ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಎನ್.ಮಂಜುನಾಥ್ ಪ್ರಸಾದ್ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಂದು ಸಂಜೆ 5 ಗಂಟೆಯಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮೇಯರ್ ಗೌತಮ್ ಕುಮಾರ್ ಅವರ ಕೊಠಡಿಯಲ್ಲಿ ಅವರನ್ಮನು ಭೇಟಿ ಮಾಡಿ ಪಾಲಿಕೆಯ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಆಯುಕ್ತರು ವಿಶೇಷ ಆಯುಕ್ತರ ಜತೆ ಬಿಬಿಎಂಪಿ ವಾರ್ ರೂಂ ಹಾಗೂ ಇತರ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು.