ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ದೀರ್ಘಾಯುಷ್ಯ,ಉತ್ತಮ ಆರೋಗ್ಯ ನೀಡಲಿ ಹಾಗೂ ನಾಡಿಗೆ ತಮ್ಮ ಮಾರ್ಗದರ್ಶನ, ಆಶೀರ್ವಾದ ನಿರಂತರವಾಗಿರಲಿ ಎಂದು ಕಾಲಭೈರವೇಶ್ವರನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಪ್ರಾರ್ಥಿಸಿದ್ದಾರೆ.
ಟ್ವಿಟರ್ ಮೂಲಕ ಶ್ರೀಗಳಿಗೆ ಜನ್ಮದಿನದ ಶುಭಾಶಯಕೋರಿರುವ ಅವರು, ನಮ್ಮ ನೆಚ್ಚಿನ ಕನ್ನಡ ಕುಲದ, ಪುರಾತನ ನಾಥ ಪರಂಪರೆಯ, ಒಕ್ಕಲಿಗ ಸಾಮ್ರಾಜ್ಯದ ಭೈರವ ಗುರುಪೀಠದ ನಗು ಮೊಗದ ಹಸನ್ಮುಖಿ ಗುರುವರ್ಯ! ಇರುರು.
ವಿದ್ಯೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿಜ್ಞಾನಿಯಾಗಿ ಭಾರತದ ಭವಿಷ್ಯವ ಬೆಳಗಹೊರಟ ಪುತ್ರನನ್ನು ತಾಯಿ ಭಾರತೀಯು ಧರ್ಮ ರಕ್ಷಣೆಗಾಗಿ ಚುಂಚನಗಿರಿಯ ಕಾಲಭೈರವನ ಕರೆಗೆ ಕಳುಹಿಸುತ್ತಾಳೆ ಎಂದು ಸಂತಸದಿಂದ ಹೇಳಿದ್ದಾರೆ.
ಹಿಂದು ಧರ್ಮರಕ್ಷಣೆಯ, ಅನ್ನನೀಡುವ ಒಕ್ಕಲಿಗ ಕುಲದ ಏಳಿಗೆಗಾಗಿ ಹಾಗೂ ಕನ್ನಡ ಮಕ್ಕಳ ಭವಿಷ್ಯವ ಮುತ್ತಿನ ಪಲ್ಲಕ್ಕಿಯಲ್ಲಿ ಮೆರೆಸಲು ದೊಡ್ಡ ಗುರುಗಳಾದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಕೊಟ್ಟ ಜವಾಬ್ದಾರಿಯನ್ನು ಕೊಂಚವು ಲೋಪವಿಲ್ಲದೆ ನಡೆಸುತ್ತಿರುವ ಕರುನಾಡ ಕಳಶಪ್ರಾಯ, ವಿದ್ಯಾಕಳಶ, ಸರ್ವರಿಗೂ ಸನ್ನಡತೆಯ ಮಾರ್ಗದರ್ಶನ ಮಾಡುತ್ತಿರುವ ನಮ್ಮ ಗುರುವರ್ಯರಿವರು.
ಮೊಗದಲ್ಲಿ ನಿಷ್ಕಲ್ಮಷ ಭಾವ, ಮಾತಿನಲ್ಲಿ ಸನ್ನಡತೆ, ಜ್ಞಾನ ವಿಜ್ಞಾನದ ದೀವಿಗೆ, ದೂರಾಲೋಚನೆ, ಸಂಯಮ, ಸಣ್ಣ ನಗು, ಸ್ಪೂರ್ತಿಯ ಚಿಂತನೆ, ಕರುಣೆಯ ಸಾಗರ, ದೈವಾಚರಣೆ; ಇವೆಲ್ಲದರ ಸಂಗಮದಂತಿರುವ ನೀವು, ನೆಮ್ಮದಿಯ ನೀಡುವ ತಂಪಾದ ಧರ್ಮದ ಹೊಂಗೆಯ ಮರದಂತಿದ್ದು ಹುಲುಮಾನವರಿಗೆ ನೆರಳು ನೀಡುತ್ತಿರುವ, ನಿಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ದೇಶದ ಮತ್ತು ಸರ್ವ ಕನ್ನಡಿಗರ ಮೇಲಿರಲಿ ಎಂದು ಈ ಸಂಧರ್ಭದಲ್ಲಿ ಮನ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ಸ್ವಾಮೀಜಿ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಮತ್ತೊಮ್ಮೆ ಕೋರಿದ್ದಾರೆ.