NEWSನಮ್ಮಜಿಲ್ಲೆನಮ್ಮರಾಜ್ಯ

ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಸರ್ಕಾರಿ ಬಸ್‌ಗಳ ಬಿಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ನಿತ್ಯ ಶಾಲಾ-ಕಾಲೇಜುಗಳಿಗೆ ಹಳ್ಳಿ ಹಳ್ಳಿಯಿಂದ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕ ಎರಡು ಕಡೆ ಪ್ರತಿಭಟನೆ ನಡೆಸಿತು.

ಬೀದರ್‌ನ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ಬಸ್ ಘಟಕದ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ವಿವಿಧ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದರ ಪರಿಣಾಮವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಗಂಭೀರ ಅಡ್ಡಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಘಟಕಗಳಿಗೆ ಮುತ್ತಿಗೆ ಹಾಕಿ ಭಾರಿ ಹೋರಾಟ ನಡೆಸಲಾಗುವುದು ಎಂದುಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಬೇಡಿಕೆಗಳೇನು?: ಗ್ರಾಮೀಣ ಪ್ರದೇಶಗಳಿಂದ ಬೀದರ್ ನಗರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‍ಗಳನ್ನು ಹೆಚ್ಚಿಸಬೇಕು. ಬೀದರ್‌ನಿಂದ ಹುಮನಾಬಾದ್‍ಗೆ ತೆರಳುವ ಪ್ರತಿಯೊಂದು ತಡೆರಹಿತ ಬಸ್‍ಗಳು ಕೋಳಾರ (ಕೆ) ಗ್ರಾಮದ ಮೇಲೆ ಹೋಗಿ ನಿಲುಗಡೆ ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು.

ನೌಬಾದ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‍ಗಳು ಪ್ರಥಮ ದರ್ಜೆ ಕಾಲೇಜು ಎದುರು ನಿಲುಗಡೆ ಮಾಡಬೇಕು. ನಿಜಾಂಪೂರ ಗ್ರಾಮಕ್ಕೆ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು. ಔರಾದ ಸಿರ್ಸಿ (ಎ) ಗ್ರಾಮಕ್ಕೆ ಹೊಸ ಬಸ್ ವ್ಯವಸ್ಥೆ ಒದಗಿಸಬೇಕು.

ಹುಮನಾಬಾದ್ ಹಾಗೂ ಮನ್ನಾವಿಖೇಳ್ಳಿಗೆ ತೆರಳುವ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಚಿಲ್ಲರ್ಗಿ, ಮರಕಲ್ ಹಾಗೂ ಬೀದರ್ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಬಸ್‍ಗಳ ಹಾಕಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.

ಎಬಿವಿಪಿ ನಗರ ಕಾರ್ಯದರ್ಶಿ ಸದಾನಂದ ಮೇತ್ರೆ, ಸಹ ಕಾರ್ಯದರ್ಶಿಗಳಾದ ಲಿಂಗದೇವ ಗುತ್ತಿ, ಅಭಿಷೇಕ ರಾಂಪೂರೆ, ಹೋರಾಟ ಪ್ರಮುಖ ಅಮರ, ತಾಲೂಕಾ ಸಂಚಾಲಕ ನೀತಿನ್ ಮೂಲೆಗೆ, ಮಹಾಂತೇಶ, ರವಿ ಕಿರಣ, ವೀರಯ್ಯ ಸ್ವಾಮಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Megha
the authorMegha

1 Comment

  • ಗ್ರಾಮೀಣ ವಿದ್ಯಾರ್ಥಿಗಳು ಬಸ್‌ಗಳ ಕೊರತೆಯಿಂದ ಎದುರಿಸುತ್ತಿರುವ ತೊಂದರೆಗಳನ್ನು ಲೇಖನ ಚೆನ್ನಾಗಿ ಎತ್ತಿ ಹಿಡಿದಿದೆ. ಪ್ರಯಾಣ ಸೌಕರ್ಯದಲ್ಲಿ ಆಗುವ ವಿಳಂಬ ನೇರವಾಗಿ ವಿದ್ಯಾಭ್ಯಾಸಕ್ಕೂ ಪರಿಣಾಮ ಬೀರುವುದರಿಂದ, ಸಾರಿಗೆ ಇಲಾಖೆ ಈ ವಿಷಯವನ್ನು ತುರ್ತುವಾಗಿ ಪರಿಗಣಿಸಬೇಕು. ಸ್ಥಳೀಯ ಸಮುದಾಯದಿಂದಲೂ ನಿಯಮಿತ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದರೆ ದೀರ್ಘಕಾಲೀನ ಪರಿಹಾರ ಕಂಡುಹಿಡಿಯಲು ಸಹಾಯಕವಾಗಬಹುದು.

Leave a Reply

error: Content is protected !!
Latest news
BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನ... ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ... ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ ಮಿಲನ ಕಳನಾಯಕ ಖ್ಯಾತಿಯ, ಹಿಟ್ಲರ್ ಕಲ್ಯಾಣ’ ಧಾರವಾಹಿಯ ಹೀರೋ ದಿಲೀಪ್ ರಾಜ್ ಇನ್ನಿಲ್ಲ KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..?