NEWSನಮ್ಮರಾಜ್ಯ

KSRTC: ಜ.1ರಿಂದ 31ರವರೆಗೂ ಅಂತರ ನಿಗಮ ವರ್ಗಾವಣೆಗೆ ಆನ್ಲೈನ್ ಮೂಲಕ ನೌಕರರು ಅರ್ಜಿ ಸಲ್ಲಿಸಿ- ಸದುಪಯೋಗಪಡೆಯಿರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಈ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಜ.1ರ ಬಳಗ್ಗೆ 11ಗಂಟೆಯಲ್ಲಿ ಆರಂಭವಾಗಲಿದೆ ಎಂದು KSRTC ವ್ಯವಸ್ಥಾನಳ ನಿರ್ದೇಶಕ ಅಕ್ರಮ್‌ಪಾಷ ತಿಳಿಸಿದ್ದಾರೆ.

ಈ ಸಂಬಂಧ ಇಂದು ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು/ ಹುಬ್ಬಳ್ಳಿ/ ಕಲಬುರಗಿಯ ಎಲ್ಲ ಇಲಾಖಾ ಮುಖ್ಯಸ್ಥರು, ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಎಲ್ಲ ಪ್ರಾಂಶುಪಾಲರು ಹಾಗೂ ಎಲ್ಲ ಕಾರ್ಯ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.

ಇದು 2026ನೇ ಸಾಲಿನ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಅಂದರೆ 2026ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 01-01-2026ರ ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾಗಲಿದ್ದು 31-01-2026 ರ ಸಂಜೆ 5:30 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಸಾಮಾನ್ಯ (ಪತಿ-ಪತ್ನಿ/ ಅಂಗವಿಕಲ/ ತೀವ್ರತರಹದ ಅನಾರೋಗ್ಯ ಒಳಗೊಂಡಂತೆ) ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೀಗಾಗಿ ನೌಕರರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ನೌಕರರ ಗಮನಕ್ಕೆ ತರಲು ಹಾಗೂ ಕೇಂದ್ರ ಕಚೇರಿ/ ವಿಭಾಗ/ ಘಟಕದ/ ತರಬೇತಿ ಕೇಂದ್ರ/ ಕಾರ್ಯಾಗಾರಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಕೋರಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ ಯೋಜನೆಯಲ್ಲಿ  ಯಾವುದೇ ಗೋಲ್‌ಮಾಲ್ ಆಗಿಲ್ಲ:  ಡೇಟಾ ಸಹಿತ ಮಹಿಳಾ ಇಲಾಖೆ  ಸ್ಪಷ್ಟನೆ  ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಅನುಚೇತ್ ಅಧಿಕಾರ ಸ್ವೀಕಾರ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಮಾಡಿಸಲು ಅನ್ನದಾತರಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಕರೆ ಜೂ.27ರಂದು ನಾಡಪ್ರಭು ಕೆಂಪೇಗೌಡರ ಮೂಲಸ್ಥಳ ಆವತಿಯಿಂದ ಜ್ಯೋತಿ ರಥ ಯಾತ್ರೆ ಆರಂಭ KSRTC- BMTC ನೂತನ ಎಂಡಿಗಳ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆಗೆ ಸಭೆ ಕರೆಯಲು ಒತ್ತಾಯ ​NWKRTC ಸಂಸ್ಥೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ದರ್ಜೆ-2ರ ಅಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಕರೆ BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ... KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು ಅರ್ಹ ದಲಿತರು, ಹಿಂದುಳಿದವರಿಗೆ ಯೋಜನೆ ಸೌಲಭ್ಯ ತಲುಪಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಅನುರಾಧ ತಾಕೀತು