ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು. 30 ಮತ್ತು 31ರಂದು ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ ) ಬರೆಯಲು ಕೊರೊನಾ ಸೋಂಕು ಪೀಡಿತ ಅಭ್ಯರ್ಥಿ ಅಥವಾ ಕ್ವಾರಂಟೈನ್‌ನಲ್ಲಿ ಇರುವ ಅಭ್ಯರ್ಥಿಗೂ ಅವಕಾಶ ಇದೆ.
ಕೊರೊನಾ ಪೀಡಿತರು ಪರೀಕ್ಷೆ ಬರೆಯುವ ಸಲುವಾಗಿಯೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ತಿಳಿಸಿದ್ದು ಇದರಿಂದ ಸಿಇಟಿಗೆ ಸಜ್ಜಾಗಿರುವ ಸೋಂಕಿತ ಅಭ್ಯರ್ಥಿಗಳಿಗೆ ಖುಷಿ ತಂದಿದೆ.
ನಿಯಂತ್ರಣ ವಲಯದಿಂದ ಬರುವ ಸೋಂಕು ಪೀಡಿತರ ನೇರ, ಪ್ರಾಥಮಿಕ ಸಂಪರ್ಕ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಬೇಕು. ಜತೆಗೆ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿದೆ.
ಕೊರೊನಾ ದೃಢಪಟ್ಟ ಅಭ್ಯರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು ಜತೆಗೆ ಪರೀಕ್ಷೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.