ಬೆಂಗಳೂರು: ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸೇರಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿನ ಹೋಟೆಲ್ ಮತ್ತು ಅಂಗಡಿಗಳನ್ನು ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ.
ವಿಶ್ವಮಾರಿ ಕೊರೊನಾ ಸೋಂಕಿನಿಂದ ಜನರು ನಿಲ್ದಾಣಗಳ ಕಡೆ ಬರುತ್ತಿಲ್ಲ. ಇದರಿಂದ ಹೋಟೆಲ್ ಮತ್ತು ಅಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಗಿದ್ದು ಬಾಡಿಗೆ ಕಟ್ಟುವಷ್ಟು ಹಣ ಬರುತ್ತಿಲ್ಲ ಇದರಿಂದ ನಷ್ಟ ಉಂಟಾಗುತ್ತಿದ್ದು, ನಮ್ಮ ಕೈ ಯಿಂದಲೇ ಬಾಡಿಗೆ ಹಣ ಭರಿಸುವಂತ್ತಾಗಿದೆ ಎಂದು ಬಾಡಿಗೆ ಪಡೆದ ಮಾಲೀಕರು ಹೇಳುತ್ತಿದ್ದಾರೆ.
ಹೀಗಾಗಿ ಬಸ್ ನಿಲ್ದಾಣಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್, ರೆಸ್ಟೋರೆಂಟ್ಗಳು ಸೇರಿ ಎಲ್ಲಾ ವಾಣಿಜ್ಯ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಗೆ ಸೇರಿದ ನಿಲ್ದಾಣಗಳಲ್ಲಿ ರಾಜ್ಯಾದ್ಯಂತ ಸುಮಾರು 12,000 ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ನಷ್ಟವನ್ನು ಉಲ್ಲೇಖಿಸಿ ಈ ಎಲ್ಲವನ್ನು ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ.
ಬಸ್ಗಳು ಸರಿಯಾಗಿ ಓಡುತ್ತಿಲ್ಲ, ಗ್ರಾಹಕರ ಸಂಖ್ಯೆಯು ತೀವ್ರವಾಗಿ ಕುಸಿದಿದೆ. ಇದರಿಂದ ನಷ್ಟವಾಗುತ್ತಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಸಾರಿಗೆ ಕ್ಷೇತ್ರದ ಸದಸ್ಯರೊಂದಿಗೆ ಸಭೆ ನಡೆಸಿದೆವು. ಆದರೆ ಅದರಿಂದ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ನಾವು ನಿತ್ಯ ನಷ್ಟ ಅನುಭವಿಸುತ್ತಿರುವುದರಿಂದ ನಮ್ಮ ಹೋಟೆಲ್ ಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಹೊಟೇಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಖಜಾಂಚಿ ಕೆ.ರಾಘವೇಂದ್ರ ತಿಳಿಸಿದ್ದಾರೆ.
ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ, ಸರ್ಕಾರಿ ಸಂಸ್ಥೆಗಳು ಬಾಡಿಗೆ ಸಂಗ್ರಹಕ್ಕೆ ವಿನಾಯಿತಿ ನೀಡಿವೆ. ಆದರೆ ಈಗ ಬಾಡಿಗೆಗೆ ಕೊಡುವಂತೆ ಒತ್ತಾಯಿಸುತ್ತಿವೆ. ಹೀಗಾಗಿ ನಮಗೆ ಬಾಡಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಇನ್ನು ಅನ್ಯ ಮಾರ್ಗವಿಲ್ಲದ ಕಾರಣದ ಅಂಗಡಿಗಳನ್ನು ಮುಚ್ಚಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಮತ್ತು ಗ್ರಾಹಕರ ಕೊರತೆಯಿಂದಾಗಿ, ಅನೇಕ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ನಷ್ಟ ಅನುಭವಿಸುತ್ತಿವೆ. ಆದ್ದರಿಂದ ನಾವು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಠೇವಣಿಯನ್ನು ಮರುಪಾವತಿಸಲು ಸರ್ಕಾರಿ ಸಂಸ್ಥೆಗಳಿಗೆ ಕೇಳಿದ್ದೇವೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.
Idella sarkarakke kelisodilla bidi