ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಲಲಾಟಮೂರ್ತಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿಂದು ಶಾಸಕ ಪ್ರೀತಂ ಜೆ. ಗೌಡ ಹಾಗೂ ಪಕ್ಷದ ಇತರೆ ಪ್ರಮುಖರರ ಸಮ್ಮುಖದಲ್ಲಿ ಅಧಿಕಾರ ಸ್ವಿಕರಿಸಿದ ಅವರು, ಅನಿರೀಕ್ಷಿತವಾಗಿ ದೊರೆತಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಹಿರಿಯರ ಹಾಗೂ ಎಲ್ಲರ ಸಲಹೆ ಸೂಚನೆಗಳಂತೆ ನಿರ್ವಹಿಸುವುದರ ಮೂಲಕ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಶಾಸಕ ಪ್ರೀತಂ ಜೆ. ಗೌಡ ಹಾಗೂ ಇತರೆ ಕಾರ್ಯಕರ್ತರು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಸದಸ್ಯರಾದ ಡಿ.ಆರ್ ಅಶೋಕ್ ಕುಮಾರ್, ಡಿ.ಕೆ ಶರತ್, ಸುಶೀಲಾ ಅಣ್ಣಪ ಹಾಗೂ ಎಚ್.ಓ. ಕೃಷ್ಣಕುಮಾರ್ ಅವರಿಗೆ ಶುಭಕೋರಿದರು.
ಮತ್ತೊಬ್ಬ ಸದಸ್ಯರಾಗಿ ಆಯ್ಕೆಯಾಗಿರುವ ಎಚ್.ಎಂ. ಯಶವಂತ ಅವರು ಕೋವಿಡ್ ಹಿನ್ನೆಲೆಯಲ್ಲಿ ಐಸೋಲೇಷನ್ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.