ಬೆಂಗಳೂರು: ಹೆಣಗಳ ಮೇಲೆ ಹಣ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಇದು ನಾಚಿಕೆಗೇಡಿನ ಕೃತ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹಂಚಿಕೆ ಜತೆಗೆ ಭ್ರಷ್ಟಾಚಾರ ವನ್ನು ಬಿತ್ತಿದ್ದೀರಿ ಇದೇನ ನೀವು ಸೋಂಕಿತರನ್ನು ನೋಡಿಕೊಳ್ಳುತ್ತಿರುವ ಪರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಲೆಕ್ಕ ಕೊಡಿ ಎಂದು ಕೇಳಿದ್ದಾರೆ ನಾನು ಉತ್ತರ ಕೊಡಿ ಎಂದು ಕೇಳಿದ್ದೇನೆ. 2000 ಕೋಟಿ ರೂ ಭ್ರಷ್ಟಾಚಾರ ವೆಸಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದು, ಅದಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಗಲವಿದೆ ಎಂದು ಸಿದ್ದು ಆರೊಪವನ್ನು ಬೆಂಬಲಿಸಿದರು.
ಇನ್ನು ಸಿಎಂ ಯಡಿಯೂರಪ್ಪ ಅವರು ಸಹಕಾರ ಕೊಡಿ ಎಂದು ಕೇಳಿದ್ದಾರೆ ಅದಕ್ಕೆ ನಾವು ಯಾವುದಕ್ಕೆ ಸಹಕಾರ ಕೊಟ್ಟಿಲ್ಲ ಹೇಳಿ ಎಂದು ಕೊರೊನಾ ಬಂದ ಈ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಪಕ್ಷಭೇದವಿಲ್ಲ ಸಹಕಾರ ನೀಡುತ್ತಿದ್ದೇವೆ ಆದರೆ ನೀವು ನಮ್ಮ ಸಲಹೆ ಗಳನ್ನು ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
9 ಜನ ಬೆಂಗಳೂರಿನಲ್ಲಿ ಇರುವ ಸಚಿವರು ಏನು ಮಾಡುತ್ತಿದ್ದೀರಿ ಒಂದೇಒಂದು ಆಸ್ಪತ್ರೆಗೆ ಹೋಗಿ ಕೊರೊನಾ ಪೀಡಿತರ ಸಮಸ್ಯೆ ಆಲಿಸಿಲ್ಲ. ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸಿಲ್ಲ ಇದೇನಾ ನೀವು ಕೊರೊನಾ ವಿರುದ್ಧ ಮಾಡುತ್ತಿರುವ ಕೆಲಸ ಎಂದು ಕಿಡಿಕಾರಿದ್ದಾರೆ.