ಮಂಗಳೂರು: ಭಾರಿ ಮಳೆಯಿಂದ ಗುರುಪುರದ ಬಂಗ್ಲೆಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮಗೊಂಡಿದ್ದು, ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಭಾನುವಾರ ಮಧ್ಯಾಹ್ನ ಮನೆಯಲ್ಲಿದ್ದ ಐವರ ಪೈಕಿ, ಮೂವರು ಹೊರಗೆ ಓಡಿ ಬಂದಿದ್ದರು. ಮಲಗಿದ್ದ (ಅಣ್ಣ ಮತ್ತು ತಂಗಿ) ಬಾಲಕ ಸಫ್ವಾನ (16), ಬಾಲಕಿ ಸುಹಾಲಾ (10) ಇಬ್ಬರೂ ಮೃತಪಟ್ಟಿದ್ದಾರೆ. ಈ ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಕ್ಕಳನ್ನು ಪತ್ತೆ ಮಾಡಲಾಗಿದೆ.
ಇಂದು ಮುಂಜಾನೆಯಿಂದ ಸುರಿದ ಮಳೆಗೆ ಗುಡ್ಡ ಕುಸಿದಿದ್ದರಿಂದ ಮನಗಳು ನೆಲಕ್ಕುರುಳಿವೆ. ಇದರಿಂದ ಮನೆಯಲ್ಲಿದ್ದ ಇಬ್ಬರು ಮಕ್ಕಳು ಅದೇ ಮಣ್ಣಿನಡಿ ಸಿಲುಕಿದ್ದರು, ಆ ಮಕ್ಕಳ ರಕ್ಷಣೆ ಕಾರ್ಯದಲ್ಲಿ ಎನ್‌ಡಿಆರ್‌ಎಫ್ ತಂಡ ತೊಡಗಿತ್ತು, ಆದರೆ ಬದುಕುಳಿಸಲು ಸಾಧ್ಯವಾಗಲಿಲ್ಲ.