ಬೆಂಗಳೂರು: ರಾಜ್ಯಾದ್ಯಂತ ಸಂಡೆ ಲಾಕ್ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯ ಸ್ತಬ್ಧವಾಗಿದೆ.
ಕೊರೊನಾ ಸೋಂಕು ಶರವೇಗದಲ್ಲಿ ರಾಜ್ಯದ ಜನರನ್ನು ಸುತ್ತುವರಿಯುತ್ತಿರುವುದರಿಂದ ಅದಕ್ಕೆ ಕಡಿವಾಣ ಹಾಕಲು ಘೋಷಣೆ ಮಾಡಲಾಗಿರುವ ಸಂಡೇ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇನ್ನು ಸೋಮವಾರ ಬೆಳಗ್ಗೆ 5 ಗಂಟೆಗಳ ವರೆಗೆ ಸತತ 33 ಗಂಟಗಳು ಈ ಕಠಿಣ ಲಾಕ್ಡೌನ್ ಜಾರಿಯಲ್ಲಿರಲಿದ್ದು, ರಾಜಧಾನಿಯ ಜನರು ಸಹಕರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೋರಿಕೊಂಡಿದ್ದಾರೆ.
ಇಂದು ಇಡೀ ದಿನ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕೇವಲ ಅಗತ್ಯ ವಸ್ತುಗಳ ಮಾರಾಟ, ಸಾಗಾಟ, ತುರ್ತು ಸೇವೆ ಹೊರತುಪಡಿಸಿದರೆ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಅಗಲಿವೆ.
ಬಿಎಂಟಿಸಿ, ಕೆಎಸ್ಆರ್’ಸಿ ಸೇರಿ ಆಟೋ, ಟ್ಯಾಕ್ಸಿಗಳ ಸಂಚಾರ ಇರುವುದಿಲ್ಲ. ಹೋಟೆಲ್ಗಳಲ್ಲಿ ಕೇವಲ ಪಾರ್ಸಲ್ ಸೇವೆ ಮತ್ತು ಆಪ್ ಆಧಾರಿತ ಆಹಾರ ಪೂರೈಕೆ ಸೇವೆ ಇರಲಿದೆ. ಹೀಗಾಗಿ ನಾಗರಿಕರು ಅನಗತ್ಯವಾಗಿ ರಸ್ತೆಗೆ ಇಳಿಯದೆ ದಾರಿಯಲ್ಲಿ ಬರುವ ವಿಶ್ವಮಾರಿ ಕೊರೊನಾವನ್ನು ದಾರಿಯಲ್ಲೇ ಓಡಿಸಬೇಕಿದೆ.