CrimeNEWSನಮ್ಮಜಿಲ್ಲೆ

ಮಗಳನ್ನು ಕೊಲ್ಲಲು ಹೋದ ತಂದೆಯೇ ಸತ್ತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಲು ಬಂದ ತಂದೆಯನ್ನೇ ತನಗೆ ಹರಿವಿಲ್ಲದಂತೆ 15 ವರ್ಷದ ಮಗಳು ಕೊಂದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಬನ್ನೇರುಘಟ್ಟ ರಸ್ತೆಯ ಮಂತ್ರಿ ಪ್ಯಾರಡೈಸ್ ಅಪಾರ್ಟ್ಮೆಂಟ್ ನಿವಾಸಿ ಸಪ್ತಕ್ ಬ್ಯಾನರ್ಜಿ (46) ಕೊಲೆಯಾದವ.

ತನ್ನಮ್ಮ ಎರಡನೇ ಮಗುವಿಗೆ ಜನ್ಮ ನೀಡುವ ವೇಳೆ ಮೃತಪಟ್ಟಿದ್ದು, ಬಳಿಕ ತಂದೆಯೇ ನಮ್ಮ ಜವಾಬ್ದಾರಿ ಹೊತ್ತಿದ್ದರು. ಈ ನಡುವೆ ಅವರು ಕೆಲಸವನ್ನು ಕಳೆದುಕೊಂಡು ಮನೆಯಲ್ಲೇ ಇರುತ್ತಿದ್ದರು. ನಮ್ಮ ಮನೆಯಿಂದ ಬರುತ್ತಿದ್ದ 30 ಸಾವಿರ ರೂ. ಬಾಡಿಯಿಂದ ಜೀವನ ನಡೆಯುತ್ತಿತ್ತು.

ಈ ನಡುವೆ ಅಪ್ಪ ನಮ್ಮನ್ನು ಸಂಬಂಧಿಕರೊಂದಿಗೆ ಸೇರಲು ಬಿಡುತ್ತಿರಲಿಲ್ಲ. ಜತೆಗೆ ಓದುವುದನ್ನು ಬಿಡಿಸಿದ್ದರು. ಆದರೂ ನಾನು ಓದುವ ಹಂಬಲದಿಂದ ಮನೆಯಲ್ಲೇ ಓದಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡು ಅಪ್ಪ ಮಲಗಿದ ಸಮಯದಲ್ಲಿ ಅಂದರೆ ತಡ ರಾತ್ರಿ ಎದ್ದು ಓದಿಕೊಳ್ಳುತ್ತಿದ್ದೆ.

ಅದರಂತೆ ನಿನ್ನೆ ರಾತ್ರಿ ಓದಿಕೊಳ್ಳುತ್ತಿದ್ದಾಗ ಎಚ್ಚರಗೊಂಡ ಅಪ್ಪ ಬ್ಯಾನರ್ಜಿ, ತನ್ನಿಚ್ಛೆಗೆ ವಿರುದ್ಧವಾಗಿ ಓದಲು ಮುಂದಾಗುತ್ತಿದ್ದಾಳೆ  ಎಂದು ಮಧ್ಯರಾತ್ರಿ ಪಿಯಾನೋ ನುಡಿಸಲು ಆರಂಭಿಸಿದರು. ಆ ವೇಳೆ  ನಾನು ಪಿಯಾನೋ ನುಡಿಸುವುದನ್ನು ನಿಲ್ಲಿಸುವಂತೆ ತಿಳಿಸಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಕೆರಳಿ ಕತ್ತರಿ ತೆಗೆದುಕೊಂಡು ನನ್ನನ್ನು ಹತ್ಯೆ ಮಾಡಲು ಯತ್ನಿಸಿದರು. ಆಗ ಆ ಕತ್ತರಿಯನ್ನು ಕಿತ್ತುಕೊಳ್ಳುವ  ವೇಳೆ ತಂದೆಯ ಎದೆಗೆ ತಾಕಿತು. ಇದರಿಂದ ಕುಸಿದು ಬಿದ್ದ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಬರಿಗೊಂಡ ನಾನು ನೆರೆಹೊರೆಯವರನ್ನು ಕರೆದೆ ಎಂದು ನಡೆದ ಘಟನೆಯನ್ನು ಪೊಲೀಸರಿಗೆ ಬಾಲಿಕಿ ತಿಳಿಸಿದ್ದಾಳೆ.

ಮೈಕೋಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿಯನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

1 Comment

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ