ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಕೇಕೆ ಮುಂದುವರಿದಿದ್ದು ಜೆ.ಕೆ. ಟೈಯರ್ ಕಂಪನಿಯ ನೂರಾರು ನೌಕರರನ್ನು ಸುತ್ತಿಕೊಂಡಿದೆ.
ಈ ಬಗ್ಗೆ ತಾಲೂಕು ಆಡಳಿತ ದೃಢಪಡಿಸಿದ್ದು, ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ಸಾಮೂಲಕ ತಪಾಸಣೆ ನಡೆಸಲು ಮುಂದಾಗಿದೆ. ಅಲ್ಲದೆ ಎಲ್ಲಾ ಸಿಬ್ಬಂದಿಯನ್ನು ಕೋವಿಡ್ ಟೆಸ್ಟ್ ಬಳಿಕ ನೆಗೆಟಿವ್ ವರದಿ ಬಂದವರನ್ನು ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಮತ್ತು ಸೋಂಕು ದೃಢಪಟ್ಟವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.