ಬೆಳ್ಳಾರೆ: ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರರೊಬ್ಬರು ಬೈಕ್ ಸಹಿತವಾಗಿ ಸಜೀವ ದಹಿಸಿದ ಘಟನೆ ಪಂಜ ವ್ಯಾಪ್ತಿಯ ನಿಂತಿಕಲ್ಲಿನ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ನಡೆದಿರುವ ಈ ಅವಘಡದಿಂದ ಜನ ಬೆಚ್ಚಿ ಬಿದ್ದಾರೆ.
ಮಂಡಕೋಲು ನಿವಾಸಿ ಮೈತ್ತಡ್ಕ ತಿಮ್ಮೇಗೌಡ ಎಂಬುವರ ಪುತ್ರ ಉಮೇಶ್ ಸಜೀವ ದಹನವಾದ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಉಮೇಶ್ ಮುಂಜಾನೆ 5.45ರ ಸುಮಾರಿಗೆ ನಿಂತಿಕಲ್ಲು ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆಗೆ ವಿದ್ಯುತ್ ಕಂಬದ ಇನ್ಸುಲೇಟರ್ ನಿಂದ ತಪ್ಪಿ ರಸ್ತೆಗೆ ಬಿದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಭೀಕರ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸವಾರ ಮತ್ತು ವಾಹನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail