಿಸಿಯ ಎಲ್ಲ ಕಾಯಂ ನೌಕರರಿಗೆ 15000 ರೂ. ಹಾಗೂ ತರಬೇತಿ ನೌಕರರಿಗೆ 5000 ರೂ.ಗಳನ್ನು ಇಂದು ಪಾವತಿ ಮಾಡಲಾಗಿದ್ದು, ಈ ನೌಕರರು ಕೂಡ ಇತರ ಮೂರು ನಿಗಮಗಳ ನೌಕರರಂತೆ ಸಂಭ್ರಮದಿಂದ ಹಬ್ಬ ಆಚಚರಣೆಯಲ್ಲಿ ತೊಡಗಿದ್ದಾರೆ.

ಇನ್ನು ಈ ವೇತನ ಸಂಬಂಧವಾಗಿ ಸಮಗ್ರವಾಗಿ ವಿಜಯಪಥ ವರದಿ ಮಾಡಿತ್ತು. ಈ ವರದಿಯಿಂದ ಎಂಡಿ ನೌಕರರಿಗೆ ಮುಂಗಡ ವೇತನ ಪಾವತಿಸಲು ಆದೇಶ ಮಾಡಿದ್ದು ನೌಕರರಿಗೆ ಖುಷಿ ನೀಡಿದೆ.

Deva
the authorDeva

Leave a Reply

error: Content is protected !!
Latest news
ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು